ಪಂತ್​ಗೆ ಗೇಟ್​ಪಾಸ್​​; ಟೀಮ್​ ಇಂಡಿಯಾಗೆ ಸಂಜು ಸ್ಯಾಮ್ಸನ್​ ಎಂಟ್ರಿ

author-image
Ganesh Nachikethu
Updated On
ಕೊಹ್ಲಿಯಿಂದ ರೋಹಿತ್​ವರೆಗೂ.. ಎಲ್ಲರಿಂದಲೂ ಮೋಸ ಹೋದ ಟೀಮ್​ ಇಂಡಿಯಾ ಕ್ರಿಕೆಟರ್​ ಯಾರು?
Advertisment
  • ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಟೂರ್ನಿ
  • ಚಾಂಪಿಯನ್ಸ್​ ಟ್ರೋಫಿಗೆ ಟೀಮ್​ ಇಂಡಿಯಾ ಭರ್ಜರಿ ತಯಾರಿ
  • ಟೀಮ್​ ಇಂಡಿಯಾಗೆ ಸ್ಟಾರ್​ ಬ್ಯಾಟರ್​ ಸಂಜು ಸ್ಯಾಮ್ಸನ್​ ಎಂಟ್ರಿ

2025ರ ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ಭರ್ಜರಿ ತಯಾರಿ ನಡೆಯುತ್ತಿದೆ. ಹೇಗಾದ್ರೂ ಮಾಡಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಲೇಬೇಕು ಎಂದು ಟೀಮ್​ ಇಂಡಿಯಾ ಜಿದ್ದಿಗೆ ಬಿದ್ದಿದೆ.

ನಾಳೆ ಅಲ್ಲ ನಾಡಿದ್ದು ಎಂದರೆ ಫೆಬ್ರವರಿ 20ಕ್ಕೆ ಟೀಮ್​ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಇದಕ್ಕೂ ಮೊದಲು ಟೀಮ್ ಇಂಡಿಯಾದ ಸ್ಟಾರ್​ ವಿಕೆಟ್​ ಕೀಪರ್​ ಬ್ಯಾಟರ್ ಪಂತ್​ ಬಗ್ಗೆ ಬಿಗ್​ ಅಪ್ಡೇಟ್​ ಹೊರಬಿದ್ದಿದೆ.

ಪಂತ್​ಗೆ ಏನಾಯ್ತು?

ಟೀಮ್​ ಇಂಡಿಯಾದ ಸ್ಟಾರ್​ ವಿಕೆಟ್​ ಕೀಪರ್​ ಬ್ಯಾಟರ್​​​ ರಿಷಬ್​ ಪಂತ್. ಇವರು ಪ್ರಾಕ್ಟೀಸ್​​ ಮಾಡುವಾಗ ತೀವ್ರವಾಗಿ ಗಾಯಗೊಂಡಿದ್ದಾರೆ. ಇವರ ಮೊಣಕಾಲಿಗೆ ಗಾಯವಾಗಿದೆ. ಕಳೆದ ಸಲ ಅಪಘಾತಕ್ಕೆ ಒಳಗಾಗಿದ್ದ ಪಂತ್​ ಅವರ ಮೊಣಕಾಲಿಗೆ ಸರ್ಜರಿ ಆಗಿತ್ತು. ಈಗ ಅದೇ ಜಾಗದಲ್ಲಿ ಗಾಯ ಆಗಿದೆ ಎಂದು ತಿಳಿದು ಬಂದಿದೆ.

ರಿಷಬ್​ ಪಂತ್ ಬದಲಿಗೆ ಸ್ಯಾಮ್ಸನ್​ಗೆ ಸ್ಥಾನ

ರಿಷಬ್​ ಪಂತ್​​ ಗಾಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಒಂದು ವೇಳೆ ಪಂತ್​ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ ಹೊರಬಿದ್ದರೆ ಟೀಮ್​ ಇಂಡಿಯಾಗೆ ಇದು ಆಘಾತ ತರುತ್ತದೆ. ಇವರ ಬದಲಿಗೆ ಟೀಮ್​ ಇಂಡಿಯಾಗೆ ಸಂಜು ಸ್ಯಾಮ್ಸನ್​​ ಸೇರಿಕೊಳ್ಳಬಹುದು.

ಭಾರತ ತಂಡದಲ್ಲಿ ಕೆಎಲ್ ರಾಹುಲ್ ಅವರೊಂದಿಗೆ 2ನೇ ವಿಕೆಟ್​ ಕೀಪರ್​ ಆಗಿ ಪಂತ್​ ಆಯ್ಕೆಯಾಗಿದ್ದರು. ಟೀಮ್​ ಇಂಡಿಯಾ ಪ್ಲೇಯಿಂಗ್​ ಎಲೆವೆನ್​ನಲ್ಲಿ ಕೆ.ಎಲ್​​ ರಾಹುಲ್ ಮೊದಲ ವಿಕೆಟ್​​ ಕೀಪರ್​ ಆಗಿ ಆಡಲಿದ್ದಾರೆ ಎಂದು ಕೋಚ್​ ಗೌತಮ್​ ಗಂಭೀರ್​ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಪಂತ್​​ ಜಾಗದಲ್ಲಿ ಸಂಜು ಸ್ಯಾಮ್ಸನ್​ಗೆ ಅವಕಾಶ ಸಿಗಬಹುದು ಎನ್ನುವ ಮಾತುಗಳು ಕೇಳಿ ಬಂದಿವೆ. ಒಂದು ವೇಳೆ ಸಂಜು ಸ್ಯಾಮ್ಸನ್​​ ಟೀಮ್​ ಇಂಡಿಯಾಗೆ ಎಂಟ್ರಿ ನೀಡಿದರೆ ಆನೆಬಲ ಬಂದಂತಾಗುತ್ತದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment