ಭಯಂಕರ ಚಂಡ ಮಾರುತಕ್ಕೆ ಟೀಂ ಇಂಡಿಯಾ ಲಾಕ್.. ಆಟಗಾರರು ಭಾರತಕ್ಕೆ ಬರೋದು ಯಾವಾಗ..?

author-image
Ganesh
Updated On
ಭಯಂಕರ ಚಂಡ ಮಾರುತಕ್ಕೆ ಟೀಂ ಇಂಡಿಯಾ ಲಾಕ್.. ಆಟಗಾರರು ಭಾರತಕ್ಕೆ ಬರೋದು ಯಾವಾಗ..?
Advertisment
  • ಬಾರ್ಬಡೊಸ್ ಭಾರೀ ಗಾಳಿ, ಮಳೆಗೆ ತತ್ತರ
  • ಸೈಕ್ಲೋನ್ ಎದ್ದ ಪರಿಣಾಮ ಮತ್ತಷ್ಟು ವಿಳಂಬ
  • ಬಾರ್ಬಡೊಸ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಸ್ಥಗಿತ

ಟಿ20 ವಿಶ್ವಕಪ್​ ಗೆದ್ದ ಭಾರತ ತಂಡಕ್ಕೆ ತವರಿಗೆ ಮರಳಲು ತೊಂದರೆಯಾಗಿದೆ. ಚಂಡಮಾರುತ ಹಿನ್ನೆಲೆಯಲ್ಲಿ ಬಾರ್ಬಡೊಸ್ ಏರ್​ಪೋರ್ಟ್​ನಲ್ಲಿ ವಿಮಾನ ಸಂಚಾರವನ್ನು ಬಂದ್ ಮಾಡಲಾಗಿದ್ದು, ಸದ್ಯ ಟೀಂ ಇಂಡಿಯಾ ವಾಪಸ್ ಆಗೋದು ಕಷ್ಟವಾಗಿದೆ.

ಬಾರ್ಬಡೊಸ್​ನಲ್ಲಿ ಭಾರೀ ಬಿರುಗಾಳಿ ಜೊತೆ ಮಳೆ ನಿರಂತರವಾಗಿ ಸುರಿಯುತ್ತಿವ ಕಾರಣ ಸಂಚಾರ ಸೇರಿದಂತೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಗಂಟೆಗೆ 130 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಈಗಾಗಲೇ ಟೀಂ ಇಂಡಿಯಾ ನ್ಯೂಯಾರ್ಕ್​ ತಲುಪಬೇಕಿತ್ತು.

ಇದನ್ನೂ ಓದಿ:ಟಿ20 ವಿಶ್ವಕಪ್ ತಂಡ ಪ್ರಕಟಿಸಿದ ಐಸಿಸಿ.. 6 ಭಾರತೀಯ ಆಟಗಾರರಿಗೆ ಸ್ಥಾನ..!

publive-image

ಭಾರೀ ಗಾಳಿ ಮಳೆ ಹಿನ್ನೆಲೆಯಲ್ಲಿ ಭಾರತ ತಂಡವು ನ್ಯೂಯಾರ್ಕ್​ ಮೂಲಕ ಬರುವ ಪ್ಲಾನ್ ಕ್ಯಾನ್ಸಲ್ ಮಾಡಲಾಗಿದೆ ಎಂದು ವರದಿಗಳು ಹೇಳಿವೆ. ವಿಶೇಷ ವಿಮಾನದ ಮೂಲಕ ನೇರವಾಗಿ ದೆಹಲಿ ತಲುಪುವ ವ್ಯವಸ್ಥೆಗಳು ಆಗುತ್ತಿವೆ. ಆದರೆ ಸೈಕ್ಲೋನ್​ ತೀವ್ರತೆ ಕಮ್ಮಿಯಾದ ಮೇಲೆಯೇ ಸರಿಯಾದ ನಿರ್ಧಾರ ಆಗಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜುಲೈ 3 ರಂದು ಟೀಂ ಇಂಡಿಯಾ ತಾಯ್ನಾಡಿಗೆ ಮರಳಲಿದೆ.

ಇದನ್ನೂ ಓದಿ:ಬೂಮ್ರಾ ಸೆನ್ಸೇಷನ್.. ವಿಶ್ವಕಪ್​​ನಲ್ಲಿ ಹೆಚ್ಚು ವಿಕೆಟ್ ಪಡೆಯದಿದ್ರೂ ಸರಣಿ ಶ್ರೇಷ್ಠ ಕಿರೀಟ ಕೊಟ್ಟಿದ್ಯಾಕೆ ಗೊತ್ತಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment