ಸ್ಪಿನ್​ ಮುಂದೆ ಟೀಂ ಇಂಡಿಯಾ ಪರದಾಟ.. ನಡೆಯೋಲ್ಲ ಘಟಾನುಘಟಿಗಳ ಆಟ.. ಯಾಕೀಗೆ?

author-image
AS Harshith
Updated On
ಸ್ಪಿನ್​ ಮುಂದೆ ಟೀಂ ಇಂಡಿಯಾ ಪರದಾಟ.. ನಡೆಯೋಲ್ಲ ಘಟಾನುಘಟಿಗಳ ಆಟ.. ಯಾಕೀಗೆ?
Advertisment
  • ಪುಣೆ ಪಿಚ್​ನಲ್ಲೂ ಫ್ಲಾಪ್​.. ವಾಂಖೆಡೆಯಲ್ಲೂ ಫ್ಲಾಪ್​.!
  • ಟೀಮ್​ ಇಂಡಿಯಾದ ಸ್ಪಿನ್​ ಪಾರಮ್ಯಕ್ಕೆ ಬಿತ್ತಾ ಬ್ರೇಕ್​​?
  • 4 ವರ್ಷಗಳಲ್ಲಿ ಬಟಾಬಯಲಾಗಿದೆ ಸ್ಪಿನ್​ ಸಾಮರ್ಥ್ಯ

ಸ್ಪಿನ್​ ಟೀಮ್​ ಇಂಡಿಯಾದ ಸ್ಟ್ರೆಂಥ್​​. ಸ್ಪಿನ್ನರ್​ಗಳನ್ನ ಚೆಂಡಾಡೋ ವಿಚಾರದಲ್ಲಿ ಭಾರತೀಯ ಬ್ಯಾಟರ್​​ಗಳ ಮುಂದೆ ಯಾರೂ ಇಲ್ಲ ಅನ್ನೋ ಮಾತಿದೆ. ವಿಶ್ವ ಕ್ರಿಕೆಟ್​ ಲೋಕವೇ ಈ ಮಾತನ್ನ ನಂಬಿದೆ. ಆದ್ರೆ, ನ್ಯೂಜಿಲೆಂಡ್​​ ಸರಣಿ ಅಂತ್ಯದ ಬಳಿಕ ನೋಡಿದ್ರೆ, ಈ ಮಾತು ಸುಳ್ಳಾಗಿದೆ. ಸ್ಪಿನ್ನರ್​​​ಗಳ ಮುಂದೆ ಟೀಮ್​ ಇಂಡಿಯಾದ ವೀರಾಧಿವೀರರು ಮಕಾಡೆ ಮಲಗಿದ್ದಾರೆ.

ನ್ಯೂಜಿಲೆಂಡ್​ ಪ್ರವಾಸದ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್​ ಇಂಡಿಯನ್​ ಬ್ಯಾಟರ್ಸ್​ ಸಾಮರ್ಥ್ಯ ಪೇಸ್​ ಅಟ್ಯಾಕ್​​ ಎದುರು ಬಟಾಬಯಲಾಗಿತ್ತು. ಚಿನ್ನಸ್ವಾಮಿ ಮೈದಾನದಲ್ಲಿ ಸೋಲುಂಡ ಬಳಿಕ ಪುಣೆ ಹಾಗೂ ವಾಂಖೆಡೆ ಪಿಚ್​​ನಲ್ಲೇ ಹೊಸ ಗೇಮ್​​ ಆಡಿದ ಟೀಮ್​ ಮ್ಯಾನೇಜ್​ಮೆಂಟ್​ ಸ್ಪಿನ್​ ಟ್ರ್ಯಾಕ್​ ಮೊರೆ ಹೋಗಿತ್ತು. ಅಂತಿಮವಾಗಿ ತಾವೇ ತೋಡಿದ ಹಳ್ಳಕ್ಕೆ ಟೀಮ್​ ಇಂಡಿಯಾ ಬಿತ್ತು.

ಸ್ಪಿನ್​ ಎದುರು ಮಕಾಡೆ ಮಲಗಿದ ವೀರಾಧಿವೀರರು.!

ಪೇಸ್​​ ಟ್ರ್ಯಾಕ್​​ನಲ್ಲಿ ಮುಗ್ಗರಿಸಿದ್ದ ಟೀಮ್​ ಇಂಡಿಯಾ 2 ಮತ್ತು 3ನೇ ಟೆಸ್ಟ್​​ನಲ್ಲಿ ಸ್ಪಿನ್​​ ಟ್ರ್ಯಾಕ್ ನಿರ್ಮಿಸಿ ಕಣಕ್ಕಿಳಿಯಿತು. ಆದ್ರೆ, ತಾವೇ ತೋಡಿದ ಹಳ್ಳಕ್ಕೆ ಟೀಮ್​ ಇಂಡಿಯಾ ಆಟಗಾರರು ಬಿದ್ರು. ಪುಣೆಯಲ್ಲಿ ನಡೆದ 2ನೇ ಟೆಸ್ಟ್​ನಲ್ಲಿ ಎರಡೂ ಇನ್ನಿಂಗ್ಸ್​ ಸೇರಿ 18 ವಿಕೆಟ್​ಗಳನ್ನ ಟೀಮ್​ ಇಂಡಿಯಾ ಕಳೆದುಕೊಳ್ತು. ಇನ್ನು, ಮುಂಬೈನಲ್ಲೂ 16 ವಿಕೆಟ್​ಗಳನ್ನ ಸ್ಪಿನ್ನರ್​ಗಳಿಗೆ ಟೀಮ್​ ಇಂಡಿಯಾ ಬ್ಯಾಟರ್ಸ್​ ಒಪ್ಪಿಸಿದ್ರು.

ಇದನ್ನೂ ಓದಿ:ಪಟಾಕಿ ದುರಂತ; ಡಬ್ಬದ ಮೇಲೆ ಯುವಕನನ್ನು ಕೂರಿಸಿ ಬಾಂಬ್​ ಸಿಡಿಸಿದ್ರು; ಸ್ಥಳದಲ್ಲೇ ಸಾವು!

publive-image

ಸ್ಪಿನ್​ ಎದುರು ಟೀಮ್​ ಇಂಡಿಯಾದ ಆಟ ಅಂತ್ಯ.?

ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್​ ಇಂಡಿಯಾ ಫ್ಲಾಪ್​ ಆದ ಬೆನ್ನಲ್ಲೇ, ಹೀಗೊಂದು ಚರ್ಚೆ ಶುರುವಾಗಿದೆ. ಹಲವು ದಶಕಗಳಿಂದ ಇದ್ದ ಸ್ಪಿನ್​ ಟೀಮ್​ ಇಂಡಿಯಾದ ಸ್ಟ್ರೇಂಥ್​ ಅನ್ನೋ ಮಾತು ಸದ್ಯ ಸುಳ್ಳಾಗಿದೆ. ಸ್ಪಿನ್​ ಎದುರು ಟೀಮ್​ ಇಂಡಿಯಾದ ಪಾರಮ್ಯಕ್ಕೆ ಫುಲ್​​ ಸ್ಟಾಫ್​ ಬೀಳೋ ದಿನಗಳ ಹತ್ತಿರಬಂದಂತಿದೆ. ಹೀಗೆ ಹೇಳ್ತಿರೋದಕ್ಕೆ ನ್ಯೂಜಿಲೆಂಡ್​ ಸರಣಿಯ ವೈಫಲ್ಯ ಮಾತ್ರ ಕಾರಣವಲ್ಲ. 2020ರ ನಂತರದ ಆಟ ಟೀಮ್​ ಇಂಡಿಯಾದ ಸ್ಪಿನ್​ ವೀಕ್ನೆಸ್​ನ ಎಕ್ಸ್​ಪೋಸ್​ ಮಾಡಿವೆ.

ಇದನ್ನೂ ಓದಿ: IND vs NZ; ಟೀಮ್ ಇಂಡಿಯಾದ ಹೀನಾಯ ಸೋಲಿಗೆ ಪ್ರಮುಖ 5 ಕಾರಣ ಇಲ್ಲಿವೆ!

ಈಗ ಸ್ಪಿನ್ ಎದುರು ಟೀಮ್​ ಇಂಡಿಯಾದ ಪರದಾಟ ಹೇಗಿದೆ ಅನ್ನೋದಕ್ಕೆ ಮುನ್ನ ಈ ಹಿಂದಿನ ಎರಡು ದಶಕಗಳಲ್ಲಿ ಸ್ಪಿನ್​ ಎದುರು ಇಂಡಿಯನ್​​ ಬ್ಯಾಟರ್ಸ್​ ದರ್ಬಾರ್​ ಹೇಗಿತ್ತು ಅನ್ನೋದನ್ನ ಮೊದಲು ನೋಡೋಣ..

2000ರಿಂದ 2009ರವರೆಗೆ ಸ್ಪಿನ್​ ಎದುರು ಆಟ

ಇನ್ನಿಂಗ್ಸ್​​ 69
ವಿಕೆಟ್ಸ್​​ 231
ಬಾಲ್ಸ್​​/ವಿಕೆಟ್​ 76.3
ರನ್​​ರೇಟ್​​ 3.3

2010ರಿಂದ 2019ರವರೆಗೆ ಸ್ಪಿನ್​ ಎದುರು ಆಟ

ಇನ್ನಿಂಗ್ಸ್​​ 81
ವಿಕೆಟ್ಸ್​​ 326
ಬಾಲ್ಸ್​​/ವಿಕೆಟ್​ 76.4
ರನ್​​ರೇಟ್​​ 3.6

ಎರಡು ದಶಕಗಳ ಕಾಲ ಸ್ಪಿನ್​ ಎದುರು ಉತ್ತಮ ಟ್ರ್ಯಾಕ್​ ರೆಕಾರ್ಡ್​​ನ ಟೀಮ್​ ಇಂಡಿಯಾ ಬ್ಯಾಟ್ಸ್​​ಮನ್​ಗಳು ಹೊಂದಿದ್ರು. ಆದರೆ, 2020ರ ಬಳಿಕ 4 ವರ್ಷಗಳಲ್ಲೇ ಟೀಮ್​ ಇಂಡಿಯಾದ ಪರ್ಫಾಮೆನ್ಸ್​​​ ಪಾತಾಳಕ್ಕೆ ಕುಸಿದಿದೆ.

2020ರ ಬಳಿಕ ಸ್ಪಿನ್​ ಎದುರು ಟೀಮ್​ ಇಂಡಿಯಾ

ಇನ್ನಿಂಗ್ಸ್​​ 37
ವಿಕೆಟ್ಸ್​​ 233
ಬಾಲ್ಸ್​​/ವಿಕೆಟ್​ 54.3
ರನ್​​ರೇಟ್​​ 3.6

2020ರ ಬಳಿಕ 37 ಟೆಸ್ಟ್​​ ಇನ್ನಿಂಗ್ಸ್​ಗಳಲ್ಲಿ ಟೀಮ್​ ಇಂಡಿಯಾ ಬರೋಬ್ಬರಿ 233 ವಿಕೆಟ್​​ಗಳನ್ನ ಕಳೆದುಕೊಂಡಿದೆ. 54.3 ಎಸೆತಕ್ಕೊಂದರಂತೆ ವಿಕೆಟ್​ ಒಪ್ಪಿಸಿರುವ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳು, 3.6ರ ರನ್​ ರೇಟ್​ ಹೊಂದಿದ್ದಾರೆ.

ಒಟ್ಟಿನಲ್ಲಿ, ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​​ ಸರಣಿ ಟೀಮ್​ ಇಂಡಿಯಾದ ಸ್ಪಿನ್​ ವೀಕ್​ನೆಸ್​​​, ಇಡೀ ವಿಶ್ವಕ್ಕೆ ಎಕ್ಸ್​​ಪೋಸ್​ ಮಾಡಿದೆ. ಯುವ ಆಟಗಾರರು ಬಿಡಿ, ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾರಂತ ವಿಶ್ವ ಶ್ರೇಷ್ಟ ಆಟಗಾರರೇ ಸ್ಪಿನ್​ ಎದುರು ಪರದಾಡಿದ್ದಾರೆ. ಈ ಸೋಲು ಟೀಮ್​ ಇಂಡಿಯಾ ಆಟಗಾರರು ಹಾಗೂ ಮ್ಯಾನೇಜ್​ಮೆಂಟ್​ಗೆ ಎಚ್ಚರಿಕೆಯ ಕರೆಗಂಟೆ ಅಂದ್ರೆ ತಪ್ಪಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment