ಆಸೀಸ್​​ ವಿರುದ್ಧ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ; ಟೀಮ್​ ಇಂಡಿಯಾಗೆ ಬಂತು ಮೆಗಾ ಪವರ್

author-image
Ganesh Nachikethu
Updated On
ಮೊದಲ ಟೆಸ್ಟ್​ ಪಂದ್ಯದಿಂದ ಸ್ಟಾರ್​ ಆಟಗಾರರಿಗೆ ಕೊಕ್​​; ಟೀಮ್​ ಇಂಡಿಯಾದಲ್ಲಿ ಇವರಿಗೆ ಸ್ಥಾನ
Advertisment
  • ಅಡಿಲೇಡ್​ನಲ್ಲಿ ನಡೆದ 2ನೇ ಟೆಸ್ಟ್​ ಪಂದ್ಯದಲ್ಲಿ ಹೀನಾಯ ಸೋಲು
  • 2ನೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಭಾರತ ತಂಡ
  • ಬ್ರಿಸ್ಬೇನ್‌ನಲ್ಲಿ ನಡೆಯಲಿರೋ 3ನೇ ಟೆಸ್ಟ್​ ಭಾರತ ತಂಡ ಗೆಲ್ಲಲೇಬೇಕು

ಪರ್ತ್​​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ 290ಕ್ಕೂ ಹೆಚ್ಚು ರನ್​​ಗಳಿಂದ ಗೆದ್ದು ವಿಶ್ವದಾಖಲೆ ಬರೆದಿದ್ದ ಟೀಮ್​​ ಇಂಡಿಯಾ 2ನೇ ಮ್ಯಾಚ್​​ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಮುಗ್ಗರಿಸಿದೆ. ಅಡಿಲೇಡ್​ನಲ್ಲಿ ನಡೆದ 2ನೇ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದೆ.

ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಮುನ್ನ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್​​ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದೆ. ಬರೋಬ್ಬರಿ 20 ವರ್ಷಗಳ ನಂತರ ತವರಿನಲ್ಲೇ ಟೀಮ್​ ಇಂಡಿಯಾ ನ್ಯೂಜಿಲೆಂಡ್​ ವಿರುದ್ಧ 3-0 ಅಂತರದಿಂದ ಟೆಸ್ಟ್​ ಸೀರೀಸ್​ನಲ್ಲಿ ವೈಟ್​ ವಾಶ್​ ಆಗಿದೆ.

ಇನ್ನು, ಈ ಸೋಲಿನೊಂದಿಗೆ ಟೀಮ್​ ಇಂಡಿಯಾದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್ ಹಾದಿ ಮತ್ತಷ್ಟು ಕಠಿಣಗೊಂಡಿದೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ 4 ಪಂದ್ಯ ಗೆಲ್ಲಲೇಬೇಕಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಲ್ಕು ಗೆದ್ದರಷ್ಟೇ ಫೈನಲ್​ಗೆ ಸುಗಮವಾಗಿ ಅರ್ಹತೆ ಪಡೆಯಲ್ಲಿದೆ. ಇಲ್ಲದಿದ್ದರೆ, ಮೂರನೇ ಬಾರಿಗೆ ಫೈನಲ್ ಆಡುವ ಟೀಮ್​ ಇಂಡಿಯಾ ಕನಸು ಭಗ್ನಗೊಳ್ಳಲಿದೆ. ಇದರ ಮಧ್ಯೆ ಟೀಮ್​ ಇಂಡಿಯಾಗೆ ಗುಡ್​ನ್ಯೂಸ್​ ಒಂದಿದೆ.

3ನೇ ಪಂದ್ಯಕ್ಕೆ ಸ್ಟಾರ್​ ಆಲ್​ರೌಂಡರ್​ ಎಂಟ್ರಿ

ಡಿಸೆಂಬರ್​ 14ನೇ ತಾರೀಕಿನಿಂದ ಬ್ರಿಸ್ಬೇನ್‌ನಲ್ಲಿ ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ಮಧ್ಯೆ 3ನೇ ಟೆಸ್ಟ್​ ಪಂದ್ಯ ನಡೆಯಲಿದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮಹತ್ವದ ಟೆಸ್ಟ್​ನಿಂದ ಟೀಮ್ ಇಂಡಿಯಾ ಅನುಭವಿ ಆಫ್‌ ಸ್ಪಿನ್‌ ಬೌಲರ್‌ ಅಶ್ವಿನ್‌ ಬದಲಿಗೆ ವಾಷಿಂಗ್ಟನ್‌ ಸುಂದರ್‌ ಅವರಿಗೆ ಚಾನ್ಸ್ ನೀಡುವ ಸಾಧ್ಯತೆ ಇದೆ.

ವಾಷಿಂಗ್ಟನ್‌ ಸುಂದರ್‌ ಏಕೆ?

ಗಬ್ಬಾ ಪಿಚ್‌ನಲ್ಲಿ ಸ್ಪಿನ್‌ ಬೌಲರ್‌ಗಳಿಗೆ ಹೆಚ್ಚಿನ ನೆರವು ಇಲ್ಲ. ಅಶ್ವಿನ್‌ಗೆ ಹೋಲಿಸಿದರೆ ವಾಷಿಂಗ್ಟನ್‌ ಈ ಪಿಚ್‌ನಲ್ಲಿ ಪರಿಣಾಮಕಾರಿ ಆಗಿ ಆಡಬಲ್ಲರು. ಈ ಪಿಚ್‌ನಲ್ಲಿ ಹೆಚ್ಚಿನ ಬೌನ್ಸ್‌ ಇದ್ದು, ವಾಷಿಂಗ್ಟನ್‌ ಸುಂದರ್‌ ಇದರ ಲಾಭವನ್ನು ಪಡೆಯಬಹುದು. ಇವರು ಒಬ್ಬ ಉತ್ತಮ ಆಲ್‌ರೌಂಡರ್. ಮಧ್ಯಮ ಕೆಳಕ್ರಮಾಂಕದಲ್ಲಿ ಪರಿಣಾಮಕಾರಿ ಬ್ಯಾಟಿಂಗ್ ನಡೆಸಬಲ್ಲರು.

ಇದನ್ನೂ ಓದಿ:ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​​; ಸ್ಟಾರ್​​ ಪ್ಲೇಯರ್​ ಎಂಟ್ರಿ; ಟೀಮ್​ ಇಂಡಿಯಾಗೆ ಬಂತು ಆನೆಬಲ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment