/newsfirstlive-kannada/media/post_attachments/wp-content/uploads/2023/12/Team-India-7.jpg)
ಆಸ್ಟ್ರೇಲಿಯಾ ವಿರುದ್ಧದ 5ನೇ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿತು. ಚಿನ್ನಸ್ವಾಮಿ ಅಂಗಳದಲ್ಲಿ ಚಿನ್ನದಂಥ ಆಟವಾಡಿದ ಯಂಗ್ ಇಂಡಿಯಾ ಅಭಿಮಾನಿಗಳ ಮನ ಗೆದ್ದಿತು.
5ನೇ ಟಿ 20 ಪಂದ್ಯದಲ್ಲಿ ಟಾಸ್ ಸೋತ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ಗಿಳಿಯಿತು. ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗೂ ಋತುರಾಜ್ ಗಾಯಕ್ವಾಡ್ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದ್ರು. ಜೈಸ್ವಾಲ್ 21 ರನ್ಗಳಿಸಿ ಔಟಾದ್ರೆ ಋತುರಾಜ್ ಗಾಯಕ್ವಾಡ್ ಆಟ 10 ರನ್ಗಳಿಗೆ ಅಂತ್ಯವಾಯ್ತು.
ಬಳಿಕ ಕಣಕ್ಕಿಳಿದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ 5 ರನ್ಗಳಿಸುವಷ್ಟರಲ್ಲಿ ಸುಸ್ತಾದ್ರು. ರಿಂಕು ಸಿಂಗ್ ಆಟ 6 ರನ್ಗಳಿಗೆ ಅಂತ್ಯವಾಯ್ತು. ಕೇವಲ 55 ರನ್ಗಳಿಗೆ 4 ವಿಕೆಟ್ ಕಳೆದುಕೊಂಡ ತಂಡ ಸಂಕಷ್ಟಕ್ಕೆ ಸಿಲುಕಿತು.
ಉತ್ತಮ ಆಟವಾಡಿದ ಶ್ರೇಯಸ್ ಅಯ್ಯರ್ ತಂಡಕ್ಕೆ ಚೇತರಿಕೆ ನೀಡಿದರು. ವಿಕೆಟ್ ಕೀಪರ್ ಜಿತೇಶ್ ಶರ್ಮಾ 24 ರನ್ಗಳಿಸಿದ್ರು. 21 ಎಸೆತಗಳಲ್ಲಿ 31 ರನ್ಗಳಿಸಿ ಅಕ್ಷರ್ ಪಟೇಲ್ ಆಟ ಮುಗಿಸಿದ್ರು. ಉತ್ತಮ ಆಟವಾಡಿದ ಶ್ರೇಯಸ್ 37 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಿತ 53 ರನ್ಗಳಿಸಿ ಔಟಾದ್ರು. ಅಂತಿಮವಾಗಿ ಟೀಮ್ ಇಂಡಿಯಾ 20 ಓವರ್ಗಳಲ್ಲಿ 160 ರನ್ ಕಲೆ ಹಾಕಿತು.
161 ರನ್ಗಳ ಟಾರ್ಗೆಟ್ ಬೆನ್ನತ್ತಿದ ಆಸ್ಟ್ರೇಲಿಯಾ ಆರಂಭದಲ್ಲೇ ಆಘಾತ ಎದುರಿಸಿತು. ಜೋಶ್ ಫಿಲಿಪ್ 4 ರನ್ಗಳಿಸಿ ಔಟಾದ್ರು. ಬಳಿಕ ಜೊತೆಯಾದ ಟ್ರಾವಿಸ್ ಹೆಡ್, ಬೆನ್ ಡೆಕ್ಮಾರ್ಟ್ ತಂಡಕ್ಕೆ ಚೇತರಿಕೆ ನೀಡಿದ್ರು. ಟ್ರಾವಿಸ್ ಹೆಡ್ ಆಟಕ್ಕೆ ರವಿ ಬಿಷ್ನೋಯಿ ಬ್ರೇಕ್ ಹಾಕಿದ್ರು. ಬಳಿಕ ಕಣಕ್ಕಿಳಿದ ಆರೋನ್ ಹಾರ್ಡಿ 6 ರನ್ಗಳಿಸುವಷ್ಟರಲ್ಲೇ ಸುಸ್ತಾದ್ರು. ತಾಳ್ಮೆಯ ಆಟಕ್ಕೆ ಮುಂದಾದ ಟಿಮ್ ಡೇವಿಡ್ಗೆ ಅಕ್ಷರ್ ಪಟೇಲ್ ಪೆವಿಲಿಯನ್ ದಾರಿ ತೋರಿಸಿದ್ರು.
ಟಿಮ್ ಡೇವಿಡ್ ಬೆನ್ನಲ್ಲೇ ಮ್ಯಾಥ್ಯೂ ಶಾರ್ಟ್ ನಿರ್ಗಮಿಸಿದ್ರು. ಅದ್ರ ಬೆನ್ನಲ್ಲೇ ಮುಖೇಶ್ ಕುಮಾರ್ ಬೆನ್ ಡ್ವಾರ್ಶಿಸ್ಗೆ ಪೆವಿಲಿಯನ್ ದಾರಿ ತೋರಿಸಿದ್ರು. ಆದ್ರೆ, ಬಳಿಕ ಕಣಕ್ಕಿಳಿದ ಕ್ಯಾಪ್ಟನ್ ಮ್ಯಾಥ್ಯೂ ವೇಡ್ ಸ್ಪೋಟಕ ಆಟದ ಮುನ್ಸೂಚನೆ ನೀಡಿದ್ರು. ಅಂತಿಮವಾಗಿ ವೇಡ್ ಆಟಕ್ಕೆ ಬ್ರೇಕ್ ಹಾಕಿದ ಆರ್ಷ್ದೀಪ್ ಸಿಂಗ್ ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ಗೆಲುವಿನ ಭರವಸೆ ಹುಟ್ಟು ಹಾಕಿದ್ರು.
ಅಂತಿಮವಾಗಿ 20 ಓವರ್ಗಳಲ್ಲಿ 154 ರನ್ಗಳಿಸಲಷ್ಟೇ ಶಕ್ತವಾದ ಆಸ್ಟ್ರೇಲಿಯಾ 6 ರನ್ಗಳ ಅಂತರದಲ್ಲಿ ಸೋಲುಂಡಿತು. ರೋಚಕ ಜಯ ಸಾಧಿಸಿದ ಟೀಮ್ ಇಂಡಿಯಾ 4-1 ಅಂತರದಲ್ಲಿ ಸರಣಿ ಜಯಿಸಿತು. ವಿಶೇಷ ಅಂದರೆ ಅಕ್ಸರ್ ಪಟೇಲ್ 4 ಓವರ್ ಹಾಕಿ ಕೇವಲ 14 ರನ್ ಮಾತ್ರ ನೀಡಿದರು. ಮುಕೇಶ್ ಕುಮಾರ್ 32 ರನ್ ನೀಡಿ 3 ವಿಕೆಟ್ ಪಡೆದುಕೊಂಡರು. ರವಿ ಬಿಷ್ಣೋಯಿ 2, ಅರ್ಷದೀಪ್ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ನಾಯಕನಾದ ಮೊದಲ ಸರಣಿಯಲ್ಲೇ ಸೂರ್ಯಕುಮಾರ್ ಯಾದವ್ ಸಕ್ಸಸ್ ಕಂಡರೆ ಯುವ ಆಟಗಾರರ ಆಟ ಎಲ್ಲರ ಮನಗೆದ್ದಿತು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್