/newsfirstlive-kannada/media/post_attachments/wp-content/uploads/2025/01/TEAM_INDIA-3.jpg)
ಬಹುನಿರೀಕ್ಷಿತ 2025ರ ಚಾಂಪಿಯನ್ಸ್ ಟ್ರೋಫಿಗೆ ಟೀಮ್​ ಇಂಡಿಯಾ ಪ್ರಕಟವಾಗಿದೆ. ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ನೇತೃತ್ವದಲ್ಲಿ ಬಿಸಿಸಿಐ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಅಳೆದು ತೂಗಿ ಬಲಿಷ್ಠ ಟೀಮ್​​ ಇಂಡಿಯಾ ಅನೌನ್ಸ್​ ಮಾಡಲಾಗಿದೆ.
ಮುಂದಿನ ತಿಂಗಳು ಫೆಬ್ರವರಿ 19ನೇ ತಾರೀಕಿನಿಂದ ಚಾಂಪಿಯನ್ಸ್ ಟ್ರೋಫಿ ಶುರುವಾಗಲಿದೆ. ಪಾಕಿಸ್ತಾನ ಆಯೋಜನೆ ಮಾಡಲಿರೋ ಈ ಮಹತ್ವದ ಟೂರ್ನಿಯಲ್ಲಿ ಭಾರತ ಕೂಡ ಭಾಗವಹಿಸಲಿದೆ. ಭಾರತದ ಪಂದ್ಯಗಳು ಯುಎಇನಲ್ಲಿ ನಡೆಯಲಿವೆ.
ರೋಹಿತ್​​ಗೆ ಮತ್ತೆ ಕ್ಯಾಪ್ಟನ್ಸಿ
ಮೆಗಾ ಟೂರ್ನಮೆಂಟ್​ನಲ್ಲಿ ಟೀಮ್ ಇಂಡಿಯಾವನ್ನು ಮತ್ತೆ ಕ್ಯಾಪ್ಟನ್​ ರೋಹಿತ್​ ಶರ್ಮಾ ಲೀಡ್​ ಮಾಡಲಿದ್ದಾರೆ. ವಿರಾಟ್ ಕೊಹ್ಲಿಗೆ ಬಿಸಿಸಿಐ ಮತ್ತೆ ಮಣೆ ಹಾಕಿದೆ. ವಿಶೇಷ ಎಂದರೆ ಹಲವು ವರ್ಷಗಳ ನಂತರ ಟೀಮ್​ ಇಂಡಿಯಾ ಮೊಹಮ್ಮದ್ ಶಮಿ ಕಮ್​ಬ್ಯಾಕ್​ ಮಾಡಿದ್ದಾರೆ.
ಗಿಲ್‌ಗೆ ಉಪನಾಯಕನ ಪಟ್ಟ
ಟೀಮ್ ಇಂಡಿಯಾದ ಭರವಸೆಯ ಆಟಗಾರ ಶುಭ್ಮನ್​​ ಗಿಲ್​​. ಇವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ. ಗಿಲ್ ಅವರಿಗೆ ತಂಡದ ಉಪನಾಯಕ ಎಂದು ಘೋಷಿಸಲಾಗಿದೆ. ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ ಅವರಿಗೆ ಇದೇ ಮೊದಲ ಬಾರಿಗೆ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡುವ ಅವಕಾಶ ನೀಡಲಾಗಿದೆ.
ಟೀಮ್ ಇಂಡಿಯಾದ ಪರ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ವೇಗದ ಬೌಲರ್ ಅರ್ಷದೀಪ್ ಸಿಂಗ್‌ಗೆ ಏಕದಿನ ಕ್ರಿಕೆಟ್‌ನಲ್ಲಿ ಅವಕಾಶ ನೀಡಲಾಗಿದೆ. ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್‌ದೀಪ್ ಯಾದವ್, ರವೀಂದ್ರ ಜಡೇಜಾ ಕೂಡ ತಂಡದ ಭಾಗವಾಗಿದ್ದಾರೆ.
ಸ್ಟಾರ್​ ಆಟಗಾರರಿಗೆ ಕೊಕ್​​
ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್​​, ಮಯಾಂಕ್​ ಅಗರ್ವಾಲ್​​, ರಿಂಕು ಸಿಂಗ್​​, ಸೂರ್ಯಕುಮಾರ್​ ಯಾದವ್, ಇಶಾನ್​ ಕಿಶನ್​ ಸೇರಿದಂತೆ ಹಲವು ಸ್ಟಾರ್​ ಆಟಗಾರರಿಗೆ ಅವಕಾಶ ನೀಡಿಲ್ಲ.
ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಹೀಗಿದೆ!
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಯಶಸ್ವಿ ಜೈಸ್ವಾಲ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ.
ಇದನ್ನೂ ಓದಿ:5 ಭರ್ಜರಿ ಶತಕ; ಬರೋಬ್ಬರಿ 752 ರನ್ ಚಚ್ಚಿದ್ರೂ ಟೀಮ್​ ಇಂಡಿಯಾದಲ್ಲಿಲ್ಲ ಕನ್ನಡಿಗನಿಗೆ ಸ್ಥಾನ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us