ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಸ್ಟಾರ್​ ಪ್ಲೇಯರ್​​; ರೋಹಿತ್​ನಿಂದ ಮಹತ್ವದ ಅಪ್ಡೇಟ್​!

author-image
Ganesh Nachikethu
Updated On
ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಸ್ಟಾರ್​ ಪ್ಲೇಯರ್​​; ರೋಹಿತ್​ನಿಂದ ಮಹತ್ವದ ಅಪ್ಡೇಟ್​!
Advertisment
  • ವರ್ಷದ ಕೊನೆಗೆ ನಡೆಯಲಿರೋ ಬಾರ್ಡರ್​​ ಗವಾಸ್ಕರ್ ಟ್ರೋಫಿ..!
  • ಆಸ್ಟ್ರೇಲಿಯಾ, ಟೀಮ್​ ಇಂಡಿಯಾ ನಡುವೆ 5 ಪಂದ್ಯಗಳ ಟೆಸ್ಟ್​ ಸರಣಿ
  • ಟೂರ್ನಿ ಆರಂಭಕ್ಕೂ ಮುನ್ನ ಬಿಗ್​ ಶಾಕ್​ ಕೊಟ್ಟ ಸ್ಟಾರ್​ ಆಲ್​ರೌಂಡರ್​​

ಬಾಂಗ್ಲಾದೇಶ ಬೆನ್ನಲ್ಲೀಗ ನ್ಯೂಜಿಲೆಂಡ್​ ಭಾರತ ಪ್ರವಾಸ ಕೈಗೊಂಡಿದೆ. ಅಕ್ಟೋಬರ್​​ 16ನೇ ತಾರೀಕಿನಿಂದ ಟೀಮ್​ ಇಂಡಿಯಾ, ನ್ಯೂಜಿಲೆಂಡ್​ ಮಧ್ಯೆ 3 ಪಂದ್ಯಗಳ ಟೆಸ್ಟ್ ಸರಣಿ ಶುರುವಾಗಲಿದೆ. ಈ ಮಹತ್ವದ ಸರಣಿಗೆ ಈಗಾಗಲೇ ಬಿಸಿಸಿಐ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟಿಸಿದೆ.

ನ್ಯೂಜಿಲೆಂಡ್​​ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಟೀಮ್​ ಇಂಡಿಯಾವನ್ನು ಕ್ಯಾಪ್ಟನ್​ ರೋಹಿತ್​ ಶರ್ಮಾ ಮುನ್ನಡೆಸಲಿದ್ದಾರೆ. ಬಿಸಿಸಿಐ ಸೆಲೆಕ್ಷನ್ ಕಮಿಟಿ ನ್ಯೂಜಿಲೆಂಡ್​​ ವಿರುದ್ಧ ಟೆಸ್ಟ್​ ಸರಣಿಯಿಂದ ಟೀಮ್​ ಇಂಡಿಯಾದ ಸ್ಟಾರ್​ ಆಟಗಾರನನ್ನು ಕೈ ಬಿಟ್ಟಿದೆ. ಈ ಟೆಸ್ಟ್​​ ಸರಣಿಗೆ ಮುನ್ನ ಸುದ್ದಿಗೋಷ್ಠಿ ನಡೆಸಿರೋ ಕ್ಯಾಪ್ಟನ್​ ರೋಹಿತ್​ ಶರ್ಮಾ ಸ್ಟಾರ್​ ವೇಗಿ ಮೊಹಮ್ಮದ್‌ ಶಮಿ ಗಾಯದ ಬಗ್ಗೆ ಬಿಗ್‌ ಅಪ್‌ಡೇಟ್ ನೀಡಿದ್ದಾರೆ.

publive-image

ರೋಹಿತ್​ ಏನಂದ್ರು?

ಸ್ಟಾರ್​ ವೇಗಿ ಮೊಹಮ್ಮದ್‌ ಶಮಿ ಗಾಯಕ್ಕೆ ತುತ್ತಾಗಿದ್ದಾರೆ. ಶಮಿ ಮೊಣಕಾಲಿಗೆ ಬಾವು ಬಂದಿದೆ. ಹೀಗಾಗಿ ಇವರಿಗೆ ರೆಸ್ಟ್​ ನೀಡಲಾಗಿದೆ. ತಮ್ಮ ಗಾಯ ವಾಸಿ ಆಗೋವರೆಗೂ ಶಮಿ ಕಾಯಲೇಬೇಕು. ಸದ್ಯ ಇವರು ವೈದ್ಯರು ಮತ್ತು ಫಿಜಿಯೋ ಮೇಲ್ವಿಚಾರಣೆಯಲ್ಲಿ ಎನ್‌ಸಿಎದಲ್ಲಿ ಇದ್ದಾರೆ. ಶಮಿ ಸಂಪೂರ್ಣ ಫಿಟ್​ ಆಗದಿದ್ರೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಕರೆದುಕೊಂಡು ಹೊಗುವುದು ಕಷ್ಟ ಎಂದರು ರೋಹಿತ್.

ನವೆಂಬರ್​ನಿಂದ ಜನವರಿ ತಿಂಗಳವರಗೆ ಟೀಮ್​​ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್​​ ಗವಾಸ್ಕರ್ ಟ್ರೋಫಿ ಆಡಲಿದೆ. ಇದು 5 ಪಂದ್ಯಗಳ ಟೆಸ್ಟ್ ಸರಣಿ ಆಗಿದೆ. ನವೆಂಬರ್ 22 ರಿಂದಲೇ ಪರ್ತ್​​ ಸ್ಟೇಡಿಯಮ್​ನಲ್ಲಿ ಮೊದಲ ಟೆಸ್ಟ್ ಶುರುವಾಗಲಿದೆ. ಹಾಗಾಗಿ ಇದು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡಕ್ಕೆ ದೊಡ್ಡ ಸವಾಲು ಎದುರಾಗಲಿದೆ.

ಇದನ್ನೂ ಓದಿ: ಭಾರತ, ಆಸ್ಟ್ರೇಲಿಯಾ ಮಧ್ಯೆ ಮಹತ್ವದ ಟೆಸ್ಟ್​ ಸರಣಿ; ಟೂರ್ನಿಯಿಂದ ಸ್ಟಾರ್​ ಪ್ಲೇಯರ್​​ ಔಟ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment