ಟೀಮ್​​ ಇಂಡಿಯಾಗೆ ಬಿಗ್​ ಶಾಕ್​​; ದಿಢೀರ್​​ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ ಸ್ಟಾರ್​ ಕ್ರಿಕೆಟರ್​​

author-image
Ganesh Nachikethu
Updated On
ಟೀಮ್​​ ಇಂಡಿಯಾಗೆ ಬಿಗ್​ ಶಾಕ್​​; ದಿಢೀರ್​​ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ ಸ್ಟಾರ್​ ಕ್ರಿಕೆಟರ್​​
Advertisment
  • ನ್ಯೂಜಿಲೆಂಡ್​​ ತಂಡದ ವಿರುದ್ಧ ಟೆಸ್ಟ್​​ ಸರಣಿ ಸೋಲು
  • ಹೀನಾಯವಾಗಿ ಸೋಲು ಕಂಡ ಟೀಮ್​ ಇಂಡಿಯಾ..!
  • ಇದರ ಮಧ್ಯೆ ಭಾರತಕ್ಕೆ ಬಿಗ್​​ ಶಾಕ್​​ ಕೊಟ್ಟ ಪ್ಲೇಯರ್​​

ಇತ್ತೀಚೆಗೆ ಮುಂಬೈನ ವಾಂಖೆಡೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಕೊನೆಯ ಟೆಸ್ಟ್​ ಪಂದ್ಯದಲ್ಲಿ ನ್ಯೂಜಿಲೆಂಡ್​ ತಂಡದ ವಿರುದ್ಧ ಟೀಮ್​ ಇಂಡಿಯಾ 25 ರನ್​​ಗಳಿಂದ ಸೋತಿದೆ. ಈ ಮೂಲಕ ನ್ಯೂಜಿಲೆಂಡ್​ ತಂಡ 3-0 ಅಂತರದಲ್ಲಿ ಟೆಸ್ಟ್​​ ಸರಣಿಯನ್ನು ಟೀಮ್​ ಇಂಡಿಯಾ ವಿರುದ್ಧ ವೈಟ್​ವಾಶ್​​ ಮಾಡಿದೆ. ಇದರ ಮಧ್ಯೆ ಟೀಮ್​ ಇಂಡಿಯಾಗೆ ಬಿಗ್​ ಶಾಕಿಂಗ್​ ನ್ಯೂಸ್​ ಒಂದಿದೆ. ಭಾರತ ತಂಡದ ಸ್ಟಾರ್​ ಆಟಗಾರ ನಿವೃತ್ತಿ ಘೋಷಿಸಿದ್ದಾರೆ.

ಟೀಮ್​ ಇಂಡಿಯಾದ ಸ್ಟಾರ್​ ವಿಕೆಟ್​ ಕೀಪರ್​​​ ವೃದ್ಧಿಮನ್ ಸಹಾ. ಇವರು ಮಧ್ಯಮ ಕ್ರಮಾಂಕದ ಬ್ಯಾಟರ್​​ ಕೂಡ ಹೌದು. ವಿಕೆಟ್​​​ ಕೀಪಿಂಗ್​​ ಮತ್ತು ಬ್ಯಾಟಿಂಗ್​ನಲ್ಲಿ ಅದ್ಭುತ ಕೌಶಲ್ಯ ಹೊಂದಿದ್ದಾರೆ. ಮಹತ್ವದ ಬೆಳವಣಿಗೆ ಒಂದರಲ್ಲಿ ವೃದ್ಧಿಮನ್ ಸಹಾ ಏಕಾಏಕಿ ನಿವೃತ್ತಿ ಘೋಷಿಸಿ ಶಾಕ್​ ಕೊಟ್ಟಿದ್ದಾರೆ.

ನಿವೃತ್ತಿ ಬಗ್ಗೆ ಮೌನ ಮುರಿದ ವಿಕೆಟ್ ಕೀಪರ್

ಇದೇ ನನ್ನ ಕೊನೆಯ ಸೀಸನ್‌. ಬಂಗಾಳ ತಂಡವನ್ನು ಪ್ರತಿನಿಧಿಸಿದ ಗೌರವ ನನಗಿದೆ. ನಿವೃತ್ತಿಗೂ ಮುನ್ನ ರಣಜಿ ಕ್ರಿಕೆಟ್​ ಮಾತ್ರ ಆಡಲಿದ್ದೇನೆ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು ವೃದ್ಧಿಮನ್ ಸಹಾ.

ಯಾರು ಈ ವೃದ್ಧಿಮನ್ ಸಹಾ?

ಟೀಮ್ ಇಂಡಿಯಾದಲ್ಲಿ ಮಹೇಂದ್ರ ಸಿಂಗ್ ಧೋನಿ ಬಳಿಕ ಹಲವು ವರ್ಷಗಳ ಕಾಲ ವಿಕೆಟ್ ಕೀಪಿಂಗ್​ ಮಾಡಿದವರು ವೃದ್ಧಿಮನ್ ಸಹಾ. ತಂಡಕ್ಕೆ ಅಗತ್ಯವಿದ್ದಾಗ ಸಮಯೋಚಿತ ಬ್ಯಾಟಿಂಗ್ ಮೂಲಕ ನೆರವಾದವರು. ಇವರು ಟೀಮ್​​​ ಇಂಡಿಯಾ ಪರ ಮಾತ್ರವಲ್ಲ ಐಪಿಎಲ್​​ನಲ್ಲೂ ಅಮೋಘ ಪ್ರದರ್ಶನ ನೀಡಿದ್ರು.

ಐಪಿಎಲ್​​ನಲ್ಲೂ ಅದ್ಭುತ ಪ್ರದರ್ಶನ

ವೃದ್ಧಿಮನ್ ಸಹಾ ಅವರು ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಇದುವರೆಗೂ 5 ತಂಡಗಳನ್ನು ಪ್ರತಿನಿಧಿಸಿದ್ದಾರೆ. ಕೆಕೆಆರ್​​, ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ಸನ್​ರೈಸರ್ಸ್​ ಹೈದರಾಬಾದ್ ಮತ್ತು ಗುಜರಾತ್ ಟೈಟನ್ಸ್ ಪರ ಆಡಿದ್ರು.

ಕ್ರಿಕೆಟ್ ಬದುಕು ಹೇಗಿತ್ತು?

ಟೀಮ್ ಇಂಡಿಯಾ ಪರ ವೃದ್ಧಿಮನ್ ಸಹಾ 40 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಸುಮಾರು 29.41ರ ಆವರೇಜ್​​​ನಲ್ಲಿ 1353 ರನ್‌ ಕಲೆ ಹಾಕಿದ್ದಾರೆ. ಈ ಪೈಕಿ 3 ಶತಕ ಹಾಗೂ 6 ಅರ್ಧಶತಕಗಳು ಸೇರಿವೆ. 9 ಏಕದಿನ ಪಂದ್ಯಗಳನ್ನು ಆಡಿದ್ದು, 41 ರನ್‌ ಸಿಡಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 138 ಪಂದ್ಯಗಳನ್ನು ಆಡಿ 7013 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 14 ಶತಕ ಹಾಗೂ 43 ಅರ್ಧಶತಕಗಳು ಸೇರಿವೆ.

ಇದನ್ನೂ ಓದಿ: ಹಾಸನಾಂಬ ದರ್ಶನಕ್ಕೆ ತೆರೆ; ಈ ಬಾರಿ ದೇವಾಲಯಕ್ಕೆ ಬಂದ ಆದಾಯ ಎಷ್ಟು ಕೋಟಿ? ಕೇಳಿದ್ರೆ ಶಾಕ್ ಆಗ್ತೀರಾ!​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment