/newsfirstlive-kannada/media/post_attachments/wp-content/uploads/2024/12/NITISH-KUMAR-REDDY-1.jpg)
ಇಂಗ್ಲೆಂಡ್ ವಿರುದ್ಧದ ಟೆಸ್ಟ್ (IND vs ENG test) ಸರಣಿಯಿಂದ ಹೊರಗುಳಿದ ಬೆನ್ನಲ್ಲೇ ಟೀಮ್ ಇಂಡಿಯಾ ಯುವ ಆಟಗಾರ ನಿತೀಶ್ ಕುಮಾರ್ ರೆಡ್ಡಿ (Nitish Reddy)ಗೆ ಕಾನೂನು ಸಂಕಷ್ಟ ಎದುರಾಗಿದೆ. 5 ಕೋಟಿ ರೂಪಾಯಿ ಪಾವತಿಸದಿದ್ದಕ್ಕಾಗಿ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಕಂಪನಿ ಸ್ಕ್ವೇರ್ ದಿ ಒನ್ (Square the one) ನೋಟಿಸ್ ಜಾರಿ ಮಾಡಿದೆ.
ಕಂಪನಿ ಜೊತೆ ಇದ್ದಕ್ಕಿದ್ದಂತೆ ಸಂಬಂಧ ಕಡಿದುಕೊಂಡಿರುವ ವಿಚಾರಕ್ಕೆ ನೋಟಿಸ್ ನೀಡಲಾಗಿದೆ. ನಿತೀಶ್ ಕುಮಾರ್ ರೆಡ್ಡಿ ಅವರು 2021 ರಿಂದ 2024-25 ರ ಬಾರ್ಡರ್-ಗವಾಸ್ಕರ್ ಟ್ರೋಫಿಯವರೆಗೆ ಕಂಪನಿ ಜೊತೆ ಸಂಬಂಧ ಹೊಂದಿದ್ದರು. ನಿತೀಶ್ ರೆಡ್ಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯಲು ಸ್ಕ್ವೇರ್ ದಿ ಒನ್ ಪ್ರಮುಖ ಪಾತ್ರವಹಿಸಿದೆ. ಭಾರತ ಆಸ್ಟ್ರೇಲಿಯಾ ಪ್ರವಾಸದಲ್ಲಿರುವಾಗ ನಿತೀಶ್ ರೆಡ್ಡಿ ಏಕಪಕ್ಷೀಯವಾಗಿ ಪಾಲುದಾರಿಕೆಯನ್ನು ಕ್ಲೋಸ್ ಮಾಡಿ, ಟೀಂ ಇಂಡಿಯಾದ ಆಟಗಾರರೊಬ್ಬರ ಮ್ಯಾನೇಜರ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಆ ಸಂಸ್ಥೆ ಆರೋಪಿಸಿದೆ.
ಇದನ್ನೂ ಓದಿ: ಸೊಸೆ ವಿರುದ್ಧ ಅತ್ತೆಗೆ ವಿಷ ನೀಡಿ ಜೀವ ತೆಗೆದ ಆರೋಪ; ಭಾರೀ ಸಂಚಲನ ಸೃಷ್ಟಿಸಿದ ಪತಿ, ಪತ್ನಿ ಪ್ರತ್ಯಾರೋಪಗಳು
ನಿತೀಶ್ ಕುಮಾರ್, ಕಂಪನಿಯಿಂದ ಪಡೆದಿದ್ದಾರೆ ಎನ್ನಲಾಗಿರುವ ಐದು ಕೋಟಿ ರೂಪಾಯಿ ಹಣ ಪಾವತಿಸಲು ನಿರಾಕರಿಸಿದ್ದಾರೆ. ಹೀಗಾಗಿ ಕಾನೂನು ರೂಪ ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಅಧಿಕಾರಿಯೊಬ್ಬರು.. ಶೇಕಡಾ 90 ರಷ್ಟು ಇಂತಹ ಪ್ರಕರಣಗಳು ಕೋರ್ಟ್ ಮೆಟ್ಟಿಲೇರುವುದಿಲ್ಲ. ಖಾಸಗಿಯಾಗಿಯೇ ಬಗೆಹರಿಸಿಕೊಳ್ಳುತ್ತಾರೆ. ಆದರೆ ನಿತೀಶ್ ಹಣ ಪಾವತಿಸಲು ನಿರಾಕರಿಸಿದ್ದಾರೆ. ಅವರು ಸ್ವತಃ ಒಪ್ಪಂದ ಮಾಡಿಕೊಂಡಿದ್ದಾರೆ. ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆಯ ಸೆಕ್ಷನ್ 11(6) ಅಡಿಯಲ್ಲಿ ಕೇಸ್ ದಾಖಲಾಗಿದೆ. ಇದು ನಿರ್ವಹಣಾ ಒಪ್ಪಂದದ ಉಲ್ಲಂಘನೆಯಾಗಿದೆ. ಜುಲೈ 28 ರಂದು ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹಿಂದೂ ದೇಗುಲಕ್ಕಾಗಿ 2 ಬೌದ್ಧ ದೇಶಗಳ ಮಧ್ಯೆ ಯುದ್ಧ.. ಥೈಲ್ಯಾಂಡ್-ಕಾಂಬೋಡಿಯಾ ನಡುವೆ ಆಗ್ತಿರೋದೇನು..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ