ಟೀಮ್​ ಇಂಡಿಯಾಗೆ ಮಾಸ್ಟರ್​ ಸ್ಟ್ರೋಕ್​​; 3ನೇ ಟಿ20 ಪಂದ್ಯದಿಂದ ಸ್ಟಾರ್​ ಪ್ಲೇಯರ್​ ಔಟ್​

author-image
Ganesh Nachikethu
Updated On
ಬಾಂಗ್ಲಾ ವಿರುದ್ಧ ಟಿ20 ಸರಣಿ; ಟೀಮ್​ ಇಂಡಿಯಾದಿಂದ ಧೋನಿ ಶಿಷ್ಯನಿಗೆ ಕೊಕ್​!
Advertisment
  • ಬಾಂಗ್ಲಾ ವಿರುದ್ಧ ಟೀಮ್​ ಇಂಡಿಯಾ ಕೊನೆ ಟಿ20 ಪಂದ್ಯ!
  • ಕೊನೆ ಟಿ20 ಪಂದ್ಯಕ್ಕೆ ಟೀಮ್​ ಇಂಡಿಯಾದಲ್ಲಿ ಬದಲಾವಣೆ
  • ಟೀಮ್​ ಇಂಡಿಯಾದಿಂದ ಸ್ಟಾರ್​ ಆಟಗಾರನಿಗೆ ಕೊಕ್​ ಸಾಧ್ಯತೆ

ಬಾಂಗ್ಲಾದೇಶ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್​ ಇಂಡಿಯಾ 2-0 ಸರಣಿಯಿಂದ ಗೆದ್ದು ಬೀಗಿದೆ. ಈಗ ಕ್ಯಾಪ್ಟನ್​ ಸೂರ್ಯಕುಮಾರ್​ ಯಾದವ್​ ನೇತೃತ್ವದ ಟೀಮ್​​ ಇಂಡಿಯಾ ಕೊನೆಯ ಪಂದ್ಯ ಗೆದ್ದು ಬಾಂಗ್ಲಾ ವಿರುದ್ಧದ ಟಿ20 ಸರಣಿ ಕ್ಲೀನ್​ ಸ್ವೀಪ್​ ಮಾಡುವ ನಿರೀಕ್ಷೆಯಲ್ಲಿದೆ.

ಟೀಮ್​ ಇಂಡಿಯಾ, ಬಾಂಗ್ಲಾದೇಶ ನಡುವಿನ ಕೊನೆ ಟಿ20 ಪಂದ್ಯ ಹೈದರಾಬಾದ್​ನಲ್ಲಿರೋ ರಾಜೀವ್ ಗಾಂಧಿ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆಯಲಿದೆ. ಕೊನೆ ಟಿ20 ಪಂದ್ಯಕ್ಕೆ ಕ್ಯಾಪ್ಟನ್​ ಸೂರ್ಯ ಟೀಮ್​ ಇಂಡಿಯಾ ಪ್ಲೇಯಿಂಗ್​ ಎಲೆವೆನ್​ನಲ್ಲಿ ಭಾರೀ ಬದಲಾವಣೆ ಮಾಡುವ ಸಾಧ್ಯತೆ ಇದೆ. ಭಾರತ ಸತತ 2 ಪಂದ್ಯ ಗೆದ್ದಿರೋ ಕಾರಣ 3ನೇ ಪಂದ್ಯದಲ್ಲಿ ಪ್ರಯೋಗ ನಡೆಯಲಿದೆ.

publive-image

ಸಂಜು ಸ್ಯಾಮ್ಸನ್​ಗೆ ಕೊಕ್​

ಬಾಂಗ್ಲಾದೇಶ ವಿರುದ್ಧದ ಮೊದಲನೇ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್​ ಮಾಡಿದ್ದ ಟೀಮ್ ಇಂಡಿಯಾದ ವಿಕೆಟ್‌ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ 2ನೇ ಮ್ಯಾಚ್​​ನಲ್ಲಿ ಕೇವಲ 10 ರನ್​ಗೆ ಔಟಾದ್ರು. ಎರಡು ಪಂದ್ಯದಲ್ಲೂ ಸಂಜು ಸ್ಯಾಮ್ಸನ್​​ ಇಂಪ್ಯಾಕ್ಟ್​ ಇನ್ನಿಂಗ್ಸ್​ ಏನು ಆಡಲಿಲ್ಲ. ಹಾಗಾಗಿ ಕೊನೆ ಪಂದ್ಯದ ಪ್ಲೇಯಿಂಗ್​ ಎಲೆವೆನ್​​ನಿಂದ ಸ್ಯಾಮ್ಸನ್​ಗೆ ಕೊಕ್​ ಸಿಗೋ ಸಾಧ್ಯತೆ ಇದೆ.

86 ರನ್​ಗಳಿಂದ ಗೆದ್ದು ಬೀಗಿದ್ದ ಭಾರತ

ಇತ್ತೀಚೆಗೆ ಅರುಣ್​​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟೀಮ್​ ಇಂಡಿಯಾ 86 ರನ್​ಗಳಿಂದ ಗೆದ್ದು ಬೀಗಿದೆ. ಈ ಮೂಲಕ 2-0 ಅಂತರದಿಂದ ಸರಣಿಯನ್ನು ಭಾರತ ತಂಡ ವಶಪಡಿಸಿಕೊಂಡಿದೆ. 2ನೇ ಟಿ20 ಪಂದ್ಯ ಗೆಲ್ಲಲು ಪ್ರಮುಖ ಕಾರಣ ಟೀಮ್​ ಇಂಡಿಯಾದ ಯುವ ಆಲ್​ರೌಂಡರ್ ನಿತೀಶ್​ ಕುಮಾರ್​ ರೆಡ್ಡಿ. 3ನೇ ಪಂದ್ಯದಲ್ಲೂ ಭಾರತ ಕಮಾಲ್​ ಮಾಡಲು ಎದುರು ನೋಡುತ್ತಿದೆ.

ಇದನ್ನೂ ಓದಿ:ಆಸ್ಟ್ರೇಲಿಯಾ, ಟೀಮ್​ ಇಂಡಿಯಾ ಮಧ್ಯೆ ಮಹತ್ವದ ಟೆಸ್ಟ್​ ಸೀರೀಸ್​​; ಬಿಗ್​ ಶಾಕ್​ ಕೊಟ್ಟ ಸ್ಟಾರ್​ ಪ್ಲೇಯರ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment