ಪ್ರತಿಭಾವಂತ ವಿದ್ಯಾರ್ಥಿ ಕಾಲೇಜು ಫೀಸು ಕಟ್ಟಿದ KL ರಾಹುಲ್; ನೂರಾರು ಬಡವರಿಗೆ ನೆರವಾದ ಕನ್ನಡಿಗ!

author-image
Ganesh Nachikethu
Updated On
ಪ್ರತಿಭಾವಂತ ವಿದ್ಯಾರ್ಥಿ ಕಾಲೇಜು ಫೀಸು ಕಟ್ಟಿದ KL ರಾಹುಲ್; ನೂರಾರು ಬಡವರಿಗೆ ನೆರವಾದ ಕನ್ನಡಿಗ!
Advertisment
  • ಎಷ್ಟೋ ಮಂದಿ ಬಡ ವಿದ್ಯಾರ್ಥಿಗಳ ಓದಿಗೆ ನೆರವಾಗುತ್ತಿರೋ ಕನ್ನಡಿಗ
  • ನೂರಾರು ವಿದ್ಯಾರ್ಥಿಗಳ ಕಾಲೇಜು ಫೀಸ್​ ಕಟ್ಟುತ್ತಿರೋ KL​ ರಾಹುಲ್!
  • ಟೀಮ್​ ಇಂಡಿಯಾದ ಸ್ಟಾರ್​ ವಿಕೆಟ್​ ಕೀಪರ್​ ಕಾರ್ಯಕ್ಕೆ ಭಾರೀ ಮೆಚ್ಚುಗೆ

ಕೆ.ಎಲ್.ರಾಹುಲ್.. ಅದ್ಭುತ ನಾಯಕ ಹಾಗೂ ಓಪನರ್. ಸಮರ್ಥವಾಗಿ ತಂಡವನ್ನ ಮುನ್ನಡೆಸುವ ಕಲೆಗಾರಿಕೆ ಹೊಂದಿರುವ ರಾಹುಲ್, ಕೂಲ್ ಆ್ಯಂಡ್ ಕಾಮ್ ಆಗಿ ಒತ್ತಡದ ಸನ್ನಿವೇಶಗಳನ್ನ ನಿಭಾಯಿಸಬಲ್ಲರು. ಜೊತೆಗೆ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ನೀಡುವ ಕೆ.ಎಲ್.ರಾಹುಲ್, ಯಾವುದೇ ಕ್ರಮಾಂಕದಲ್ಲಾದರೂ ಫಿಟ್ ಆಗೋ ಪ್ಲೇಯರ್. ತಂಡದ ಅಗತ್ಯಕ್ಕೆ ತಕ್ಕಂತೆ ಓಪನರ್​, ಮಿಡಲ್​ ಆರ್ಡರ್​ನಲ್ಲಿ ಬ್ಯಾಟ್ ಕೂಡ ಬೀಸಬಲ್ಲರು.

ವಿಕೆಟ್​ ಹಿಂದೆ ನಿಂತು ಫೀಲ್ಡ್​ ಪ್ಲೇಸ್​ಮೆಂಟ್ಸ್​, ಪಿಚ್​ ವರ್ತನೆ, ಡಿಆರ್​​ಎಸ್​ ಆಯ್ಕೆ ವಿಚಾರದಲ್ಲಿ ಪ್ರಮುಖ ಪಾತ್ರವಹಿಸಬಲ್ಲರು. ಸಹ ಆಟಗಾರರ ಜೊತೆ ಉತ್ತಮ ಬಾಂಧವ್ಯ ವೃದ್ಧಿಸಿಕೊಳ್ಳುವ ಕೆ.ಎಲ್.ರಾಹುಲ್, ಒಳ್ಳೆಯ ಟೀಮ್​ ಮ್ಯಾನ್​ ಹಾಗೂ ಲೀಡರ್​ ಆಗಿ ಈಗಾಗಲೇ ಗುರುತಿಸಿಕೊಂಡಿದ್ದಾರೆ. ಕೆ.ಎಲ್​​ ರಾಹುಲ್​ಗೆ ಯುವ ಆಟಗಾರರ ಬೆನ್ನಿಗೆ ನಿಲ್ಲುವ ಗುಣ ಇದೆ.

ಕೆ.ಎಲ್.ರಾಹುಲ್ ಆರ್​ಸಿಬಿಗೆ ಬರ್ತಾರೆ ಅನ್ನೋ ಸುದ್ದಿ ಇದೆ. ರೆಡ್ ಆರ್ಮಿಗೆ ಬಿಗ್ ಅಡ್ವಾಂಟೇಜ್​​​​​​​​​​​​​​​ ಆಗುತ್ತೆ. ಚಿನ್ನಸ್ವಾಮಿಯಲ್ಲಿ ಆಡಿ, ಬೆಳೆದ ರಾಹುಲ್​ ಆರ್​​ಸಿಬಿ ಕ್ಯಾಪ್ಟನ್​ ಆದ್ರೆ, ಫ್ಯಾನ್ಸ್​ ಫುಲ್​ ಖುಷ್​ ಆಗ್ತಾರೆ. ತಂಡದ ಕ್ರೇಜ್​​ ನೆಕ್ಸ್ಟ್​​ ಲೆವೆಲ್​ಗೆ ಹೋಗುತ್ತೆ. ಇದನ್ನಲ್ಲದೆ ಕನ್ನಡಿಗರ ಕಡೆಗಣನೆಯ ಅಪವಾದವೂ ರಾಹುಲ್​ ನಾಯಕನಾದ್ರೆ ತಪ್ಪಲಿದೆ. ಹಾಗಾಗಿ ಕೆ.ಎಲ್​ ರಾಹುಲ್​ ಆರ್​​ಸಿಬಿಗೆ ಬರಲಿ ಎಂದು ಫ್ಯಾನ್ಸ್​ ಕಾಯ್ತಾ ಇದಾರೆ. ಹೀಗೆ ತನ್ನ ಬ್ಯಾಟಿಂಗ್​ ಮೂಲಕವೇ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದ ಕೆ.ಎಲ್​ ರಾಹುಲ್​ ಮೈದಾನದ ಹೊರಗೂ ಹೀರೋ!

ಹೃದಯವಂತ ರಾಹುಲ್!

ಕೆ.ಎಲ್​ ರಾಹುಲ್​ ಮೈದಾನದ ಹೊರಗೆ ಮಾಡಿದ ಕಾರ್ಯಕ್ಕೆ ಎಲ್ಲರೂ ಸೆಲ್ಯೂಟ್​ ಹೊಡೆಯುತ್ತಿದ್ದಾರೆ. ಈ ಹಿಂದೆ ಕೆಎಲ್ ರಾಹುಲ್ ಅಪರೂಪದ ಕಾಯಿಲೆಯೊಂದಿಗೆ ಹೋರಾಡುತ್ತಿರುವ 11 ವರ್ಷದ ಮಗುವಿನ ಜೀವ ಉಳಿಸಲು 31 ಲಕ್ಷ ರೂಪಾಯಿ ದೇಣಿಗೆ ನೀಡಿ ಸುದ್ದಿಯಾಗಿದ್ದರು. ಈಗ ಬಡ ಕನ್ನಡಿಗನ ಸಂಪೂರ್ಣ ಓದಿನ ಜವಾಬ್ದಾರಿ ಹೊತ್ತಿದ್ದಾರೆ ಅನ್ನೋ ಸುದ್ದಿ ತಿಳಿದು ಬಂದಿದೆ.

ಹೌದು, ಈ ಬಗ್ಗೆ ಕೆ.ಎಲ್​ ರಾಹುಲ್​ ಅವರಿಂದ ಸಹಾಯ ಪಡೆದ ವಿದ್ಯಾರ್ಥಿಯೇ ಮಾತಾಡಿದ್ದಾರೆ. ನನ್ನ ಹೆಸರು ಅಮೃತ್​ ಮಾವಿನಕಟ್ಟಿ. ನಾನು ಬಾಗಲಕೋಟೆ ಕಾಲೇಜಿನಲ್ಲಿ ಡಿಗ್ರಿ ಓದುತ್ತಿರೋ ವಿದ್ಯಾರ್ಥಿ. ಕಳೆದ ವರ್ಷ ನನ್ನ ಕಾಲೇಜು ಫೀಸ್​ ಕಟ್ಟಿದ್ದು ಕೆ.ಎಲ್​ ರಾಹುಲ್​ ಅವರು. ಇದರ ಫಲವಾಗಿ ನಾನು ಶೇ.90ಕ್ಕೂ ಹೆಚ್ಚು ಅಂಕ ಪಡೆದು ಕೆ.ಎಲ್​ ರಾಹುಲ್​ ಹೆಸರಿಗೆ ಕೀರ್ತಿ ತಂದಿದ್ದೇನೆ. ಈ ವರ್ಷ ಕೂಡ ಕೆ.ಎಲ್​ ರಾಹುಲ್​ ಅವರು 75 ಸಾವಿರ ನನ್ನ ಕಾಲೇಜು ಫೀಸ್​ ಕಟ್ಟಿದ್ರು. ನನ್ನ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ ಎಂದರು. ಇದೇ ರೀತಿ ಎಷ್ಟೋ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ಚಾಚಿದ್ದಾರೆ ಕೆ.ಎಲ್​ ರಾಹುಲ್.

ಇದನ್ನೂ ಓದಿ:RCB ನಾಯಕತ್ವಕ್ಕಾಗಿ KL​ ರಾಹುಲ್​​, ರೋಹಿತ್​ ಮಧ್ಯೆ ಭಾರೀ ಫೈಟ್​​; ಫ್ರಾಂಚೈಸಿ ನಿರ್ಧಾರವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment