ಟೀಮ್​ ಇಂಡಿಯಾಗೆ ಬಿಗ್​ ಶಾಕ್​​; ಇಂದು ನಿವೃತ್ತಿ ಘೋಷಿಸಲಿರೋ ಮೂವರು ಸ್ಟಾರ್​ ಕ್ರಿಕೆಟರ್ಸ್​ ಇವ್ರು!

author-image
Ganesh Nachikethu
Updated On
ಟೀಮ್​ ಇಂಡಿಯಾಗೆ ಬಿಗ್​ ಶಾಕ್​​; ಇಂದು ನಿವೃತ್ತಿ ಘೋಷಿಸಲಿರೋ ಮೂವರು ಸ್ಟಾರ್​ ಕ್ರಿಕೆಟರ್ಸ್​ ಇವ್ರು!
Advertisment
  • ಐಸಿಸಿ 2025ರ ಚಾಂಪಿಯನ್ಸ್​ ಟ್ರೋಫಿ ಫೈನಲ್​ ಪಂದ್ಯ!
  • ಭಾರತ ಗೆದ್ರೂ ಸೋತ್ರೂ ಈ ಮೂವರು ಕ್ರಿಕೆಟರ್ಸ್​ ನಿವೃತ್ತಿ
  • ಟೀಮ್​ ಇಂಡಿಯಾಗೆ ಬಿಗ್​ ಶಾಕ್​ ಕೊಟ್ಟ ಸ್ಟಾರ್​​ ಪ್ಲೇಯರ್ಸ್​

ಐಸಿಸಿ 2025ರ ಚಾಂಪಿಯನ್ಸ್​ ಟ್ರೋಫಿ ಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾಗೆ ನ್ಯೂಜಿಲೆಂಡ್​ ತಂಡ 252 ರನ್​ಗಳ ಗುರಿ ನೀಡಿದೆ. ಭಾರತ ತಂಡವೂ ಈ ಬೃಹತ್​​ ಗುರಿಯನ್ನು ಬೆನ್ನತ್ತಿದೆ. ಇದರ ಮಧ್ಯೆ ಟೀಮ್​ ಇಂಡಿಯಾಗೆ ಬಿಗ್​ ಶಾಕಿಂಗ್​ ನ್ಯೂಸ್​ ಒಂದಿದೆ.

ಇತ್ತೀಚೆಗೆ ಬಾರ್ಡರ್​​​ ಗವಾಸ್ಕರ್​ ಟ್ರೋಫಿ ಮಧ್ಯೆ 3ನೇ ಟೆಸ್ಟ್​ ಪಂದ್ಯ ಮುಗಿದ ಬೆನ್ನಲ್ಲೇ ನಿರೀಕ್ಷೆಯಂತೆ ಟೀಮ್​ ಇಂಡಿಯಾ ಅನುಭವಿ ಆಟಗಾರ ಅಶ್ವಿನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ರು. ಹಿರಿಯರನ್ನು ಸೈಡ್​ಲೈನ್​ ಮಾಡಿದ್ದೇ ಆರ್​​. ಅಶ್ವಿನ್​​​ ನಿವೃತ್ತಿಗೆ ಕಾರಣವಾಗಿದೆ. ಇದು ಟೀಮ್​ ಇಂಡಿಯಾ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

publive-image

ಇಂದು ಮೂವರು ಕ್ರಿಕೆಟ್​ನಿಂದ ನಿವೃತ್ತಿ

ಈ ವರ್ಷ ಟೀಮ್​ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಇಂಗ್ಲೆಂಡ್​ ಪ್ರವಾಸದಲ್ಲಿ 5 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಈ ಮಹತ್ವದ ಪ್ರವಾಸಕ್ಕೆ ಟೀಮ್​ ಇಂಡಿಯಾದಲ್ಲಿ ಮೇಜರ್​ ಸರ್ಜರಿ ಆಗಲಿದೆ. ಇಂದು ಟೀಮ್​ ಇಂಡಿಯಾ ಗೆದ್ರೂ ಸೋತ್ರೂ ಹಿರಿಯ ಆಟಗಾರರು ನಿವೃತ್ತಿ ಆಗಬಹುದು ಎಂದು ತಿಳಿದು ಬಂದಿದೆ.

ನಿವೃತ್ತಿ ಘೋಷಿಸೋ ಕ್ರಿಕೆಟರ್ಸ್​​ ಯಾರು?

ಟೀಮ್ ಇಂಡಿಯಾದಲ್ಲಿ ಬದಲಾವಣೆ ಗಾಳಿ ಬೀಸಲಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಇಂದು ನಿವೃತ್ತಿ ಘೋಷಿಸಬಹುದು. ಭಾರತ ತಂಡ ಚಾಂಪಿಯನ್ಸ್​ ಟ್ರೋಫಿ ಫೈನಲ್​ ಗೆದ್ರೂ ಸೋತ್ರೂ ಈ ಮೂವರು ಇಂದು ರಿಟೈರ್​ ಆಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment