newsfirstkannada.com

ಅಗ್ನಿಪರೀಕ್ಷೆಯ ಕಣದಲ್ಲಿ ಗಿಲ್ ಗೆದ್ದಿದ್ದು ಹೇಗೆ..? ಶತಕದ ಹಿಂದಿದೆ ಒಂದು ಸೀಕ್ರೆಟ್..!

Share :

Published February 5, 2024 at 10:34am

    ಇಂಡೋ-ಇಂಗ್ಲೆಂಡ್​​ 2ನೇ ಟೆಸ್ಟ್​ ಪಂದ್ಯ

    ‘ರನ್​ಭೂಮಿ’ಯಲ್ಲಿ ಯುವರಾಜನ ದರ್ಬಾರ್

    11 ತಿಂಗಳ ಸೆಂಚುರಿ ಕೊರಗಿಗೆ ಕೊನೆಗೂ ಬಿತ್ತು ಬ್ರೇಕ್

ಇಂಡೋ-ಇಂಗ್ಲೆಂಡ್​​ ನಡುವಿನ 2ನೇ ಟೆಸ್ಟ್​ ಪಂದ್ಯ ಟೀಮ್​ ಇಂಡಿಯಾದ ಭವಿಷ್ಯದ ಕತೆಯನ್ನು ಹೇಳ್ತಿದೆ. ತಮ್ಮ ಆಟದಿಂದಲೇ ಯಂಗ್​ಸ್ಟರ್ಸ್​ ಸಂದೇಶ ರವಾನಿಸ್ತಿದ್ದಾರೆ. ಮೊನ್ನೆ ಯಶಸ್ವಿ ಜೈಸ್ವಾಲ್​.. ನಿನ್ನೆ ಶುಭ್​ಮನ್​ ಗಿಲ್​.. ಏನ್​ ಬ್ಯಾಟಿಂಗ್​ ಅಂತೀರಾ. ವೈಜಾಗ್​ನಲ್ಲಿ ಶುಭ್​ಮನ್​ ಸಾಲಿಡ್​ ಬ್ಯಾಟಿಂಗ್​ ಹೇಗಿತ್ತು?

ಇಂಡೋ-ಇಂಗ್ಲೆಂಡ್​ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾದ ಯಂಗ್​ಸ್ಟರ್​​ಗಳ ದರ್ಬಾರ್​ ಜೋರಾಗಿದೆ. ಮೊದಲ ಇನ್ನಿಂಗ್ಸ್​​ನಲ್ಲಿ ಯಶಸ್ವಿ ಜೈಸ್ವಾಲ್​ ಡಬಲ್​ ಧಮಾಕಾ ಸೃಷ್ಟಿಸಿದ್ರು. ಆಂಗ್ಲರ ದಾಳಿಯನ್ನು ಬೆಂಡೆತ್ತಿ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ರು. ಇದೀಗ 2ನೇ ಇನ್ನಿಂಗ್ಸ್​​ನಲ್ಲಿ ಸೂಪರ್​ ಸ್ಟಾರ್​​ ಶುಭ್​ಮನ್​ ಗಿಲ್​ ಸಾಲಿಡ್​ ಸೆಂಚುರಿ ಸಿಡಿಸಿದ್ದಾರೆ.

ವೈಜಾಗ್​ ‘ರನ್​ಭೂಮಿ’ಯಲ್ಲಿ ಯುವರಾಜನ ದರ್ಬಾರ್!

ವಿಶಾಖಪಟ್ಟಣಂ ಟೆಸ್ಟ್​​ನ 3ನೇ ದಿನದಾಟದಲ್ಲಿ ಯುವರಾಜನ ದರ್ಬಾರ್​ ನಡೀತು. ರನ್​ಭೂಮಿಯಲ್ಲಿ ಶುಭ್​​ಮನ್​ ಗಿಲ್​ ಇಂಗ್ಲೆಂಡ್​ ಬೌಲಿಂಗ್​ ಅಟ್ಯಾಕ್​ ಅನ್ನು ಚಿಂದಿ ಉಡಾಯಿಸಿಬಿಟ್ರು. ಸುಲಭಕ್ಕೆ ವಿಕೆಟ್​ ಕಬಳಿಸೋ ಲೆಕ್ಕಾಚಾರದಲ್ಲಿದ್ದ ಆಂಗ್ಲ ಬೌಲರ್​​ಗಳಿಗೆ ತನ್ನ ಬ್ಯಾಟ್​​ನಿಂದಲೇ ಮುಟ್ಟಿ ನೋಡುಕೊಳ್ಳುವಂತೆ ಆನ್ಸರ್​ ಕೊಟ್ಟರು.

ನಿನ್ನೆ ಶತಕ ಸಿಡಿಸೋದಕ್ಕೂ ಮುನ್ನ ಶುಭ್​ಮನ್​ ಗಿಲ್​ ಕಳಪೆ ಫಾರ್ಮ್​ನ ಸುಳಿಗೆ ಸಿಲುಕಿದ್ರು. ಕಳೆದ ವರ್ಷ ಮಾರ್ಚ್​ನಲ್ಲಿ ಆಸ್ಟ್ರೇಲಿಯಾ ಎದುರು ಶತಕ ಸಿಡಿಸಿದ್ದೇ ಕೊನೆ. ಆ ಬಳಿಕ ಬರೋಬ್ಬರಿ 12 ಇನ್ನಿಂಗ್ಸ್​ಗಳಲ್ಲಿ ಅರ್ಧಶತಕದ ಗಡಿಯನ್ನೂ ದಾಟಿರಲಿಲ್ಲ. ಹೀಗಾಗಿ ಟೀಕೆಗಳ ಸುರಿಮಳೆಯೇ ಸುರಿದಿತ್ತು. ಇದೀಗ ಆ ಎಲ್ಲಾ ಟೀಕೆಗಳಿಗೆ ಇದೀಗ ಶುಭ್​ಮನ್​ ಗಿಲ್ ಖಡಕ್​ ಆನ್ಸರ್​ ಕೊಟ್ಟಿದ್ದಾರೆ. 11 ತಿಂಗಳ ಶತಕದ ಕೊರಗಿಗೆ ಗಿಲ್​ ಕೊನೆಗೂ ಫುಲ್​​ ಸ್ಟಾಫ್​ ಇಟ್ಟಿದ್ದಾರೆ.

ಅಗ್ನಿಪರೀಕ್ಷೆಯ ಕಣದಲ್ಲಿ ಶುಭ್​ಮನ್​ ಗೆದ್ದಿದ್ದೇಗೆ.?

ಇಂಗ್ಲೆಂಡ್​​ ವಿರುದ್ಧದ ಮೊದಲ ಟೆಸ್ಟ್​ ವೈಫಲ್ಯದ ಬೆನ್ನಲ್ಲೇ ಮ್ಯಾನೇಜ್​​ಮೆಂಟ್​ ಗಿಲ್​ಗೆ ಎಚ್ಚರಿಕೆಯ ಸಂದೇಶ ರವಾನಿಸಿತ್ತು. ಕೊನೆ ಚಾನ್ಸ್​ ಎಂಬ ಖಡಕ್​ ನಿರ್ಧಾರ ತಳೆದು ವೈಜಾಗ್​ ಟೆಸ್ಟ್​ನಲ್ಲಿ ಚಾನ್ಸ್ ನೀಡಿಲಾಗಿತ್ತು. ಆದ್ರೆ, ಈ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲೂ ಗಿಲ್​ ವೈಫಲ್ಯ ಅನುಭವಿಸಿದ್ರು. ಕೇವಲ 34 ರನ್​ಗಳಿಗೆ ಆಟ ಮುಗಿಸಿದ್ರು. ಹೀಗಾಗಿ 2ನೇ ಇನ್ನಿಂಗ್ಸ್​ ಗಿಲ್​ ಪಾಲಿಗೆ ಅಗ್ನಿ ಪರೀಕ್ಷೆಯ ಕಣವಾಗಿತ್ತು. ಪರ್ಫಾಮ್​ ಮಾಡಲೇಬಾದ ಒತ್ತಡಕ್ಕೆ ಸಿಲುಕಿದ್ದ ಗಿಲ್​, 2ನೇ ದಿನದಾಟ ಮುಗಿದಿದ್ದೇ ಮುಗಿದಿದ್ದು ಅಭ್ಯಾಸದ ಕಣಕ್ಕೆ ಧುಮುಕಿದ್ರು. ಗಿಲ್​ರ ಡೆಡಿಕೇಷನ್​, ಹಾರ್ಡ್​ ವರ್ಕ್​ಗೆ ಫಲ ಸಿಕ್ಕೇ ಬಿಡ್ತು. 2ನೇ ಇನ್ನಿಂಗ್ಸ್​​ನಲ್ಲಿ ಅದ್ಭುತ ಬ್ಯಾಟಿಂಗ್ ನಡೆಸಿದ ಗಿಲ್​, 11 ಬೌಂಡರಿ, 2 ಸಿಕ್ಸರ್​ ಸಿಡಿಸಿದ್ರು. 147 ಎಸೆತಗಳನ್ನ ದಿಟ್ಟವಾಗಿ ಎದುರಿಸಿ 104 ರನ್​ ಸಿಡಿಸಿದ್ರು.

ಶುಭ್​ಮನ್​​ ಶತಕ, ನಿಟ್ಟುಸಿರು ಬಿಟ್ಟ ಮ್ಯಾನೇಜ್​ಮೆಂಟ್​

ಭವಿಷ್ಯದ ತಂಡ ಕಟ್ಟುವ ಲೆಕ್ಕಾಚಾರದಲ್ಲಿ ಅನುಭವಿ ಚೇತೇಶ್ವರ್​ ಪೂಜಾರ ಸ್ಥಾನದಲ್ಲಿ ಶುಭ್​ಮನ್​​ರನ್ನ ಟೀಮ್​ ಮ್ಯಾನೇಜ್​ಮೆಂಟ್​ ಕಳೆದ ಕೆಲ ಪಂದ್ಯಗಳಿಂದ ಆಡಿಸ್ತಿದೆ. ಆದ್ರೆ, ಶುಭ್​ಮನ್​ ಸತತ ವೈಫಲ್ಯ ​ಮ್ಯಾನೇಜ್​​ಮೆಂಟ್​​ಗೆ ತಲೆನೋವಾಗಿ ಪರಿಣಮಿಸಿತ್ತು. ಶುಭ್​​ಮನ್​ ಶತಕ ಇದೀಗ ಮ್ಯಾನೇಜ್​ಮೆಂಟ್​ಗೆ​ ಬಿಗ್​ ರಿಲೀಫ್​ ನೀಡಿದೆ.

24 ವರ್ಷಕ್ಕೆ ಲೆಜೆಂಡ್​​ಗಳ ಸಾಲಿಗೆ ಸೇರೋ ಸೂಚನೆ

24 ವರ್ಷದ ಶುಭ್​ಮನ್​ ಗಿಲ್​ ಇಂಟರ್​ನ್ಯಾಷ್​ನಲ್​ ಕ್ರಿಕೆಟ್​ನಲ್ಲಿ ಒಟ್ಟು 10 ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಶುಭ್​ಮನ್​ ಗಿಲ್​ ಬಿಟ್ರೆ, ಸಚಿನ್​ ತೆಂಡುಲ್ಕರ್​ ಹಾಗೂ ವಿರಾಟ್​ ಕೊಹ್ಲಿ ಮಾತ್ರ ಭಾರತದ ಪರ ಈ ಸಾಧನೆ ಮಾಡಿರೋದು. ಈ ಸಾಧನೆ ಭವಿಷ್ಯದ ಭರವಸೆಯನ್ನ ಹೆಚ್ಚಿಸಿದೆ. ಒಟ್ಟಿನಲ್ಲಿ, ಒಂದೇ ಒಂದು ಶತಕದಿಂದ ಶುಭ್​ಮನ್​ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಮುಂದೆಯೂ ಇದೇ ಫಾರ್ಮ್​ನಲ್ಲಿ ಯಂಗ್​ಸ್ಟರ್​​ ಆರ್ಭಟಿಸಲಿ ಅನ್ನೋದೆ ಎಲ್ಲರ ಆಶಯ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಅಗ್ನಿಪರೀಕ್ಷೆಯ ಕಣದಲ್ಲಿ ಗಿಲ್ ಗೆದ್ದಿದ್ದು ಹೇಗೆ..? ಶತಕದ ಹಿಂದಿದೆ ಒಂದು ಸೀಕ್ರೆಟ್..!

https://newsfirstlive.com/wp-content/uploads/2024/02/GILL-7.jpg

Load More