ಆಸೀಸ್​ ಟೆಸ್ಟ್​ ಸರಣಿ; ಟೀಮ್​ ಇಂಡಿಯಾಗೆ ಸ್ಟಾರ್​ ಪ್ಲೇಯರ್​ ಎಂಟ್ರಿ; ಬಂತು ಮೆಗಾ ಪವರ್​!

author-image
Ganesh Nachikethu
Updated On
ಟೀಮ್​ ಇಂಡಿಯಾ ಕಟ್ಟಿ ಹಾಕೋ ಬಿಗ್ ಪ್ಲಾನ್​ನಲ್ಲಿ ಇಂಗ್ಲೆಂಡ್​ ತಂಡ.. ಇವರ ಗೇಮ್​ ವ್ಯೂಹ ಹೇಗಿದೆ?
Advertisment
  • ಸೌತ್​ ಆಫ್ರಿಕಾ ಟಿ20 ಸರಣಿ ಗೆದ್ದು ಬೀಗಿದ ಟೀಮ್​ ಇಂಡಿಯಾ
  • ಆಸೀಸ್​ ವಿರುದ್ಧದ ಟೆಸ್ಟ್​ ಸೀರೀಸ್​ ಭಾರತ ತಂಡ ಗೆಲ್ಲಲೇಬೇಕು
  • ಇದರ ಮಧ್ಯೆ ಟೀಮ್​ ಇಂಡಿಯಾಗೆ ಗುಡ್​ನ್ಯೂಸ್ ಕೊಟ್ಟ ಸ್ಟಾರ್​​​​

ಸೌತ್​ ಆಫ್ರಿಕಾ ವಿರುದ್ಧದ 4 ಪಂದ್ಯಗಳ ಟಿ20 ಸರಣಿಯನ್ನು ಟೀಮ್​ ಇಂಡಿಯಾ 3-1 ಅಂತರದಿಂದ ಗೆದ್ದು ಬೀಗಿದೆ. ಇದೇ ತಿಂಗಳು 22ನೇ ತಾರೀಕಿನಿಂದ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ 5 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಈ ಮಹತ್ವದ ಸರಣಿಗೆ ಟೀಮ್​ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಇದರ ಮಧ್ಯೆ ಟೀಮ್​ ಇಂಡಿಯಾಗೆ ಭರ್ಜರಿ ಗುಡ್​ನ್ಯೂಸ್ ಸಿಕ್ಕಿದೆ.

ಬರೋಬ್ಬರಿ 1 ವರ್ಷದಿಂದ ಕ್ರಿಕೆಟ್​ನಿಂದ ದೂರು ಉಳಿದಿದ್ದ ಟೀಮ್​ ಇಂಡಿಯಾದ ಸ್ಟಾರ್​​ ವೇಗಿ ಮೊಹಮ್ಮದ್​ ಶಮಿ ಕಮ್​​ಬ್ಯಾಕ್​ ಮಾಡಲು ಸಜ್ಜಾಗಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧ ಹೇಗೆ ಆಡೋದು? ಎಂಬ ಟೀಮ್​ ಇಂಡಿಯಾ ಚಿಂತೆಯನ್ನು ದೂರ ಮಾಡಿದ್ದಾರೆ. ಟೀಮ್ ಇಂಡಿಯಾ ಸೇರಲು ತಯಾರಿ ನಡೆಸಿಕೊಂಡಿರೋ ಮೊಹಮ್ಮದ್ ಶಮಿ ಮತ್ತೆ ಬ್ಯಾಟರ್‌ಗಳನ್ನು ಕಾಡಲಿದ್ದಾರೆ.

ಏಕದಿನ ವಿಶ್ವಕಪ್​​ನಲ್ಲಿ ಅಮೋಘ ಪ್ರದರ್ಶನ

ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದವ್ರು ಶಮಿ. ಇಡೀ ಟೂರ್ನಿಯಲ್ಲೇ ಹೈಎಸ್ಟ್​​ ವಿಕೆಟ್​ ಟೇಕರ್​ ಇವ್ರು. ಏಕದಿನ ವಿಶ್ವಕಪ್​​ ಫೈನಲ್‌ ಪಂದ್ಯದ ಬಳಿಕ ಮೈದಾನಕ್ಕೆ ಬರಲೇ ಇಲ್ಲ. ಇವರು ಪಾದದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಈಗಷ್ಟೇ ಚೇತರಿಸಿಕೊಂಡಿದ್ದಾರೆ. ಇಂಟರ್​ ನ್ಯಾಷನಲ್​ ಕ್ರಿಕೆಟ್​ಗೆ ಕಮ್​ಬ್ಯಾಕ್​​ ಮಾಡೋ ಮುನ್ನ ಶಮಿ ರಣಜಿಯಲ್ಲಿ ಬಂಗಳಾ ಪರ ಆಡಿದ್ರು.

publive-image

ಟೀಮ್​ ಇಂಡಿಯಾಗೆ ಗುಡ್​ನ್ಯೂಸ್​​

ಭಾರತ ಕ್ರಿಕೆಟ್​ ತಂಡ ಸದ್ಯದಲ್ಲೇ ಆಸ್ಟ್ರೇಲಿಯಾ ಪ್ರವಾಸ ಬೆಳೆಸಲಿದೆ. ಈ ಪ್ರವಾಸಕ್ಕೆ ಪ್ರಕಟವಾದ ಟೀಮ್​ ಇಂಡಿಯಾದಲ್ಲಿ ಶಮಿಗೆ ಸ್ಥಾನ ಸಿಕ್ಕಿಲ್ಲ. ಕಾರಣ ಅವರಿಗೆ ಫಿಟ್ನೆಸ್​ ಸಮಸ್ಯೆ ಇತ್ತು. ಈಗ ಭಾರತಕ್ಕೆ ಶಮಿ ಭರ್ಜರಿ ಗುಡ್​ನ್ಯೂಸ್​​ ಕೊಟ್ಟಿದ್ದಾರೆ. ಶಮಿ ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಟೀಮ್​ ಇಂಡಿಯಾ ಆಡಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್​ ಪಂದ್ಯಕ್ಕೆ ಕ್ಯಾಪ್ಟನ್​ ರೋಹಿತ್​ ಶರ್ಮಾ ಅವರೊಂದಿಗೆ ಶಮಿ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದು ಬಂದಿದೆ.

ರಣಜಿಯಲ್ಲಿ ಅಮೋಘ ಪ್ರದರ್ಶನ

ಮೊಹಮ್ಮದ್ ಶಮಿ ಬಂಗಳಾ ರಣಜಿ ತಂಡದಲ್ಲಿ ಸ್ಥಾನ ಪಡೆದಿದ್ರು. ಮಧ್ಯಪ್ರದೇಶ ವಿರುದ್ಧ ನಡೆದ ಪಂದ್ಯಕ್ಕಾಗಿ ಇವರನ್ನು ಬಂಗಾಳ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಈ ಪಂದ್ಯದಲ್ಲಿ ಶಮಿ 43.2 ಓವರ್​​ನಲ್ಲಿ 7 ವಿಕೆಟ್​ ಪಡೆದು ಮಿಂಚಿದ್ರು. ಈ ಮೂಲಕ ತಮ್ಮ ಫಿಟ್ನೆಸ್​ ಸಾಬೀತು ಮಾಡಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment