ಟೆಸ್ಟ್​​ ತಂಡದಿಂದ ಟೀಮ್​ ಇಂಡಿಯಾ ಸ್ಟಾರ್​ ಆಟಗಾರ ಔಟ್​​.. ರೋಹಿತ್​ ಆಪ್ತನಿಗೆ ಭರ್ಜರಿ ಆಫರ್​​!

author-image
Ganesh Nachikethu
Updated On
ಇಂಗ್ಲೆಂಡ್​ ವಿರುದ್ಧ ಪ್ರತೀಕಾರ.. ಭಾರತ ತಂಡದ ಗೆಲುವಿಗೆ ಈ ಸ್ಟಾರ್​ ಆಟಗಾರರೇ ಕಾರಣ!
Advertisment
  • ಮುಂದಿನ ತಿಂಗಳಲ್ಲಿ 10 ಟೆಸ್ಟ್​ ಆಡಲಿರೋ ಟೀಮ್​ ಇಂಡಿಯಾ..!
  • ಬಾಂಗ್ಲಾದೇಶ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಸರಣಿ
  • ಸ್ಟಾರ್​ ಆಟಗಾರನಿಗೆ ಟೆಸ್ಟ್​ ತಂಡದಲ್ಲಿ ಸ್ಥಾನ ಸಿಗೋದು ಫುಲ್​ ಡೌಟ್​​

ಟೀಮ್ ಇಂಡಿಯಾಗೆ ಮತ್ತೆ ಕಮ್​ಬ್ಯಾಕ್​ ಮಾಡಲು ದೇಶೀಯ ಟೂರ್ನಿ ಗತಿ ಅನ್ನೋದು ಇಶಾನ್​ ಕಿಶನ್​ಗೆ ಅರಿವಾಗಿದೆ. ಹಾಗಾಗಿ ಜಾರ್ಖಂಡ್ ತಂಡದ ಪರ ಬ್ಯಾಟ್ ಬೀಸಲು ಇಶಾನ್‌ ಕಿಶನ್‌ ರೆಡಿಯಾಗಿದ್ದಾರೆ. ಇಶಾನ್​ ಅವರೇ ಬುಚ್ಚಿ ಬಾಬು ಟ್ರೋಫಿಯಲ್ಲಿ ಜಾರ್ಖಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ಟೂರ್ನಿ ಆಗಸ್ಟ್​​ 15ನೇ ತಾರೀಕಿನಿಂದ ಶುರುವಾಗಲಿದೆ.

ಇಶಾನ್‌ ಕಿಶನ್‌ ಅಂಡರ್‌ 19 ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಜತೆಗೆ ತವರು ತಂಡವಾದ ಜಾರ್ಖಂಡ್​ ಟೀಮ್​​ ಕ್ಯಾಪ್ಟನ್​ ಕೂಡ ಆಗಿದ್ದರು. ಸದ್ಯದಲ್ಲೇ ಚೆನ್ನೈನಲ್ಲಿ ಜಾರ್ಖಂಡ್‌ ತಂಡವನ್ನು ಸೇರಿಕೊಳ್ಳಲಿದ್ದಾರೆ. ತಾವು ದೇಶೀಯ ಟೂರ್ನಿಗಳಿಗೆ ಲಭ್ಯವಿರುವುದಾಗಿ ಜಾರ್ಖಂಡ್‌ ಕ್ರಿಕೆಟ್ ಸಂಸ್ಥೆಗೆ ತಿಳಿಸಿದ್ದಾರೆ. ಅಲ್ಲದೆ ಈ ವರ್ಷ ರಣಜಿ ಟ್ರೋಫಿಯಲ್ಲೂ ಜಾರ್ಖಂಡ್ ಪರ ಆಡುವ ಸಾಧ್ಯತೆ ಇದೆ. ಇದು ಇಶಾನ್‌ ಕಿಶನ್‌ ಸುಮಾರು ಎರಡು ವರ್ಷಗಳ ನಂತರ ದೇಶೀಯ ಕ್ರಿಕೆಟ್‌ಗೆ ಮರಳಿದ್ದಾರೆ.

publive-image

ದೇಶೀಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡದಲ್ಲಿ ಮತ್ತೆ ಸ್ಥಾನ ಪಡೆಯುವುದು ಇಶಾನ್‌ ಕಿಶನ್‌ ಕನಸು. ಮುಂದಿನ ತಿಂಗಳಲ್ಲಿ ಟೀಮ್ ಇಂಡಿಯಾ ಬಾಂಗ್ಲಾದೇಶ, ನ್ಯೂಜಿಲೆಂಡ್, ಮತ್ತು ಆಸ್ಟ್ರೇಲಿಯಾ ವಿರುದ್ಧ ಒಟ್ಟು 10 ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಇಶಾನ್‌ ಕಿಶನ್‌ ರೆಡ್‌ ಬಾಲ್‌ ಕ್ರಿಕೆಟ್ ಆಡಲು ತಯಾರಾಗಿದ್ದಾರೆ.

ಟೆಸ್ಟ್​ ತಂಡದಲ್ಲಿ ಸ್ಥಾನ ಸಿಗೋದು ಡೌಟ್​..!

ಟೀಮ್​ ಇಂಡಿಯಾದ ಸ್ಟಾರ್​ ಪ್ಲೇಯರ್​ ಇಶಾನ್‌ ಕಿಶನ್‌ ಟೆಸ್ಟ್‌ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವುದು ಡೌಟ್‌ ಎಂದೇ ಹೇಳಲಾಗುತ್ತಿದೆ. ಈ ಹಿಂದೆ ಇಶಾನ್‌ ರಿಷಭ್‌ ಪಂತ್‌ ಅನುಪಸ್ಥಿತಿಯಲ್ಲಿ ಭಾರತ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಆದರೆ, ರಿಷಭ್‌ ಪಂತ್‌ ಗಾಯದಿಂದ ಸಂಪೂರ್ಣ ಚೇತರಿಕೆ ಕಂಡಿದ್ದು, ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡಿದ್ದಾರೆ. 2ನೇ ವಿಕೆಟ್‌ ಕೀಪರ್‌ ಆಗಿ ಧ್ರುವ್ ಜುರೇಲ್‌ ಆಯ್ಕೆ ಆಗುವುದು ಬಹುತೇಕ ಖಚಿತ. ಹಾಗಾಗಿ ಇಶಾನ್‌ ಅವರಿಗೆ ಟೆಸ್ಟ್​ಗೆ ಕಮ್​ಬ್ಯಾಕ್​ ಮಾಡಲು ಚಾನ್ಸ್​ ಕಡಿಮೆ ಇದೆ.

ಇದನ್ನೂ ಓದಿ:ಇಶಾನ್​ ಕಿಶನ್​​ಗೆ ಕ್ಯಾಪ್ಟನ್ಸಿ ಪಟ್ಟ.. ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​​​ ಸುವರ್ಣಾವಕಾಶ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment