/newsfirstlive-kannada/media/post_attachments/wp-content/uploads/2024/08/Team-India-2.jpg)
2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಇನ್ನೇನು ಕೇವಲ ಒಂದೂವರೆ ತಿಂಗಳು ಮಾತ್ರ ಬಾಕಿ ಇದೆ. ಮುಂದಿನ ತಿಂಗಳು ಫೆಬ್ರವರಿಯಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡಲಿದೆ. ಟೀಮ್ ಇಂಡಿಯಾ ಕೂಡ ಈ ಟೂರ್ನಿಯಲ್ಲಿ ಭಾಗಿಯಾಗಲಿದೆ.
ಇನ್ನು, ಟೀಮ್ ಇಂಡಿಯಾ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಕಪ್ ಗೆಲ್ಲೋ ಫೇವರೇಟ್ ಟೀಮ್ಗಳ ಪೈಕಿ ಭಾರತ ತಂಡವು ಒಂದು. ಚಾಂಪಿಯನ್ಸ್ ಟ್ರೋಫಿಗೆ ಮುನ್ನವೇ ಟೀಮ್ ಇಂಡಿಯಾಗೆ ಶಾಕಿಂಗ್ ನ್ಯೂಸ್ ಒಂದಿದೆ. ಆಸ್ಟ್ರೇಲಿಯಾ ಪ್ರವಾಸದ ವೇಳೆ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿದ್ದ ಜಸ್ಪ್ರಿತ್ ಬುಮ್ರಾ ಗಾಯದ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.
ಬುಮ್ರಾಗೆ ಗಂಭೀರ ಗಾಯ
ಇತ್ತೀಚಿಗೆ ಬಾರ್ಡರ್ ಗವಾಸ್ಕರ್ ಸರಣಿಯ 5ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುವ ವೇಳೆ ಜಸ್ಪ್ರಿತ್ ಬುಮ್ರಾ ಮೈದಾನದಿಂದ ಹೊರ ನಡೆದರು. ಮೈದಾನದಿಂದ ಹೊರ ಹೋಗುತ್ತಿದ್ದಂತೆ ಬುಮ್ರಾ ಬೌಲಿಂಗ್ ಕೋಚ್ ಹಾಗೂ ಸಿಬ್ಬಂದಿ ಜತೆಗೆ ಆಸ್ಪತ್ರೆಗೆ ತೆರಳುತ್ತಿದ್ದರು. ಈಗ ಇವರ ಗಾಯದ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದ್ದು, ಇವರು 3 ತಿಂಗಳು ರೆಸ್ಟ್ ಮಾಡಬೇಕಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು, ಬುಮ್ರಾ ಬೆನ್ನು ನೋವಿಗೆ ಆಸ್ಟ್ರೇಲಿಯಾದಲ್ಲಿ ಚಿಕಿತ್ಸೆ ಪಡೆಯಬಹುದು. ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19ನೇ ತಾರೀಕಿನಿಂದ ಶುರುವಾಗಲಿದೆ. ಇವರು 3 ತಿಂಗಳು ರೆಸ್ಟ್ ಮಾಡಬೇಕಾದ ಕಾರಣ ಟೂರ್ನಿ ಆಡುವುದು ಡೌಟ್.
ಕೈ ಕೊಟ್ಟ ಬುಮ್ರಾ, ಶಮಿ ಭರ್ಜರಿ ಕಮ್ಬ್ಯಾಕ್!
ಟೀಮ್ ಇಂಡಿಯಾಗೆ ಬುಮ್ರಾ ಕೈ ಕೊಟ್ಟಿದ್ದಾರೆ. ಇವರ ಬದಲಿಗೆ ಟೀಮ್ ಇಂಡಿಯಾಗೆ ಸಮರ್ಥ ಬೌಲರ್ ಬೇಕಾಗಿದೆ. ಹೀಗಾಗಿ ಬಿಸಿಸಿಐ ಸೆಲೆಕ್ಷನ್ ಕಮಿಟಿ ಮೊಹಮ್ಮದ್ ಶಮಿ ಕಮ್ಬ್ಯಾಕ್ಗೆ ಎದುರು ನೋಡುತ್ತಿದೆ. ಸದ್ಯ ದೇಶೀಯ ಟೂರ್ನಿಯಲ್ಲಿ ಬ್ಯುಸಿ ಆಗಿರೋ ಮೊಹಮ್ಮದ್ ಶಮಿ ಸಂಪೂರ್ಣ ಫಿಟ್ ಆದಲ್ಲಿ ಇವರು ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾಗೆ ಆಯ್ಕೆಯಾಗಲಿದ್ದಾರೆ.
ಇದನ್ನೂ ಓದಿ:ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ; ಟೀಮ್ ಇಂಡಿಯಾದಿಂದ ಹೊರಬಿದ್ದ ಸ್ಟಾರ್ ವೇಗಿ ಬುಮ್ರಾ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ