newsfirstkannada.com

×

2ನೇ ಟೆಸ್ಟ್​​​ಗೆ ಮುನ್ನ ಟೀಮ್​ ಇಂಡಿಯಾಗೆ ಬಿಗ್​ ಶಾಕ್​​​; ಪಂದ್ಯದಿಂದ ಸ್ಟಾರ್​​ ಪ್ಲೇಯರ್​​ ಔಟ್​​

Share :

Published October 21, 2024 at 2:42pm

Update October 21, 2024 at 2:43pm

    ಅ. 24ರಿಂದ ಟೀಮ್​ ಇಂಡಿಯಾ, ನ್ಯೂಜಿಲೆಂಡ್​ ಮಧ್ಯೆ 2 ಟೆಸ್ಟ್​

    ಪಂದ್ಯ ಆರಂಭಕ್ಕೂ ಮುನ್ನವೇ ಟೀಮ್​ ಇಂಡಿಯಾಗೆ ಬಿಗ್​ ಶಾಕ್​​

    2ನೇ ಟೆಸ್ಟ್​​ನಿಂದ ಹೊರಬಿದ್ದ ಸ್ಟಾರ್​ ವಿಕೆಟ್​ ಕೀಪರ್​ ಬ್ಯಾಟರ್​​..!

ಇತ್ತೀಚೆಗೆ ಬೆಂಗಳೂರಿನ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಮೊದಲ ಟೆಸ್ಟ್​​ ಪಂದ್ಯದಲ್ಲಿ ಟೀಮ್​ ಇಂಡಿಯಾ ವಿರುದ್ಧ ನ್ಯೂಜಿಲೆಂಡ್​​ ಬರೋಬ್ಬರಿ 8 ವಿಕೆಟ್​ಗಳಿಂದ ಗೆದ್ದು ಬೀಗಿದೆ. ಈ ಮೂಲಕ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್​ ತಂಡ 1-0 ಅಂತರದ ಮುನ್ನಡೆ ಸಾಧಿಸಿದೆ.

ಇನ್ನು, 2ನೇ ಟೆಸ್ಟ್​​ ಪಂದ್ಯ ಪುಣೆಯ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​​ ಸ್ಟೇಡಿಯಮ್​ನಲ್ಲಿ ನಡೆಯಲಿದೆ. ಇದಕ್ಕೆ ಟೀಮ್​ ಇಂಡಿಯಾ ಭರ್ಜರಿ ತಯಾರಿ ಮಾಡಿಕೊಂಡಿದೆ. ಅಕ್ಟೋಬರ್​​ 24ನೇ ತಾರೀಕಿನಿಂದ ಶುರುವಾಗೋ ಈ ಟೆಸ್ಟ್​ ಪಂದ್ಯ 28ರ ವರೆಗೆ ನಡೆಯಲಿದೆ. ಈ ಪಂದ್ಯಕ್ಕೆ ಮುನ್ನವೇ ಟೀಮ್​​ ಇಂಡಿಯಾಗೆ ಬಿಗ್​ ಶಾಕ್​​ ಒಂದು ಕಾದಿದೆ.

2ನೇ ಟೆಸ್ಟ್​​ನಿಂದ ಪಂತ್​ ಔಟ್​​

ನ್ಯೂಜಿಲೆಂಡ್​​ ವಿರುದ್ಧದ 2ನೇ ಟೆಸ್ಟ್​​ನಿಂದ ಟೀಮ್​​ ಇಂಡಿಯಾ ವಿಕೆಟ್​ ಕೀಪರ್​ ಬ್ಯಾಟರ್​​ ರಿಷಬ್​ ಪಂತ್​ ಔಟ್​ ಆಗೋ ಸಾಧ್ಯತೆ ಇದೆ. ಮೊದಲ ಟೆಸ್ಟ್‌ನಲ್ಲಿ ಪಂತ್ ಕೀಪಿಂಗ್ ಮಾಡುವಾಗ ತೀವ್ರವಾಗಿ ಗಾಯಗೊಂಡಿದ್ದರು. ಮೊಣಕಾಲಿಗೆ ಎಲ್ಲಿ ಸರ್ಜರಿ ಆಗಿತ್ತೋ ಅದೇ ಜಾಗಕ್ಕೆ ಗಾಯ ಆಗಿದೆ. ಬಾಲ್​​ ಬಲವಾಗಿ ಬಿದ್ದ ಕಾರಣ ಪಂತ್ ನೋವಿನಿಂದ ಕುಸಿದು ಬಿದ್ದಿದ್ದರು. ಬಳಿಕ ಮೈದಾನದಿಂದ ಹೊರ ನಡೆದಿದ್ದು, ಇವರ ಬದಲಿಗೆ ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಮಾಡಿದ್ದರು.

ನೋವಿನಲ್ಲೇ ಬ್ಯಾಟಿಂಗ್​ ಮಾಡಿದ್ದ ಪಂತ್​​​

ಮೊದಲ ಪಂದ್ಯದ 2ನೇ ಇನ್ನಿಂಗ್ಸ್​ನಲ್ಲಿ ಟೀಮ್​ ಇಂಡಿಯಾ ಬರೋಬ್ಬರಿ 462 ರನ್​​ ಕಲೆ ಹಾಕಿತ್ತು. ಟೀಮ್​ ಇಂಡಿಯಾದ ಭರವಸೆಯ ಬ್ಯಾಟರ್​​​ ಸರ್ಫರಾಜ್​ ಖಾನ್​ ಅವರು ಸುಮಾರು 150 ರನ್​​ ಚಚ್ಚಿದ್ರು. ಇವರಿಗೆ ಸಾಥ್​ ನೀಡಿದ ಪಂತ್​ ತೀವ್ರವಾಗಿ ಗಾಯಗೊಂಡಿದ್ರೂ ನೋವಿನಲ್ಲೇ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಪಾಸಿಟಿವ್​ ಇಂಟೆಂಟ್​​ ಜತೆ ಬ್ಯಾಟಿಂಗ್​ ಮಾಡಿದ ಪಂತ್​​ ಕೇವಲ 1 ರನ್​​ನಿಂದ ಶತಕ ವಂಚಿತರಾಗಿ 99 ರನ್​​​​​ ಗಳಿಸಿ ನಿರಾಸೆಯಿಂದ ಹೊರನಡೆದ್ರು.

ಇದನ್ನೂ ಓದಿ: 2ನೇ ಟೆಸ್ಟ್​​ಗೆ ಟೀಮ್​ ಇಂಡಿಯಾದಲ್ಲಿ ಮೇಜರ್​ ಸರ್ಜರಿ; ಮೂವರು ಸ್ಟಾರ್​ ಆಟಗಾರರು ಔಟ್​​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2ನೇ ಟೆಸ್ಟ್​​​ಗೆ ಮುನ್ನ ಟೀಮ್​ ಇಂಡಿಯಾಗೆ ಬಿಗ್​ ಶಾಕ್​​​; ಪಂದ್ಯದಿಂದ ಸ್ಟಾರ್​​ ಪ್ಲೇಯರ್​​ ಔಟ್​​

https://newsfirstlive.com/wp-content/uploads/2024/10/Team-India-2.jpg

Load More