/newsfirstlive-kannada/media/post_attachments/wp-content/uploads/2024/11/SANJU_SAMSON-2.jpg)
ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಬಲಿಷ್ಠ ಟೀಮ್ ಇಂಡಿಯಾ ಪ್ರಕಟವಾಗಿದೆ. ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್‌ಗೆ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ ಅನ್ನೋ ಚರ್ಚೆ ಜೋರಾಗಿದೆ.
ಕಳೆದ ವರ್ಷ ನವೆಂಬರ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಬ್ಯಾಕ್ ಟು ಬ್ಯಾಕ್ 2 ಶತಕ ಚಚ್ಚಿದ್ರು. ಈ ಮೂಲಕ ಅಮೋಘ ಪ್ರದರ್ಶನ ನೀಡಿದ್ರು. ಫಾರ್ಮ್‌ನಲ್ಲಿದ್ರೂ ಸಂಜು ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಅವಕಾಶ ಪಡೆಯುವಲ್ಲಿ ವಿಫಲವಾಗಿದ್ದಾರೆ. ಇವರ ಬದಲಿಗೆ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಗೆ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಆಯ್ಕೆ ಆಗಿದ್ದಾರೆ.
ಸಂಜು ಸ್ಯಾಮ್ಸನ್ ಹೊರಗುಳಿಯಲು ಕಾರಣವೇನು?
ಚಾಂಪಿಯನ್ಸ್ ಟ್ರೋಫಿ ತಂಡದಿಂದ ಹೊರಗುಳಿಯಲು ಸಂಜು ಸ್ಯಾಮ್ಸನ್ ಮಾಡಿದ ಎಡವಟ್ಟು ಕಾರಣ ಎನ್ನುವ ಚರ್ಚೆ ನಡೆಯುತ್ತಿದೆ. ಈ ವಿಚಾರವಾಗಿ ಕೇರಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಜಯೇಶ್ ಜಾರ್ಜ್ ಸಂಜು ಸ್ಯಾಮ್ಸನ್ ಅವರನ್ನು ಟೀಕಿಸಿದ್ದಾರೆ.
ಜಯೇಶ್ ಜಾರ್ಜ್ ಏನಂದ್ರು?
ವಿಜಯ್ ಹಜಾರೆ ಟ್ರೋಫಿ ಟೂರ್ನಿಯಿಂದ ಸಂಜು ಸ್ಯಾಮ್ಸನ್ ಹೊರಗುಳಿದಿದ್ದು ನಿಜ. ಅಷ್ಟು ಮಾತ್ರಕ್ಕೆ ಸಂಜು ಸ್ಯಾಮ್ಸನ್ ಅವರನ್ನು ಚಾಂಪಿಯನ್ಸ್ ಟ್ರೋಫಿ ತಂಡದಿಂದ ಏಕೆ ಹೊರಗಿಟ್ಟರು? ಎಂದು ನನಗೆ ಅರ್ಥ ಆಗುತ್ತಿಲ್ಲ. 30 ಮಂದಿ ತರಬೇತಿ ಶಿಬಿರಕ್ಕೆ ನಾನು ಲಭ್ಯವಿಲ್ಲ ಎಂದು ಸಂಜು ಸ್ಯಾಮ್ಸನ್ ಒಂದೇ ಸಾಲಿನ ಸಂದೇಶ ಕಳುಹಿಸಿದ್ದರು. ಸಂಜು ಕೇರಳ ತಂಡವನ್ನು ಲೀಡ್ ಮಾಡಲಿದ್ದಾರೆ ಎಂದು ನಾವು ಭಾವಿಸಿದ್ದೆವು. ಈಗಾಗಲೇ ಸಂಜು ಸ್ಯಾಮ್ಸನ್ ವೈಟ್-ಬಾಲ್ ಕ್ಯಾಪ್ಟನ್ ಆಗಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತಂಡವನ್ನು ಮುನ್ನಡೆಸಿದ್ದರು. ಅವರು ಮೆಸೇಜ್ ಕಳಿಸಿದ್ದೇ ವಿಜಯ್ ಹಜಾರೆ ತಂಡಕ್ಕೆ ಸೇರ್ಪಡೆಯಾಗದಿರಲು ಕಾರಣ ಎಂದರು.
ಸಂಜು ಸ್ಯಾಮ್ಸನ್ ಅಥವಾ ಯಾವುದೇ ಆಟಗಾರನಾಗಲಿ ಎಲ್ಲರಿಗೂ ರೂಲ್ಸ್ ಒಂದೇ. ಕೆಸಿಎಗೂ ಒಂದು ನೀತಿ ಎಂಬುದಿದೆ. ಸಂಜು ಸ್ಯಾಮ್ಸನ್ ತಂಡಕ್ಕೆ ಬರಲು ಯಾವುದೇ ತರಬೇತಿ ಶಿಬಿರದ ಅಗತ್ಯವಿಲ್ಲ ಎಂಬುದು ನಮಗೆ ಗೊತ್ತು. ಅವರು ಯಾವಾಗ ಬೇಕಾದ್ರೂ ಕೇರಳ ತಂಡವನ್ನು ಪ್ರತಿನಿಧಿಸಬಹುದು. ಕೆಸಿಎ ರೂಲ್ಸ್ ಫಾಲೋ ಮಾಡದೆ ಕೇರಳ ತಂಡ ಸೇರಲು ಆಗುವುದಿಲ್ಲ ಎಂದರು.
ಇದನ್ನೂ ಓದಿ:ಬರೋಬ್ಬರಿ 2 ವರ್ಷದ ನಂತರ ಟೀಮ್ ಇಂಡಿಯಾಗೆ ಸ್ಟಾರ್ ಪ್ಲೇಯರ್ ಎಂಟ್ರಿ; ಭಾರತಕ್ಕೆ ಬಂತು ಆನೆಬಲ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ