/newsfirstlive-kannada/media/post_attachments/wp-content/uploads/2024/12/Mohammed-Siraj_Rohit.jpg)
ಟೀಮ್​​ ಇಂಡಿಯಾ, ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಸರಣಿ ನಡೆಯುತ್ತಿದೆ. ಹೇಗಾದ್ರೂ ಮಾಡಿ 4ನೇ ಟೆಸ್ಟ್​ ಗೆಲ್ಲಲೇಬೇಕು ಎಂದು ಟೀಮ್​ ಇಂಡಿಯಾ ಮುಂದಾಗಿದೆ. ಇದು ಬಾಕ್ಸಿಂಗ್ ಡೇ ಟೆಸ್ಟ್ ಆಗಿದ್ದು, ಉಭಯ ತಂಡಗಳು ಭರ್ಜರಿ ತಯಾರಿ ನಡೆಸಿವೆ. 3ನೇ ಟೆಸ್ಟ್​ ಡ್ರಾ ಆಗಿದ್ದು, ಎರಡು ತಂಡಗಳು ತಲಾ 1 ಪಂದ್ಯ ಗೆದ್ದು ಸಮಬಲ ಸಾಧಿಸಿವೆ. ಹೀಗಾಗಿ 4ನೇ ಟೆಸ್ಟ್​ ಪಂದ್ಯ ಗೆಲ್ಲೋದು ಅನಿವಾರ್ಯ ಆಗಿದ್ದು, ಟೀಮ್​ ಇಂಡಿಯಾಗೆ ಆಘಾತ ಸುದ್ದಿ ಒಂದಿದೆ.
ಮೆಲ್ಬರ್ನ್‌ನಲ್ಲಿ ನಡೆಯಲಿರೋ 4ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡಲು ಪ್ಲಾನ್​ ಮಾಡಿಕೊಂಡಿದೆ. ಹೀಗಾಗಿ ಟೀಮ್​ ಇಂಡಿಯಾದಲ್ಲಿ ಮೇಜರ್​ ಸರ್ಜರಿ ಆಗಲಿದೆ. ಅದರಲ್ಲೂ ಟೀಮ್ ಇಂಡಿಯಾ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ಮುಖ್ಯ ಕೋಚ್​ ಗೌತಮ್​ ಗಂಭೀರ್​ ಗುರಿ.
ಇಬ್ಬರು ಸ್ಪಿನ್ನರ್ಸ್​ಗೆ ಅವಕಾಶ
ಟೀಂ ಇಂಡಿಯಾ ಕಳೆದ ಪ್ರವಾಸದಲ್ಲೂ ಈ ಸ್ಟೇಡಿಯಮ್​ನಲ್ಲಿ ಇಬ್ಬರು ಸ್ಪಿನ್ ಬೌಲರ್‌ಗಳೊಂದಿಗೆ ಕಣಕ್ಕೆ ಇಳಿದಿತ್ತು. ಈ ಬಾರಿ ಕೂಡ ಟೀಮ್​ ಇಂಡಿಯಾ ಅದೇ ಫಾರ್ಮುಲಾದ ಮೊರೆ ಹೋಗಿದೆ. ಹೀಗಾಗಿ ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಸ್ಟಾರ್​ ಆಲ್​ರೌಂಡರ್​ ಆಗಿರೋ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಸಿರಾಜ್​​ ತಂಡದಿಂದಲೇ ಕೊಕ್​​
ಟೀಮ್​ ಇಂಡಿಯಾದ ಸ್ಟಾರ್​ ಬೌಲರ್​​​ ಮೊಹಮ್ಮದ್​ ಸಿರಾಜ್​​. ಕಳೆದ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ ಬೌಲ್ ಮಾಡಿರೋ ಇವರು ಈ ಬಾರಿ ಬೆಂಚ್ ಕಾಯಬಹುದು. ಇವರು ಉತ್ತಮ ಬೌಲರ್​ ಆಗಿದ್ರೂ ತಂಡಕ್ಕೆ ಬ್ಯಾಟ್​ನಿಂದ ಕಾಣಿಕೆ ನೀಡಬಲ್ಲ ಸಾಮರ್ಥ್ಯ ಕಡಿಮೆ. ಹಾಗಾಗಿ ಇಬ್ಬರು ಆಲ್​ರೌಂಡರ್​​ಗಳಿಗೆ ಅವಕಾಶ ನೀಡುವ ನಿರ್ಧಾರಕ್ಕೆ ಟೀಮ್​ ಇಂಡಿಯಾ ಬಂದಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ