/newsfirstlive-kannada/media/post_attachments/wp-content/uploads/2024/08/KOHLI-GIL-IYER-RAHUL.jpg)
ಟೀಮ್ ಇಂಡಿಯಾ, ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿ ಶುರುವಾಗಲಿದೆ. ಇದೇ ತಿಂಗಳು ಜನವರಿ 20ನೇ ತಾರೀಕು ಶುರುವಾಗಲಿರೋ ಟಿ20 ಸರಣಿಗೆ ಬಲಿಷ್ಠ ಟೀಮ್ ಇಂಡಿಯಾ ಪ್ರಕಟಿಸಲಾಗಿದೆ.
ಹಲವು ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಸೂಪರ್ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಕಮ್ಬ್ಯಾಕ್ ಮಾಡಿದ್ದಾರೆ. ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಸಂಜು ಸ್ಯಾಮ್ಸನ್ ಹಾಗೂ ಧೃವ್ ಜುರೇಲ್ ವಿಕೆಟ್ ಕೀಪರ್ ಆಗಿ ಕಾಣಿಸಿಕೊಂಡಿದ್ದಾರೆ. ಇದರ ಮಧ್ಯೆ ಟೀಮ್ ಇಂಡಿಯಾ ಉಪನಾಯಕನಿಗೆ ಕೊಕ್ ನೀಡಲಾಗಿದೆ.
ಮಹತ್ವದ ಟಿ20 ಸರಣಿಗೆ ಯುವ ಆಟಗಾರರಿಗೆ ಮಣೆ ಹಾಕಲಾಗಿದೆ. ಸರಣಿಯಲ್ಲಿ ಯುವ ಆಟಗಾರರು ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಲಿದ್ದಾರೆ. ಗಿಲ್ ಬದಲಿಗೆ ಸ್ಟಾರ್ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರಿಗೆ ಉಪನಾಯಕ ಪಟ್ಟ ಕಟ್ಟಲಾಗಿದೆ. ತಂಡದಲ್ಲಿ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸ್ಥಾನ ಪಡೆದಿದ್ದಾರೆ. ಆದ್ರೆ, ಈ ಸಿರೀಸ್ನಲ್ಲಿ ಸ್ಥಾನ ಪಡೆಯದೇ ವಿಶ್ರಾಂತಿಯಲ್ಲಿರುವ ಆಟಗಾರರ ಪಾಲಿಗಂತೂ, ಭವಿಷ್ಯದ ಪ್ರಶ್ನೆ ಉದ್ಭವವಾಗಿದೆ.
ರಿಷಭ್ ಪಂತ್
ಟೀಮ್ ಇಂಡಿಯಾದ ಡೇರ್ ಡೆವಿಲ್ ಬ್ಯಾಟರ್ ರಿಷಭ್ ಪಂತ್. ಈತನ ಟಿ20 ಕರಿಯರ್ ಎಂಡ್ ಕಾರ್ಡ್ ಬಿದ್ದಂತಿದೆ. ಯಾಕಂದ್ರೆ, ಟಿ20ಯಲ್ಲಿ ಅಬ್ಬರಿಸ್ತಿರುವ ಸಂಜು ಸ್ಯಾಮ್ಸನ್, ಇಂಗ್ಲೆಂಡ್ ಎದುರು ಅದೇ ಜೋಶ್ನಲ್ಲಿ ಸಿಡಿದ್ರೆ, ಟಿ20ಗೆ ಪಂತ್ ಟಾಟಾ ಭಾಯ್ ಭಾಯ್ ಹೇಳಬೇಕಾದ ಪರಿಸ್ಥಿತಿ ಎದುರಾಗೋದ್ರಲ್ಲಿ ಡೌಟೇ ಇಲ್ಲ. ಬ್ಯಾಕ್ ಅಪ್ ವಿಕೆಟ್ ಕೀಪರ್ ಆಗಿ ಧ್ರುವ್ ಜುರೇಲ್ ತಂಡದಲ್ಲಿದ್ದಾರೆ. ಹೀಗಾಗಿ ಟಿ20ಯಲ್ಲಿ ಫೈರಿ ಪರ್ಫಾಮೆನ್ಸ್ ನೀಡದ ಪಂತ್, ಸೈಡ್ ಲೈನ್ ಆದ್ರು ಅಚ್ಚರಿ ಇಲ್ಲ.
ಶುಭ್ಮನ್ ಗಿಲ್
ಶುಭ್ಮನ್ ಗಿಲ್ ಟಿ20 ಭವಿಷ್ಯವೂ ಪ್ರಶ್ನಾರ್ಥಕ ಅನ್ನೋದ್ರಲ್ಲಿ ಡೌಟೇ ಇಲ್ಲ. ಯಾಕಂದ್ರೆ, ಮುಂಬೈಕರ್ ಯಶಸ್ವಿ ಜೈಸ್ವಾಲ್, ಫಸ್ಟ್ ಚಾಯ್ಸ್ ಓಪನರ್.. ಇದರ ಜೊತೆಗೆ ಸಂಜು ರೆಡ್ ಹಾಟ್ ಫಾರ್ಮ್ ಗಿಲ್ ಪಾಲಿಗೆ ಕಂಟಕವಾಗಿದೆ. ಇನ್ಫ್ಯಾಕ್ಟ್_ ಇವರಿಬ್ಬರಿಗೆ ಹೋಲಿಕೆ ಮಾಡಿದ್ರೆ, ಟಿ20ಯಲ್ಲಿ ಹೇಳಿಕೊಳ್ಳುವ ಆಟವಾಡಿಲ್ಲ. ಬ್ಯಾಟಿಂಗ್ ಟ್ರ್ಯಾಕ್ನಲ್ಲಿ ಮಾತ್ರವೇ ಪೌರುಷ ತೋರಿರುವ ಗಿಲ್ಗೆ, ಟಿ20 ತಂಡದಲ್ಲಿ ಪರ್ಮನೆಂಟ್ ರೆಸ್ಟ್ ಪಡೆಯೋ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಕೆ.ಎಲ್.ರಾಹುಲ್
ಕನ್ನಡಿಗ ಕೆ.ಎಲ್.ರಾಹುಲ್, ಪಾಲಿಗೆ ಟಿ20 ಕ್ರಿಕೆಟ್ ಮುಗಿದ ಆಧ್ಯಾಯ. ಓಪನರ್, ಮಿಡಲ್ ಆರ್ಡರ್.. ವಿಕೆಟ್ ಕೀಪರ್ ಇದ್ಯಾವ ಸ್ಲಾಟ್ನಲ್ಲೂ ಕೆ.ಎಲ್.ರಾಹುಲ್, ಮತ್ತೆ ಟಿ20ಗೆ ಮುಖ ಮಾಡೋ ಲಕ್ಷಣಗಳೇ ಇಲ್ಲ. ಯಾಕಂದ್ರೆ, ಪ್ರತಿ ಸ್ಲಾಟ್ನಲ್ಲೂ ಯುವ ಆಟಗಾರರ ಪೈಪೋಟಿ ಇದೆ. ಮತ್ತೊಂದೆಡೆ 32 ವರ್ಷದ ಕೆ.ಎಲ್.ರಾಹುಲ್, ಟಿ20ಯಲ್ಲಿ ಡೆಡ್ ಆಗಿರೋ ಬ್ಯಾಟರಿಯಾಗಿದ್ದಾರೆ. ಹೀಗಾಗಿ ಐಪಿಎಲ್ನಲ್ಲಿ ಮಿಂಚು ಹರಿಸಿ ಕಮ್ಬ್ಯಾಕ್ ಶಪಥ ಮಾಡಿದ್ರು, ಅದು ನೆರವಾಗಲ್ಲ.
ಶ್ರೇಯಸ್ ಅಯ್ಯರ್
ಶ್ರೇಯಸ್ ಅಯ್ಯರ್ ಕಥೆಯೂ ಸೇಮ್ ಕೆ.ಎಲ್.ರಾಹುಲ್ನಂತೆಯೇ.. ಆದ್ರೆ, ಶ್ರೇಯಸ್ ಅಯ್ಯರ್ ದೇಶಿ ಕ್ರಿಕೆಟ್ನಲ್ಲಿ ಅಬ್ಬರಿಸ್ತಿದ್ದಾರೆ. ರಾಹುಲ್ ಇಲ್ಲ ಅಷ್ಟೆ. ಆದ್ರೆ, ಶ್ರೇಯಸ್ ಅಯ್ಯರ್ ಫೇವರಿಟ್ ಸ್ಲಾಟ್-4ರಲ್ಲಿ ತಿಲಕ್ ವರ್ಮ, ನಾಯಕ ಸೂರ್ಯಕುಮಾರ್ ಕರ್ಚೀಫ್ ಹಾಕಿ ಕುಳಿತಿದ್ದಾರೆ. ಹೀಗಾಗಿ 30 ವರ್ಷದ ಶ್ರೇಯಸ್ ಅಯ್ಯರ್ಗೆ, ಟಿ20 ಫಾರ್ಮೆಟ್ನ ಬಾಗಿಲು ಬಂದ್ ಆದಂತೆಯೇ ಲೆಕ್ಕ.
ಟಿ20 ಸರಣಿಗೆ ಭಾರತ ತಂಡ ಹೀಗಿದೆ!
ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್ (ಉಪನಾಯಕ), ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ , ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್ (ವಿಕೆಟ್ ಕೀಪರ್).
ಇದನ್ನೂ ಓದಿ:ಭಾರತ, ಇಂಗ್ಲೆಂಡ್ ಟಿ20 ಸೀರೀಸ್; ಟೀಮ್ ಇಂಡಿಯಾ ಉಪನಾಯಕ ಗಿಲ್ಗೆ ಬಿಗ್ ಶಾಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ