ಆರಂಭದಲ್ಲೇ ಗಂಭೀರ್​ ಬಿಗಿ ಹಿಡಿತ.. ಪಾಂಡ್ಯ, ಪಂತ್​​, ಸಂಜುಗೆ ಪ್ರಾಕ್ಟಿಸ್​​ ಸೆಷನ್​ನಲ್ಲಿ ಕ್ಲಾಸ್..!

author-image
Ganesh
Updated On
ಆರಂಭದಲ್ಲೇ ಗಂಭೀರ್​ ಬಿಗಿ ಹಿಡಿತ.. ಪಾಂಡ್ಯ, ಪಂತ್​​, ಸಂಜುಗೆ ಪ್ರಾಕ್ಟಿಸ್​​ ಸೆಷನ್​ನಲ್ಲಿ ಕ್ಲಾಸ್..!
Advertisment
  • ಜುಲೈ 27ರಿಂದ ಭಾರತ-ಲಂಕಾ ಚುಟುಕು ದಂಗಲ್​
  • ಫಸ್ಟ್ ಡೇ ಟ್ರೈನಿಂಗ್ ಸೆಷನ್​​ನಲ್ಲಿ ಭರ್ಜರಿ ಕಸರತ್ತು
  • ಟೀಮ್​ ಇಂಡಿಯಾ ಪ್ರಾಕ್ಟಿಸ್​​ ಸೆಷನ್​ನ ಹೈಲೆಟ್ಸ್..!

ಟೀಮ್ ಇಂಡಿಯಾ ಶ್ರೀಲಂಕಾ ಎದುರಿನ ಸರಣಿಗಾಗಿ ಸಿಂಹಳೀಯರ ನಾಡಿಗೆ ಕಾಲಿಟ್ಟಿದೆ. ಲಂಕಾ ತಲುಪಿದ ಬೆನ್ನಲ್ಲೇ ವಿಶ್ರಮಿಸದೇ ಕಠಿಣ ಅಭ್ಯಾಸಕ್ಕೆ ನಡೆಸಿದೆ. ಆತಿಥೇಯ ಪಡೆ ಗೌತಮ್​ ಗಂಭೀರ್​ ಬಾಯ್ಸ್​​ ಕಸರತ್ತು ನೋಡಿಯೇ ನಡುಗಿ ಹೋಗ್ಬೇಕು. ಆ ಮಟ್ಟಿಗೆ ಟೀಮ್​ ಇಂಡಿಯನ್ಸ್​ ಬೆವರು ಹರಿಸಿದ್ದಾರೆ.

ವಿಶ್ವ ಚಾಂಪಿಯನ್ ಟೀಮ್ ಇಂಡಿಯಾ ಸಿಂಹಳೀಯರ ಬೇಟೆಗೆ ಸಜ್ಜಾಗಿದೆ. ಜುಲೈ 27ರಿಂದ ಉಭಯ ದೇಶಗಳ ನಡುವೆ ಟ್ವೆಂಟಿ-ಟ್ವೆಂಟಿ ದಂಗಲ್​ ಆರಂಭಗೊಳ್ಳಲಿದ್ದು ಕದನ ಕುತೂಹಲ ಕೆರಳಿಸಿದೆ. ಈಗಾಗಲೇ ಭಾರತ ತಂಡ ಲಂಕನ್ನರ ನಾಡಲ್ಲಿ ಬೀಡು ಬಿಟ್ಟಿದ್ದು, ಬ್ಯಾಟಲ್ ಫೀಲ್ಡ್​​ನಲ್ಲಿ ಆತಿಥೇಯ ತಂಡವನ್ನ ಎದುರಿಸಲು ಭರ್ಜರಿ ತಯಾರಿ ಆರಂಭಿಸಿದೆ. ಹೊಸ ಕ್ಯಾಪ್ಟನ್ ಹಾಗೂ ಹೊಸ ಕೋಚ್ ಆಗಮನ ತಂಡಕ್ಕೆ ಹೊಸ ಹುರುಪು ತಂದಿದ್ದು, ಲಂಕಾ ಸಂಹರಿಸಿ ಗೆಲುವಿನ ಪತಾಕೆ ಹಾರಿಸುವ ಇರಾದೆಯಲ್ಲಿದೆ.

ಇದನ್ನೂ ಓದಿ:‘ವಿರಾಟ್ ಪಾಕಿಸ್ತಾನಕ್ಕೆ ಬರಲಿ.. ಅಲ್ಲಿ ತಾಕತ್ತು ತೋರಿಸಲಿ’ -ಕೊಹ್ಲಿಗೆ ಚಾಲೆಂಜ್

publive-image

ಪಲ್ಲೆಕೆಲೆ ಮೈದಾನಕ್ಕೆ ಬ್ಲೂ ಬಾಯ್ಸ್​​ ಗ್ರ್ಯಾಂಡ್ ಎಂಟ್ರಿ
ಸೂರ್ಯಕುಮಾರ್​​​ ಯಾದವ್ ಅಂಡ್ ಟೀಮ್​​​ ಜುಲೈ 22ರಂದು ಶ್ರೀಲಂಕಾಗೆ ಕಾಲಿಟ್ಟಿತ್ತು. ಅದರ ಬೆನ್ನಲ್ಲೇ ಮೆನ್​​ ಇನ್​ ಬ್ಲೂ ಪಡೆ ಸಿದ್ಧತೆ ಅರಂಭಿಸಿದೆ. ವಿಶ್ರಾಂತಿಗೆ ಹೆಚ್ಚು ಒತ್ತು ಕೊಡದ ಆಟಗಾರರು, ಮರುದಿನ ಬ್ಲೂ ಬಸ್​​ನಲ್ಲಿ ಪಲ್ಲೆಕೆಲೆ ಮೈದಾನಕ್ಕೆ ಪೊಲೀಸ್​​ ಭದ್ರತೆಯೊಂದಿಗೆ ಗ್ರ್ಯಾಂಡ್​ ಎಂಟ್ರಿ ಕೊಟ್ಟಿತು.

ಮೊದಲ ದಿನವೇ ಭರ್ಜರಿ ತಾಲೀಮು
ಫುಲ್ ಜೋಶ್​ನಲ್ಲಿ ಮೈದಾನಕ್ಕೆ ಆಗಮಿಸಿದ ಟೀಮ್ ಇಂಡಿಯಾ ಆಟಗಾರರು ಮೊದಲ ದಿನದ ಟ್ರೈನಿಂಗ್ ಸೆಷನ್​ನಲ್ಲಿ ಭರ್ಜರಿ ಬೆವರು ಹರಿಸಿದ್ದಾರೆ. ಕ್ಯಾಪ್ಟನ್​​ ಸೂರ್ಯ ಕುಮಾರ್​ ಹಾಗೂ ಹೆಡ್​ಕೋಚ್​ ಗಂಭೀರ್​ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸಿ ಲಂಕಾಗೆ ನಾವು ರೆಡಿ ಅಂತಾ ಸ್ಟ್ರಾಂಗ್ ಮೆಸೇಜ್ ರವಾನಿಸಿದ್ದಾರೆ.

ಇದನ್ನೂ ಓದಿ:ಮಾಜಿ ಪತ್ನಿ ಫೋಟೋಗೆ ಕಾಮೆಂಟ್ ಮಾಡಿದ ಹಾರ್ದಿಕ್ ಪಾಂಡ್ಯ.. ಮತ್ತೆ ಒಂದಾಗ್ತಾರಾ..!

ಅಬ್ಬರದ ಬ್ಯಾಟಿಂಗ್.. ಬಿಗ್ ಶಾಟ್ಸ್​ ಟಾರ್ಗೆಟ್​​​​​..!
ಆರಂಭದಲ್ಲಿ ಭಾರತ ತಂಡದ ರಿಲ್ಯಾಕ್ಸ್​​ ಆಗಿ ಅಭ್ಯಾಸ ಅಖಾಡಕ್ಕೆ ಧುಮುಕ್ತು. ಆದರೆ ಬಳಿಕ ಶುರುವಾಗಿದ್ದೆ ನೋಡಿ ಅಸಲಿ ಟ್ರೈನಿಂಗ್​​​. ಬ್ಯಾಟ್ಸ್​​ಮನ್​​ಗಳು ನೆಟ್ಸ್​ನಲ್ಲಿ HIGH INTENSITYಯಲ್ಲಿ ಬ್ಯಾಟ್ ಬೀಸಿದ್ದಾರೆ. ಬೌಲರ್​ಗಳು ಶರವೇಗದಲ್ಲಿ ದಾಳಿ ಮಾಡ್ತಿದ್ರೆ, ಬ್ಯಾಟರ್ಸ್​ ಬಾಲ್ ​​​ಅನ್ನ ಸ್ಟೇಡಿಯಂ ಆಚೆಗಟ್ಟಲು ಶುರುಮಾಡಿದ್ದರು.

ಸ್ಟ್ರಿಕ್ಟ್​ ಕ್ರಿಕೆಟ್​ ಪಾಠ
ಇಡೀ ಟ್ರೈನಿಂಗ್ ಪೂರ್ತಿ ನೂತನ ಕೋಚ್​ ಗೌತಮ್​​ ಗಂಭೀರ್​ ಫುಲ್ ಆಕ್ಟೀವ್ ಆಗಿದ್ದರು. ತಂಡವನ್ನ ಮಾನಸಿಕವಾಗಿ ಹುರಿದುಂಬಿಸೋದ್ರ ಜೊತೆ ಹಾರ್ದಿಕ್​​ ಪಾಂಡ್ಯ, ಸಂಜು ಸ್ಯಾಮ್ಸನ್​​​, ಯಶಸ್ವಿ ಜೈಸ್ವಾಲ್​​ ಹಾಗೂ ರಿಂಕು ಸಿಂಗ್​ಗೆ​​​​​​ ಕ್ರಿಕೆಟ್ ಪಾಠ ಮಾಡಿದ್ದಾರೆ.

ಇದನ್ನೂ ಓದಿ:ಕಂಗನಾರ ಸಂಸದ ಸ್ಥಾನಕ್ಕೆ ಬಂತಾ ಕುತ್ತು..? ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್..!

publive-image

ಅಕ್ಷರ್ ಜೊತೆ ಪಾಂಡ್ಯ ಮಸ್ತಿ
ಟ್ರೈನಿಂಗ್ ಸೆಷನ್​​​​​​​​​​ ಬರೀ ಭರ್ಜರಿ ಕಸರತ್ತಿಗಷ್ಟೇ ಸೀಮಿತವಾಗ್ಲಿಲ್ಲ. ಇಲ್ಲಿ ಫನ್ ಕೂಡ ಇತ್ತು. ಆಲ್​ರೌಂಡರ್ ಹಾರ್ದಿಕ್​ ಪಾಂಡ್ಯ ಸೆಷನ್ ಮುಗಿಸಿ ಹೊರಡುತ್ತಿದ್ದಾಗ ಅಕ್ಷರ್​ ಪಟೇಲ್​​ ಜೊತೆ ಮಸ್ತಿ ಮಾಡಿದ್ದರು. ಭಾರತ-ಶ್ರೀಲಂಕಾ ಚುಟುಕು ದಂಗಲ್​​ಗೆ ಇನ್ನೂ ಒಂದು ದಿನವಷ್ಟೇ ಬಾಕಿ ಇದೆ. ಸೂರ್ಯ ಅಂಡ್ ಟೀಮ್​​​​​​ ಟ್ರೈನಿಂಗ್​ ಸೆಷನ್​​ ಅನ್ನ ಗಂಭೀರವಾಗಿ ತೆಗೆದುಕೊಂಡಿದೆ. ಹಾಲಿ ಚಾಂಪಿಯನ್​​ ಎಂಬ ಖ್ಯಾತಿಯೊಂದಿಗೆ ಕಣಕ್ಕಿಳಿತಿರೋ ಟೀಮ್​ ಇಂಡಿಯಾ, ಸರಣಿ ಗೆದ್ದೇ ತೀರುವ ಪಣ ತೊಟ್ಟಿದೆ.

ಇದನ್ನೂ ಓದಿ:ಲಂಕನ್ನರಿಗೆ ಕಾಡ್ತಿವೆ ಹಳೇ ಏಟುಗಳು..! ಈ ಆಟಗಾರನ ಹೆಸರು ಕೇಳಿದ್ರೆ ಬೆಚ್ಚಿ ಬೀಳೋದ್ಯಾಕೆ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment