newsfirstkannada.com

ಇವರು ಪಕ್ಕಾ ಫ್ಯಾಮಿಲಿ ಮ್ಯಾನ್; ಟೀಂ ಇಂಡಿಯಾ ಸ್ಟಾರ್​​ಗಳ ಕೌಟುಂಬಿಕ ನಂಟು ಹೆಂಗಿದೆ..?

Share :

Published March 27, 2024 at 2:56pm

    ಪಕ್ಕಾ ಫ್ಯಾಮಿಲಿಮ್ಯಾನ್ಸ್​ ನಮ್ಮ ಟೀಮ್​ ಇಂಡಿಯಾ ಸ್ಟಾರ್ಸ್​

    ಪಂದ್ಯದಲ್ಲಿ ‘ವಿರಾವೇಷ’.. ಪಂದ್ಯದ ಬಳಿಕ ‘ಶಾಂತರೂಪ’

    ಧೋನಿ ಫೀಲ್ಡ್​ನಲ್ಲಿದ್ರೆ, ಸ್ಟ್ಯಾಂಡ್​ನಲ್ಲಿರ್ತಾರೆ ಸಾಕ್ಷಿ..!

ಅದು ಟೀಮ್​ ಇಂಡಿಯಾ ಪರ ಇರಲಿ. ಐಪಿಎಲ್​ ಫ್ರಾಂಚೈಸಿ ಪರ ಇರಲಿ. ಟೀಮ್​ ಇಂಡಿಯಾ ಕ್ರಿಕೆಟರ್ಸ್​​ ಅಖಾಡಕ್ಕಿಳಿದ್ರೆ ಸಾಕು. ಅವ್ರ ಖದರ್​ ಬೇರೆ ಲೆವೆಲ್​ನಲ್ಲಿರುತ್ತೆ. ಕೆಣಕಿದ್ರೆ ಕಥೆ ಮುಗೀತು ಎದುರಾಳಿಗಳನ್ನ ಉಡೀಸ್​ ಮಾಡದೆ ಬಿಡಲ್ಲ. ಇಂತಹ ಅಗ್ರೆಸ್ಸೀವ್​ ಆಟಗಾರರು ಆಫ್​ ದ ಫೀಲ್ಡ್​ನಲ್ಲಿ ಸಖತ್​ ಕೂಲ್​. ಅದ್ರಲ್ಲೂ ಫ್ಯಾಮಿಲಿ ಅಂದ್ರಂತೂ ಬಿಡಿ.. ಸರಂಡರ್​ ಆಗಿ ಬಿಡ್ತಾರೆ. ಯಾಕಂದ್ರೆ, ಟೀಮ್​ ಇಂಡಿಯಾದ ಸ್ಟಾರ್​ಗಳು ಪಕ್ಕಾ ಪ್ಯಾಮಿಲಿ ಮ್ಯಾನ್ಸ್​.

ಪಂದ್ಯದಲ್ಲಿ ‘ವೀರಾವೇಷ’.. ಪಂದ್ಯದ ಬಳಿಕ ‘ಶಾಂತರೂಪ’..!
ಪಂಜಾಬ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ವಿರಾಟ್​ ವಿರಾವೇಷದ ಬ್ಯಾಟಿಂಗ್​ ನಡೆಸಿದ್ರು. ಉಗ್ರನರಸಿಂಹನಂತೆ ಎದುರಾಳಿ ಬೌಲರ್​ಗಳನ್ನ ಚೆಂಡಾಡಿ ಆರ್​​ಸಿಬಿಯನ್ನ ಗೆಲುವಿನ ದಡ ಸೇರಿಸಿದ್ರು. ಪಂದ್ಯದೂದ್ದಕ್ಕೂ ವಿರಾಟರೂಪ ದರ್ಶನ ಮಾಡಿದ ಕೊಹ್ಲಿ, ಪಂದ್ಯ ಮುಗಿದಿದ್ದೇ ತಡ.. ಸಂಭ್ರಮಾಚರಣೆಯಲ್ಲಿ ತೊಡಗಿದ್ರು. ತಂಡದ ಸಹ ಆಟಗಾರರೊಂದಿಗಲ್ಲ.. ಪತ್ನಿ ಹಾಗೂ ಮಕ್ಕಳ ಜೊತೆ ವಿಡಿಯೋ ಕಾಲ್​ನಲ್ಲಿ. ಆ ಕ್ಷಣ ಉಗ್ರಾವತಾರಿ ಕೊಹ್ಲಿ, ಮುಗ್ಧ ಮಗುವಿನಂತೆ ಕಂಡರು.

ಪತ್ನಿ-ಮಗಳೊಂದಿಗೆ ಹೋಳಿಯಲ್ಲಿ ಮಿಂದೆದ್ದ ರೋಹಿತ್​
ವಿರಾಟ್​ ಕೊಹ್ಲಿ ಥರಾನೇ, ಈ ಹಿಂದೆ ಪಂದ್ಯವೊಂದರಲ್ಲಿ ಗೆದ್ದ ಬಳಿಕ ರೋಹಿತ್​ ವಿಡಿಯೋ ಕಾಲ್​ ಮಾಡಿ ಪತ್ನಿಯೊಂದಿಗೆ ಸಂಭ್ರಮಿಸಿದ್ರು. ಈ ಬಾರಿ ಪತ್ನಿ-ಮಗಳೊಂದಿಗೇ ಇರೋ ರೋಹಿತ್​​, ಹೋಳಿ ಹಬ್ಬದ ದಿನ ಫ್ಯಾಮಿಲಿಗೆ ಫುಲ್​ ಟೈಮ್​ ನೀಡಿದ್ದಾರೆ. ಪತ್ನಿ-ಮಗಳೊಂದಿಗೆ ಬಣ್ಣದಾಟ ಆಡಿ ಮಸ್ತಿ ಮಾಡಿದ್ದಾರೆ.

ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ಕೊಹ್ಲಿ ತಬ್ಬಿದ್ದ ಅಭಿಮಾನಿಗೆ ಬಿಸಿಬಿಸಿ ಕಜ್ಜಾಯ.. ನಂತರ ನಡೆದ ಭಯಾನಕ ವಿಡಿಯೋ

ಎಮ್​.ಎಸ್​​ ಧೋನಿ ತಾನು ಪಕ್ಕಾ ಫ್ಯಾಮಿಲಿ ಮ್ಯಾನ್​ ಅನ್ನೋದನ್ನ ಆಗಾಗ ಪ್ರೂವ್​ ಮಾಡುತ್ತಲೇ ಇರ್ತಾರೆ. ಐಪಿಎಲ್​ ಪಂದ್ಯದ ವೇಳೆಯಂತೂ ಧೋನಿ, ಫೀಲ್ಡ್​ನಲ್ಲಿದ್ದಾಗ, ಪತ್ನಿ ಸಾಕ್ಷಿ ಸಿಂಗ್​ ಹಾಗೂ ಮಗಳು ಝೀವಾ ಸ್ಟ್ಯಾಂಡ್​ನಲ್ಲಿರೋದು ಬಹುತೇಕ ಖಾಯಂ. ಪಂದ್ಯ ಗೆದ್ದಾಗ, ಟ್ರೋಫಿ ಗೆದ್ದಾಗ ಪತ್ನಿ-ಮಗಳು ಮೈದಾನಕ್ಕೆ ಎಂಟ್ರಿ ಕೊಡೋದು, ಒಟ್ಟಾಗಿ ಸಂಭ್ರಮಿಸೋದು ಯಾವಾಗ್ಲೂ ನಡೆಯುತ್ತೆ.
ಆಲ್​​ರೌಂಡರ್​​ ರವಿಂದ್ರ ಜಡೇಜಾ ಕೂಡ ಪಕ್ಕಾ ಫ್ಯಾಮಿಲಿ ಮ್ಯಾನ್​.. ಪತ್ನಿ ಅಂದ್ರಂತೂ ಪ್ರಾಣ.. ರಿವಾಬಾಗೂ ಅಷ್ಟೇ ಜಡೇಜಾ ಮೇಲೆ ಅಷ್ಟೇ ಪ್ರೀತಿ. ಅಷ್ಟೇ ಗೌರವ.. ಕಳೆದ ಸೀಸನ್​ ಐಪಿಎಲ್​ ಗೆದ್ದಾಗ ಮೈದಾನದಲ್ಲೇ ಜಡ್ಡು ಪಾದ ಮುಟ್ಟಿ ನಮಸ್ಕಾರ ಮಾಡಿದ್ರು.
ಇವರಿಷ್ಟೇ ಅಲ್ಲ.. ಕನ್ನಡಿಗ ಕೆ.ಎಲ್​ ರಾಹುಲ್​ ಪತ್ನಿ ಆಥಿಯಾ ಶೆಟ್ಟಿ ಕೂಡ ಸ್ಟೇಡಿಯಂಗೆ ಬಂದು ಪತಿಗೆ ಸಪೋರ್ಟ್​ ಮಾಡೋದು ಖಾಯಂ..

ಪಂದ್ಯದ ಸೋಲು ಗೆಲುವು ಏನೇ ಇರಲಿ.. ಫಾರ್ಮ್​ ಚನ್ನಾಗಿರಲಿ.. ಔಟ್​ ಆಫ್​ ಫಾರ್ಮ್​ ಫಾರ್ಮ್​ ಆಗಲಿ.. ಸದಾಕಾಲ ಕ್ರಿಕೆಟರ್ಸ್​​ ಬೆನ್ನ ಹಿಂದೆ ನಿಲ್ಲೋದು ಕುಟುಂಬ.. ಅದಕ್ಕಾಗಿಯೇ ಕ್ರಿಕೆಟರ್ಸ್​ ಹೇಳೋದು ಫ್ಯಾಮಿಲಿ ಫಸ್ಟ್​ ಅಂತ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಇವರು ಪಕ್ಕಾ ಫ್ಯಾಮಿಲಿ ಮ್ಯಾನ್; ಟೀಂ ಇಂಡಿಯಾ ಸ್ಟಾರ್​​ಗಳ ಕೌಟುಂಬಿಕ ನಂಟು ಹೆಂಗಿದೆ..?

https://newsfirstlive.com/wp-content/uploads/2024/03/Kohli-5.jpg

Load More