/newsfirstlive-kannada/media/post_attachments/wp-content/uploads/2024/01/prithvi-shaw.jpg)
ಮುಂಬೈ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ಪೃಥ್ವಿ ಶಾ ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿರೋ ಪೃಥ್ವಿ ಶಾ ಅವರು, ಓ ದೇವರೇ ನಾನು ಇನ್ನು ಏನೇನು ನೋಡಬೇಕು. ನಾನು ಆಡಿದ 65 ಇನ್ನಿಂಗ್ಸ್ನಲ್ಲಿ 55.7ರ ಸರಾಸರಿಯಲ್ಲಿ 126 ಸ್ಟ್ರೈಕ್ ರೇಟ್‌ನೊಂದಿಗೆ 3399 ರನ್ ಕಲೆ ಹಾಕಿದ್ದೇನೆ. ಇದಕ್ಕಿಂತಲೂ ಉತ್ತಮವಾಗಿ ಆಡಬೇಕೇನು? ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕಮ್ಬ್ಯಾಕ್ ಮಾಡುತ್ತೇನೆ ಎಂದ ಪೃಥ್ವಿ
ನಾನು ನಿಮ್ಮ ಮೇಲೆ ನನ್ನ ನಂಬಿಕೆ ಉಳಿಸಿಕೊಂಡಿದ್ದೇನೆ. ಜನ ನನ್ನನ್ನು ನಂಬುತ್ತಾರೆ ಅನ್ನೋ ಭರವಸೆ ಇದೆ. ನಾನು ಖಂಡಿತ ಕಮ್ಬ್ಯಾಕ್ ಮಾಡುತ್ತೇನೆ. ಓಂ ಸಾಯಿ ರಾಮ್ ಫಾರ್ಮ್ಗೆ ಬರುತ್ತೇನೆ ಎಂದು ಪೃಥ್ವಿ ಶಾ ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗಷ್ಟೇ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಮುಗಿದಿದ್ದು, ಇದರ ಬೆನ್ನಲ್ಲೇ ವಿಜಯ್ ಹಜಾರೆ ಟ್ರೋಫಿ ಶುರುವಾಗಲಿದೆ. ಮುಂಬೈ ತಂಡವನ್ನು ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಮುನ್ನಡೆಸಿದ್ರು. ಈಗ ವಿಜಯ್ ಹಜಾರೆ ಟ್ರೋಫಿಯಲ್ಲೂ ಮುಂಬೈ ತಂಡವನ್ನು ಶ್ರೇಯಸ್ ಅಯ್ಯರ್ ಲೀಡ್ ಮಾಡಲಿದ್ದಾರೆ.
ಇನ್ನು, ವಿಜಯ್ ಹಜಾರೆ ಟ್ರೋಫಿ ಬಲಿಷ್ಠ ಮುಂಬೈ ತಂಡ ಪ್ರಕಟವಾಗಿದೆ. ಸೈಯದ್ ಮುಷ್ತಾಕ್ ಅಲಿ ಟಿ20 ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಅಜಿಂಕ್ಯಾ ರಹಾನೆ ಅವರು ಬ್ರೇಕ್ ತೆಗೆದುಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ಗೆ ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ ರೀತಿಯ ಸ್ಟಾರ್ ಆಟಗಾರರು ಸಾಥ್ ನೀಡಲಿದ್ದಾರೆ. ಮುಂಬೈ ತಂಡದಿಂದ ಟೀಮ್ ಇಂಡಿಯಾ ಸ್ಟಾರ್ ಪ್ಲೇಯರ್ ಪೃಥ್ವಿ ಶಾ ಅವರನ್ನೇ ಕೈ ಬಿಡಲಾಗಿದೆ.
ದ್ವಿಶತಕ ವೀರನಿಗೆ ಕೊಕ್
ವಿಜಯ್ ಹಜಾರೆ ಸೇರಿ 50 ಓವರ್ಗಳ ಪಂದ್ಯಗಳಲ್ಲಿ 2 ದ್ವಿಶತಕ ಸಿಡಿಸಿ ಸಂಚಲನ ಸೃಷ್ಟಿಸಿದವರು ಪೃಥ್ವಿ ಶಾ. ಇವರನ್ನು ಮುಂಬೈ ಆಯ್ಕೆ ಸಮಿತಿ ತಂಡದಿಂದ ಕೈಬಿಟ್ಟಿದೆ. ಇತ್ತೀಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಮೆಂಟ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರು ಎನ್ನುವ ಕಾರಣಕ್ಕೆ ಕೈ ಬಿಡಲಾಗಿದೆ.
ಪೃಥ್ವಿ ಶಾ ಕಳಪೆ ಪ್ರದರ್ಶನ
ಪೃಥ್ವಿ ಶಾ ಇತ್ತೀಚೆಗೆ ಅನಗತ್ಯ ಕಾರಣಗಳಿಂದಲೇ ಸುದ್ದಿಯಾಗಿದ್ದಾರೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ನಡೆದ ರಣಜಿ ಟ್ರೋಫಿ ಟೂರ್ನಿಯಿಂದಲೇ ಮುಂಬೈ ತಂಡದಿಂದ ಪೃಥ್ವಿ ಶಾಗೆ ಕೊಕ್ ನೀಡಲಾಗಿತ್ತು. 2024ರಲ್ಲಿ ಪೃಥ್ವಿ ಶಾ ರಣಜಿ ಟ್ರೋಫಿಯ ನಾಲ್ಕು ಇನ್ನಿಂಗ್ಸ್ಗಳಲ್ಲಿ ಕೇವಲ 59 ರನ್ ಗಳಿಸಿದ್ದರು.
ಮುಂಬೈ ತಂಡ ಹೀಗಿದೆ!
ಶ್ರೇಯಸ್ ಅಯ್ಯರ್ (ನಾಯಕ), ಆಯುಷ್ ಮಾತ್ರೆ, ಆಂಗ್ರಿಶ್ ರಘುವಂಶಿ, ಜೇ ಬಿಸ್ತಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಸೂರ್ಯಾಂಶ್ ಶೇಡ್ಗೆ, ಸಿದ್ದೇಶ್ ಲಾಡ್, ಹಾರ್ದಿಕ್ ತಾಮೋರ್, ಪ್ರಸಾದ್ ಪವಾರ್, ಅಥರ್ವ ಅಂಕೋಲೆಕರ್, ತನುಷ್ ಕೋಟ್ಯಾನ್, ಶಾರ್ದೂಲ್ ಠಾಕೂರ್, ಡಯಾಸ್, ಜುನೈದ್ ಖಾನ್, ಹರ್ಷ್ ತನ್ನಾ, ವಿನಾಯಕ್ ಭೋಯಿರ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ