ಕೊಹ್ಲಿ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ ಮೊಹಮ್ಮದ್​ ಶಮಿ; ಇಬ್ಬರ ಮಧ್ಯೆ ಏನಾಯ್ತು?

author-image
Ganesh Nachikethu
Updated On
ಕೊಹ್ಲಿ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ ಮೊಹಮ್ಮದ್​ ಶಮಿ; ಇಬ್ಬರ ಮಧ್ಯೆ ಏನಾಯ್ತು?
Advertisment
  • ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್​​ ವಿರಾಟ್​ ಕೊಹ್ಲಿ ವಿರುದ್ಧ ಆಕ್ರೋಶ
  • 2019ರ ಏಕದಿನ ವಿಶ್ವಕಪ್​ ವಿಚಾರವಾಗಿ ಮೊಹಮ್ಮದ್​ ಶಮಿ ಅಸಮಾಧಾನ
  • ನನ್ನನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ವಿರಾಟ್​​ ವಿರುದ್ಧ ಸಿಡಿಮಿಡಿ..!

ಟೀಮ್​​ ಇಂಡಿಯಾ, ಇಂಗ್ಲೆಂಡ್​​ 5 ಪಂದ್ಯಗಳ ಟಿ20 ಸರಣಿ ನಡೆಯುತ್ತಿದೆ. ಈಗಾಗಲೇ ಮೂರು ಟಿ20 ಪಂದ್ಯಗಳು ಮುಗಿದಿದ್ದು, ಟೀಮ್​​​ ಇಂಡಿಯಾ 2 ಪಂದ್ಯಗಳು ಗೆದ್ದಿದೆ. 3ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್​ ಭರ್ಜರಿ ಗೆಲುವು ಸಾಧಿಸಲಿದೆ. ಭಾರತ ತಂಡದಲ್ಲಿ ಸ್ಟಾರ್​ ಬೌಲರ್​ ಮೊಹಮ್ಮದ್​ ಶಮಿ 3ನೇ ಟಿ20 ತಂಡದಲ್ಲಿ ಸ್ಥಾನ ಪಡೆದರು.

ಇನ್ನು, ಇದಾದ ಬೆನ್ನಲ್ಲೇ ಮುಂದಿನ ವಾರದಿಂದಲೇ ಇಂಗ್ಲೆಂಡ್​, ಭಾರತ ನಡುವೆ 3 ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಇದು ಮುಂದಿನ ಚಾಂಪಿಯನ್ಸ್​ ಟ್ರೋಫಿಗೆ ಮಹತ್ವದ ಸರಣಿ ಆಗಿದೆ. ಈಗಾಗಲೇ ಎರಡು ಸರಣಿಗಳಿಗೂ ಬಲಿಷ್ಠ ಟೀಮ್​​ ಇಂಡಿಯಾ ಪ್ರಕಟ ಆಗಿದೆ. ಕ್ಯಾಪ್ಟನ್​ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಮೈದಾನಕ್ಕಿಳಿದು ತಯಾರಿ ಶುರು ಮಾಡಿದ್ದಾರೆ.

ಇತ್ತೀಚೆಗಷ್ಟೇ ಟೀಮ್​ ಇಂಡಿಯಾ ಮಾಜಿ ಕ್ರಿಕೆಟರ್​ ಅಮಿತ್​ ಮಿಶ್ರಾ ಸೇರಿದಂತೆ ಅಂಬಾಟಿ ರಾಯುಡು ವಿರಾಟ್​ ಕೊಹ್ಲಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ಈ ಬೆನ್ನಲ್ಲೇ ಟೀಮ್​ ಇಂಡಿಯಾ ಹಾಲಿ ಕ್ರಿಕೆಟರ್​ ಮೊಹಮ್ಮದ್​ ಶಮಿ ವಿರಾಟ್​ ಕೊಹ್ಲಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಮೊಹಮ್ಮದ್​ ಶಮಿ ಹೇಳಿದ್ದೇನು..?

2019ರ ಏಕದಿನ ವಿಶ್ವಕಪ್​ಗೆ ನಾನು ಆಯ್ಕೆಯಾಗಿದ್ದೆ. ನನ್ನನ್ನು ಕೇವಲ 4 ಪಂದ್ಯಗಳಲ್ಲಿ ಮಾತ್ರ ಆಡಿಸಲಾಯ್ತು. ನಾನು 4 ಪಂದ್ಯಗಳಲ್ಲಿ ಬರೋಬ್ಬರಿ 14 ವಿಕೆಟ್​ ತೆಗೆದಿದ್ದೆ. ಆದ್ರೆ, ಇನ್ನೂ 5 ಪಂದ್ಯಗಳಲ್ಲಿ ನನಗೆ ಆಡಲು ಅವಕಾಶ ನೀಡಲಿಲ್ಲ. ಆಗ ವಿರಾಟ್​ ಕ್ಯಾಪ್ಟನ್​​, ರವಿಶಾಸ್ತ್ರಿ ಅವರು ಟೀಮ್​ ಇಂಡಿಯಾ ಹೆಡ್​ ಕೋಚ್​ ಆಗಿದ್ರು. ನನಗೂ ಈಗಲೂ ಅದರ ಬಗ್ಗೆ ಪ್ರಶ್ನೆ ಕೇಳಬೇಕು ಅನಿಸುತ್ತಿಲ್ಲ. ಅಂದು ನನಗೆ ಅವಕಾಶ ನೀಡಿದ್ರೆ ನ್ಯೂಜಿಲೆಂಡ್​ ವಿರುದ್ಧ ಗೆಲ್ಲುತ್ತಿದ್ದೆವು ಎಂದರು. ಈ ಮೂಲಕ ಪರೋಕ್ಷವಾಗಿ ಕೊಹ್ಲಿ, ರವಿಶಾಸ್ತ್ರಿ ವಿರುದ್ಧ ಆಕ್ರೋಶ ಹೊರಹಾಕಿದ್ರು.

ಇದನ್ನೂ ಓದಿ:ಟೀಮ್ ಇಂಡಿಯಾದಲ್ಲಿ ಮುಖ್ಯಕೋಚ್ ರಾಜಕೀಯ.. ಕೊಹ್ಲಿ ಶಿಷ್ಯನಿಗೆ ಅವಕಾಶ​ ಸಿಗೋದು ಡೌಟ್

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment