/newsfirstlive-kannada/media/post_attachments/wp-content/uploads/2024/02/Team-India.jpg)
ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಕ್ತಾಯ ಆಗಿದೆ. ಸ್ಥಿರ ಪ್ರದರ್ಶನ ನೀಡಿರೋ ಟೀಮ್​​ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. 4 ವಿಕೆಟ್​ಗಳಿಂದ ನ್ಯೂಜಿಲೆಂಡ್​ ವಿರುದ್ಧ ಗೆದ್ದು ಟೀಮ್​ ಇಂಡಿಯಾ ಚಾಂಪಿಯನ್​ ಆಗಿದೆ.
ಇನ್ನು, ಟೀಮ್​ ಇಂಡಿಯಾ 3ನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿದಿದೆ. ಇವರ ಮುಂದಿನ ಟಾರ್ಗೆಟ್​​​​​ 2027ರ ಏಕದಿನ ವಿಶ್ವಕಪ್​ ಆಗಿದೆ. ಹೀಗಾಗಿ 2027ರ ಏಕದಿನ ವಿಶ್ವಕಪ್​ ತಂಡದ ಭಾಗವಾಗಿ ಯಾವೆಲ್ಲಾ ಆಟಗಾರರು ಇದ್ದಾರೆ? ಅನ್ನೋ ಚರ್ಚೆ ಜೋರಾಗಿದೆ. ಚಾಂಪಿಯನ್ಸ್ ಟ್ರೋಫಿ ಭಾಗವಾಗಿದ್ದ ಈ ಮೂವರು ಏಕದಿನ ವಿಶ್ವಕಪ್​ ಆಡೋದು ಡೌಟ್​ ಆಗಿದೆ.
ಜಡೇಜಾ ಆಡೋದು ಡೌಟ್​
ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ. ಬೌಲಿಂಗ್​ ಮತ್ತು ಬ್ಯಾಟಿಂಗ್​ ಎರಡರಲ್ಲೂ ಕಮಾಲ್​ ಮಾಡಬಲ್ಲ ಆಟಗಾರ. 2027ರ ವಿಶ್ವಕಪ್ ವೇಳೆಗೆ ಜಡೇಜಾ ಅವರಿಗೆ 38 ವರ್ಷ ಆಗಲಿದೆ. ಇವರ ಬದಲಿಗೆ ಟೀಮ್​ ಇಂಡಿಯಾ ಮ್ಯಾನೇಜ್ಮೆಂಟ್​​​ ಯುವ ಆಲ್‌ರೌಂಡರ್ಸ್​ ಆದ ಅಕ್ಷರ್ ಪಟೇಲ್ ಹಾಗೂ ವಾಷಿಂಗ್ಟನ್ ಸುಂದರ್​​ಗೆ ಆದ್ಯತೆ ನೀಡಲಿದೆ.
ಶಮಿಗೂ ಚಾನ್ಸ್​ ಸಿಗೋದು ಅನುಮಾನ
ಭಾರತ ತಂಡದ ಸ್ಟಾರ್​ ವೇಗಿ ಮೊಹಮ್ಮದ್ ಶಮಿ. ಇವರು ಇತ್ತೀಚೆಗೆ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಲಿಲ್ಲ. ಬಾಂಗ್ಲಾದೇಶದ ವಿರುದ್ಧ ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ರೂ ಮತ್ತೆ ಹೇಳಿಕೊಳ್ಳುವಂತಹ ಬೌಲಿಂಗ್​ ಮಾಡಲೇ ಇಲ್ಲ. ಈಗಾಗಲೇ ಶಮಿಗೆ 37 ವರ್ಷ ಆಗಿದ್ದು, ಮುಂದಿ ವಿಶ್ವಕಪ್​ ವೇಳೆಗೆ ಇವರು ತಂಡದಲ್ಲಿರೋದು ಡೌಟ್​.
ತೂಗುಗತ್ತಿಯಲ್ಲಿ ಪಂತ್​ ಭವಿಷ್ಯ
ಚಾಂಪಿಯನ್ಸ್ ಟ್ರೋಫಿ ತಂಡದ ಭಾಗವಾಗಿದ್ದ ಪಂತ್​ ಟೂರ್ನಿಯುದ್ದಕ್ಕೂ ಬೆಂಚ್​ ಕಾದಿದ್ದರು. ಒಂದೇ ಒಂದೂ ಪಂದ್ಯವೂ ಆಡದ ಇವರು ಮುಂದಿನ ಏಕದಿನ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವುದು ಡೌಟ್​. ಕಾರಣ ಇವರಿಗೆ ಕನ್ನಡಿಗ ಕೆ.ಎಲ್​ ರಾಹುಲ್ ಪೈಪೋಟಿ ನೀಡುತ್ತಿದ್ದಾರೆ.
ಇದನ್ನೂ ಓದಿ:ವಿಪರೀತ ಸೂರ್ಯನ ಶಾಖ; ಬಿರು ಬೇಸಿಗೆಯಲ್ಲಿ ICE ನೀರು ಕುಡಿಯೋ ಮುನ್ನ ಎಚ್ಚರ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ