/newsfirstlive-kannada/media/post_attachments/wp-content/uploads/2025/06/TEAM_INDIA.jpg)
ಟೀಮ್ ಇಂಡಿಯಾದ ಹೊಸ ಅಧ್ಯಾಯ ಶುರುವಾಗಿದೆ. ಶುಭ್ಮನ್ ಗಿಲ್ ನಾಯಕತ್ವದಲ್ಲಿ ಶುಭರಂಭದ ಕನಸು ನುಚ್ಚುನೂರಾಗಿದೆ. ಹೆಂಡಿಗ್ಲಿ ಸೋಲಿನೊಂದಿಗೆ ಅಪಹಾಸ್ಯಕ್ಕೆ ಗುರಿಯಾಗಿದೆ.
ಹೊಸ ಅಧ್ಯಾಯ.. ಕರಾಳ ಆರಂಭ..!
ಹೆಡಿಂಗ್ಲಿಯ ಮೊದಲ ಇನ್ನಿಂಗ್ಸ್ 471 ರನ್ ಗಳಿಸಿದ್ದ ಟೀಮ್ ಇಂಡಿಯಾ, 2ನೇ ಇನ್ನಿಂಗ್ಸ್ನಲ್ಲಿ 364 ರನ್ ಕಲೆಹಾಕಿತ್ತು. ಆ ಮೂಲಕ ಇಂಗ್ಲೆಂಡ್ ತಂಡಕ್ಕೆ 371 ರನ್‌ಗಳ ಟಾರ್ಗೆಟ್ ನೀಡಿತ್ತು. ಅಂತಿಮ ದಿನ ಬೆನ್ ಸ್ಟೋಕ್ಸ್ ನಾಯಕತ್ವದ ಇಂಗ್ಲೆಂಡ್ ಮುಂದೆ 350 ರನ್ ಕಲೆಹಾಕಬೇಕಾದ ಸವಾಲು ಇತ್ತು. ಈ ಟಾರ್ಗೆಟ್ ನೋಡಿದ ಬಹುತೇಕರು ನುಡಿದಿದ್ದು, ಟೀಮ್ ಇಂಡಿಯಾ ಗೆಲ್ಲುತ್ತೆ. ಇಲ್ಲ ಡ್ರಾದಲ್ಲಿ ಅಂತ್ಯ ಎಂಬ ಹೊಂಗನಸಿನಲ್ಲೇ ಇದ್ರು. ಈ ಹೊಂಗನಸು ಕನಸಾಗಿಯೇ ಉಳಿಸಿದ್ದು ಇಂಗ್ಲೆಂಡ್ ಬ್ಯಾಟರ್ಸ್.
ಇದನ್ನೂ ಓದಿ: 4 ಕ್ಯಾಚ್ ಡ್ರಾಪ್ ಮಾಡಿದ್ದರೂ ಕಾಡಲಿಲ್ಲ ಪಶ್ಚಾತಾಪ.. ಡ್ಯಾನ್ಸ್ ಮಾಡಿ ಕೆಂಗಣ್ಣಿಗೆ ಗುರಿಯಾದ ಸ್ಟಾರ್..! VIDEO
ಮಳೆಯ ನಡುವೆಯೇ ರನ್ ಹೊಳೆ ಹರಿಸಿದ ಇಂಗ್ಲೆಂಡ್ ಬ್ಯಾಟರ್ಸ್, ಇಂಡಿಯನ್ ಬೌಲರ್ಗಳ ಮೇಲೆ ದಂಡಯಾತ್ರೆ ನಡೆಸಿದ್ರು. ಕಷ್ಟದ ಟಾರ್ಗೆಟ್ ಸುಲಭಕ್ಕೆ ಚೇಸ್ ಮಾಡ್ತು. 5 ವಿಕೆಟ್ಗಳಿಂದ ಗೆದ್ದು ಮೆರೆದಾಡಿದ ಇಂಗ್ಲೆಂಡ್, ಟೀಮ್ ಇಂಡಿಯಾಗೆ ಸೋಲಿನ ರುಚಿ ತೋರಿಸಿತು. ಇದು ಟೀಮ್ ಇಂಡಿಯಾಗೆ ಸೋಲಿನ ರುಚಿ ಮಾತ್ರವೇ ಆಗಿರಲಿಲ್ಲ. ಇದು ನಾಯಕತ್ವದ ಹೊಸ ಅಧ್ಯಾಯದ ಕರಾಳ ಆರಂಭ ಆಗಿತ್ತು. ಇದಕ್ಕೆ ಕಾರಣ ಟೀಮ್ ಇಂಡಿಯಾ ಸೋತ ರೀತಿ.
ಒಂದಲ್ಲ.. ಎರಡಲ್ಲ.. ಬರೋಬ್ಬರಿ 5 ಶತಕ
ಹೆಡಿಂಗ್ಲೆಯಲ್ಲಿ ಟೀಮ್ ಇಂಡಿಯಾ ಆರ್ಭಟ ಹೇಗಿತ್ತು ಅನ್ನೋದಕ್ಕೆ ಸಾಕ್ಷಿ. ಟೀಮ್ ಇಂಡಿಯಾ ಪರ ದಾಖಲಾದ 5 ಶತಕಗಳು. ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಕೆ.ಎಲ್.ರಾಹುಲ್. ತಲಾ ಒಂದು ಶತಕ ಸಿಡಿಸಿದ್ರೆ. ರಿಷಭ್ ಪಂತ್ ಸ್ಪೋಟಕ ಎರಡು ಶತಕ ಸಿಡಿಸಿದ್ರು. ಪರಿಣಾಮ ಟೀಮ್ ಇಂಡಿಯಾ 854 ರನ್ ದಾಖಲಿಸಿತ್ತು. ಬೌಲಿಂಗ್ನಲ್ಲಿ ಇಂಗ್ಲೆಂಡ್ ಬೌಲರ್ಗಳೇ 5 ವಿಕೆಟ್ ಪಡೆಯಲು ಪರದಾಡಿದ್ರು. ಜಸ್ಪ್ರೀತ್ ಬೂಮ್ರಾ 5 ವಿಕೆಟ್ ಪಡೆದು ಗಮನ ಸೆಳೆದಿದ್ರು. ಹೀಗಾದ್ರೂ ಟೀಮ್ ಇಂಡಿಯಾ ಗೆಲುವಿಗೆ ಇದು ಸಾಕಾಗಲೇ ಇಲ್ಲ. ಇದೀಗ ಇದೇ ಸೋಲು ಟೀಮ್ ಇಂಡಿಯಾವನ್ನು ಅಪಹಾಸ್ಯಕ್ಕೆ ಗುರಿಯಾಗಿಸಿದೆ.
148 ವರ್ಷ.. 2573 ಟೆಸ್ಟ್.. ಇತಿಹಾಸದಲ್ಲಿ ಇದೇ ಮೊದಲು
ಟೆಸ್ಟ್ ಕ್ರಿಕೆಟ್ಗೆ 148 ವರ್ಷಗಳ ಇತಿಹಾಸ ಇದೆ. ಈ 148 ವರ್ಷಗಳ ಇತಿಹಾಸದಲ್ಲಿ ಇದುವರೆಗೆ 2573 ಪಂದ್ಯಗಳು ನಡೆದಿವೆ. ಈ ಪೈಕಿ ಕೇವಲ ಮೂರೇ ಮೂರು ಟೆಸ್ಟ್ ಪಂದ್ಯಗಳಲ್ಲಿ ಮಾತ್ರವೇ ಒಂದೇ ತಂಡದ ಪರ 5 ಶತಕಗಳು ದಾಖಲಾದ ಇತಿಹಾಸ ಇದೆ. ಈ ಪೈಕಿ ಒಂದು ಟೀಮ್ ಇಂಡಿಯಾ. ಆದ್ರೆ 5 ಶತಕಗಳು ದಾಖಲಾದ ಹೊರತಾಗಿಯೂ ಸೋತ ಅಪಖ್ಯಾತಿ ಮಾತ್ರ ಟೀಮ್ ಇಂಡಿಯಾಗೆ ಸೇರುತ್ತೆ.
ಇದನ್ನೂ ಓದಿ: ಮೊದಲ ಟೆಸ್ಟ್ ಸೋಲಿನ ಬೆನ್ನಲ್ಲೇ ತಂಡದಿಂದ ಸ್ಟಾರ್ ವೇಗಿಯ ಕೈಬಿಟ್ಟ ಟೀಂ ಇಂಡಿಯಾ
5 ಶತಕ ಸಿಡಿಸಿ ಗೆದ್ದ ತಂಡಗಳು..!
1955ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 5 ಶತಕ ಬಾರಿಸಿದ ಆಸ್ಟ್ರೇಲಿಯಾ ಇನಿಂಗ್ಸ್ ಹಾಗೂ 82 ರನ್‌ಗಳ ಗೆಲುವು ದಾಖಲಿಸಿದ್ರೆ. 2001ರಲ್ಲಿ ಬಾಂಗ್ಲಾ ವಿರುದ್ಧ 5 ಶತಕ ಬಾರಿಸಿದ್ದ ಪಾಕ್, ಇನಿಂಗ್ಸ್ ಹಾಗೂ 264 ರನ್‌ಗಳ ಅಭೂತಪೂರ್ವ ಗೆಲುವು ದಾಖಲಿಸಿತ್ತು. ಇದೀಗ ಟೀಮ್ ಇಂಡಿಯಾ ಪರ 5 ಶತಕ ದಾಖಲಿಸಿದ ಹೊರತಾಗಿಯೂ ಸೋಲು ಕಂಡು ಮೊದಲ ತಂಡ ಎಂಬ ಅಪಖ್ಯಾತಿಗೆ ಗುರಿಯಾಗಿದೆ.
ಒಂದು ತಂಡದ ಪರ ಒಂದೆರೆಡು ಶತಕ ದಾಖಲಾದ್ರೆ ಸಾಕು. ಗೆಲುವು ಫಿಕ್ಸ್ ಅನ್ನೋ ಮಾತಿದೆ. ಆದ್ರೆ, ಟೀಮ್ ಇಂಡಿಯಾ ಪರ 5 ಶತಕಗಳು ದಾಖಲಾದ್ರೂ, ಸೋಲಿನ ಮುಖಭಂಗ ಅನುಭವಿಸಿದೆ. ಇದು ಟೀಮ್ ಇಂಡಿಯಾದ ಲೋವರ್ ಆರ್ಡರ್ ಬ್ಯಾಟರ್ಗಳ ಬ್ಯಾಟಿಂಗ್ ವೈಫಲ್ಯ, ಅತಿ ಕೆಟ್ಟ ಫೀಲ್ಡಿಂಗ್ಗೆ ಸೋಲಿನ ಬೆಲೆ ಮಾತ್ರವೇ ತೆತ್ತಿಲ್ಲ. ವಿಶ್ವ ಕ್ರಿಕೆಟ್ ಲೋಕದ ಮುಂದಾದ ಅಪಮಾನವೂ ಆಗಿದೆ.
ಇದನ್ನೂ ಓದಿ: ತಪ್ಪು ಒಪ್ಪಿಕೊಳ್ಳದ ಗಂಭೀರ್.. ಜಟ್ಟಿ ಕೆಳಗೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅಂತಿದ್ದಾರೆ ಕೋಚ್..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ