newsfirstkannada.com

ಟೆಸ್ಟ್​​ ಕ್ರಿಕೆಟ್​​ನಲ್ಲಿ T20 ಶೈಲಿಯಲ್ಲಿ ಬ್ಯಾಟಿಂಗ್​; ಕೊಹ್ಲಿ ಹೊಸ ಅವತಾರಕ್ಕೆ ಬೆಚ್ಚಿಬಿದ್ದ ಬಾಂಗ್ಲಾ ಬೌಲರ್ಸ್​​​

Share :

Published September 30, 2024 at 4:38pm

    ಬಾಂಗ್ಲಾದೇಶದ ಬೌಲರ್​ಗಳ ಬೆವರಿಳಿಸಿದ ವಿರಾಟ್​ ಕೊಹ್ಲಿ

    ಟೀಮ್​ ಇಂಡಿಯಾ ಪರ ಮಾಜಿ ಕ್ಯಾಪ್ಟನ್​​ ವಿರಾಟ್​​ ಅಬ್ಬರ!

    ಸಿಡಿಲಬ್ಬರದ ಬ್ಯಾಟಿಂಗ್​​ ಮಾಡಿದ ಕಿಂಗ್​​​​ಗೆ ಬೆಚ್ಚಿಬಿದ್ದ ಬಾಂಗ್ಲಾ

ಇಂದು ಕಾನ್​​ಪುರ ಇಂಟರ್​​ ನ್ಯಾಷನಲ್​​​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆಯುತ್ತಿರೋ ಮಹತ್ವದ ಕೊನೆ ಟೆಸ್ಟ್​​ ಪಂದ್ಯದಲ್ಲಿ ಟೀಮ್​ ಇಂಡಿಯಾ ಪರ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಅದ್ಭುತ ಬ್ಯಾಟಿಂಗ್​ ಮಾಡಿದ್ರು.

ಬಾಂಗ್ಲಾದೇಶ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಟೀಮ್​​ ಇಂಡಿಯಾ ಪರ ಟಿ20 ಶೈಲಿಯಲ್ಲಿ ಬ್ಯಾಟಿಂಗ್​​ ಮಾಡಿದ ಯಶಸ್ವಿ ಜೈಸ್ವಾಲ್​​ ಕೇವಲ 51 ಬಾಲ್​​ನಲ್ಲಿ 72 ರನ್​ ಚಚ್ಚಿದ್ರು. ಈ ಪೈಕಿ ಬರೋಬ್ಬರಿ 12 ಫೋರ್​​, 2 ಸಿಕ್ಸರ್​ ಸಿಡಿಸಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 140ಕ್ಕೂ ಹೆಚ್ಚಿತ್ತು.

ಯಶಸ್ವಿ ಜೈಸ್ವಾಲ್​​ ಬಳಿಕ ಬ್ಯಾಕ್​ ಟು ಬ್ಯಾಕ್​ ವಿಕೆಟ್​​​ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಟೀಮ್​ ಇಂಡಿಯಾಗೆ ಆಸರೆಯಾದ ಕೊಹ್ಲಿ ಬಿರುಸಿನ ಬ್ಯಾಟಿಂಗ್​ ಮಾಡಿದ್ರು. ಕೇವಲ 35 ಬಾಲ್​ನಲ್ಲಿ 47 ರನ್​​ ಸಿಡಿಸಿದ್ರು. ಈ ಪೈಕಿ 1 ಸಿಕ್ಸರ್​​, 4 ಫೋರ್​ ಚಚ್ಚಿದ್ರು. ಇಡೀ ಇನ್ನಿಂಗ್ಸ್​ ಉದ್ದಕ್ಕೂ ಬಾಂಗ್ಲಾ ಬೌಲರ್ಸ್​ ಬೆಂಡೆತ್ತಿದ್ರು.

ಸದ್ಯ ಟೀಮ್​ ಇಂಡಿಯಾ ಬಾಂಗ್ಲಾ ವಿರುದ್ಧದ 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಬರೋಬ್ಬರಿ 280 ರನ್​​ಗಳಿಂದ ಗೆದ್ದು ಬೀಗಿತ್ತು. ಈ ಪಂದ್ಯವೂ ಗೆದ್ದರೆ ಟೀಮ್​ ಇಂಡಿಯಾ ಮುಂದಿನ ವರ್ಷ ನಡೆಯಲಿರೋ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ಫೈನಲ್ ಪ್ರವೇಶ ಮಾಡಲಿದೆ.

ಇದನ್ನೂ ಓದಿ: 6,6,4,4,4,4,4,4,4,4,4,4,4,4; ಬಾಂಗ್ಲಾ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್​ ಮಾಡಿದ ಜೈಸ್ವಾಲ್​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೆಸ್ಟ್​​ ಕ್ರಿಕೆಟ್​​ನಲ್ಲಿ T20 ಶೈಲಿಯಲ್ಲಿ ಬ್ಯಾಟಿಂಗ್​; ಕೊಹ್ಲಿ ಹೊಸ ಅವತಾರಕ್ಕೆ ಬೆಚ್ಚಿಬಿದ್ದ ಬಾಂಗ್ಲಾ ಬೌಲರ್ಸ್​​​

https://newsfirstlive.com/wp-content/uploads/2024/09/Kohli-Fifty.jpg

Load More