/newsfirstlive-kannada/media/post_attachments/wp-content/uploads/2024/07/Bumrah_Rohit.jpg)
ಟೀಮ್​ ಇಂಡಿಯಾ ಇಂಗ್ಲೆಂಡ್​​ ವಿರುದ್ಧ ಏಕದಿನ ಸರಣಿ ಆಡಲು ಸಜ್ಜಾಗಿದೆ. ಇಂಗ್ಲೆಂಡ್ ಮತ್ತು ಟೀಮ್​ ಇಂಡಿಯಾ ನಡುವಿನ ಏಕದಿನ ಸರಣಿ ಫೆಬ್ರವರಿ 6 ರಿಂದ ಶುರುವಾಗಲಿದೆ. ಫೆಬ್ರವರಿ 12ಕ್ಕೆ ಕೊನೆ ಮ್ಯಾಚ್​​​ ನಡೆಯಲಿದೆ.
ಬಲಿಷ್ಠ ತಂಡ ಪ್ರಕಟಿಸಿದ ಬಿಸಿಸಿಐ
ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದೆ. ಮುಂದೆ ನಡೆಯಲಿರೋ ಇಂಗ್ಲೆಂಡ್​​ ವಿರುದ್ಧ ಏಕದಿನ ಸರಣಿಗಾಗಿ ಈಗಾಗಲೇ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟವಾಗಿದೆ.
ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯೋ ಟೀಮ್​​ ಇಂಡಿಯಾ ಆಟಗಾರರೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಭಾಗವಾಗಲಿದ್ದಾರೆ. ಹೀಗಾಗಿ ಈ ಏಕದಿನ ಸರಣಿ ಬಹಳ ಮಹತ್ವದ್ದಾಗಿದೆ. ಇದರ ಮಧ್ಯೆ ಟೀಮ್​ ಇಂಡಿಯಾಗೆ ಶಾಕಿಂಗ್​ ನ್ಯೂಸ್​ ಒಂದಿದೆ. ಇಂಗ್ಲೆಂಡ್​​​ ವಿರುದ್ಧ ಸರಣಿಗೆ ಮುನ್ನ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿದ್ದ ಜಸ್ಪ್ರಿತ್ ಬುಮ್ರಾ ಗಾಯದ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ.
ಬುಮ್ರಾಗೆ ಗಂಭೀರ ಗಾಯ
ಇತ್ತೀಚಿಗೆ ಬಾರ್ಡರ್ ಗವಾಸ್ಕರ್ ಸರಣಿಯ 5ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುವ ವೇಳೆ ಜಸ್ಪ್ರಿತ್ ಬುಮ್ರಾ ಮೈದಾನದಿಂದ ಹೊರ ನಡೆದರು. ಮೈದಾನದಿಂದ ಹೊರ ಹೋಗುತ್ತಿದ್ದಂತೆ ಬುಮ್ರಾ ಬೌಲಿಂಗ್ ಕೋಚ್ ಹಾಗೂ ಸಿಬ್ಬಂದಿ ಜತೆಗೆ ಆಸ್ಪತ್ರೆಗೆ ತೆರಳುತ್ತಿದ್ದರು. ಈಗ ಇವರ ಗಾಯದ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದ್ದು, ಇವರು 3 ತಿಂಗಳು ರೆಸ್ಟ್​ ಮಾಡಬೇಕಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು, ಬುಮ್ರಾ ಬೆನ್ನು ನೋವಿಗೆ ಆಸ್ಟ್ರೇಲಿಯಾದಲ್ಲಿ ಚಿಕಿತ್ಸೆ ಪಡೆಯಬಹುದು. ಇಂಗ್ಲೆಂಡ್​​ ಏಕದಿನ ಸರಣಿ ಇದೇ ತಿಂಗಳಿನಿಂದ ಶುರುವಾಗಲಿದೆ. ಇವರು 3 ತಿಂಗಳು ರೆಸ್ಟ್​ ಮಾಡಬೇಕಾದ ಕಾರಣ ಟೂರ್ನಿ ಆಡುವುದು ಡೌಟ್​.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us