/newsfirstlive-kannada/media/post_attachments/wp-content/uploads/2025/03/IND-vs-NZ-win.jpg)
ಇಂದು ನಡೆದ 2025ರ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ ಗೆದ್ದು ಬೀಗಿದೆ. ಈ ಮೂಲಕ ನ್ಯೂಜಿಲೆಂಡ್ ಚಾಂಪಿಯನ್ಸ್ ಟ್ರೋಫಿ ಫೈನಲ್ ತಲುಪಿದೆ. ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ, ನ್ಯೂಜಿಲೆಂಡ್ ಮಧ್ಯೆ ಜಿದ್ದಾಜಿದ್ದಿ ಏರ್ಪಡಲಿದೆ.
ನ್ಯೂಜಿಲೆಂಡ್ ನೀಡಿದ 363 ರನ್ಗಳ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡ ಟಫ್ ನೀಡಿದೆ. ಇಷ್ಟಾದ್ರೂ ಸುಮಾರು 50 ರನ್ಗಳಿಂದ ಸೋತಿದೆ. ಮತ್ತೆ ಚೋಕರ್ಸ್ ಎಂದು ಸೌತ್ ಆಫ್ರಿಕಾ ಫ್ರೂವ್ ಮಾಡಿದೆ.
ಸೌತ್ ಆಫ್ರಿಕಾ ಉತ್ತಮ ಆರಂಭ ಪಡೆದುಕೊಂಡಿತು. ರಿಕಲ್ಟನ್ ಕೇವಲ 17 ರನ್ಗೆ ಔಟಾದ್ರು. 2ನೇ ವಿಕೆಟ್ಗೆ ಕ್ಯಾಪ್ಟನ್ ಬವುಮಾ ಮತ್ತು ಡಸ್ಸೆನ್ ಶತಕದ ಜೊತೆಯಾಟ ಆಡಿದರು. ಇಬ್ಬರು ತಲಾ ಅರ್ಧಶತಕ ಸಿಡಿಸಿದರು. ಬವುಮಾ 56, ಡಸ್ಸೆನ್ 69 ರನ್ ಚಚ್ಚಿದ್ರು.
ಕೊನೆಯರೆಗೂ ಕ್ರೀಸ್ನಲ್ಲಿ ನಿಂತು ಡೇವಿಡ್ ಮಿಲ್ಲರ್ ಏಕಾಂಗಿ ಹೋರಾಟ ನಡೆಸಿದರು. ಆದ್ರೂ ರನ್ಗಳ ಅಗತ್ಯ ಜಾಸ್ತಿ ಇದ್ದರಿಂದ ಏಕಾಂಗಿ ಹೋರಾಟ ಸಾಧ್ಯವಾಗಲಿಲ್ಲ. ಬದಲಿಗೆ ಸ್ಫೋಟಕ ಶತಕ ಸಿಡಿಸಿ ಗೆಲುವಿನ ಭರವಸೆ ಮೂಡಿಸಿದ್ರೂ ಪ್ರಯೋಜನೆ ಆಗಲಿಲ್ಲ. ಹೀಗಾಗಿ ಸೌತ್ ಆಫ್ರಿಕಾ ಸೋಲನ್ನು ಒಪ್ಪಿಕೊಳ್ಳಬೇಕಾಯ್ತು.
ಟೀಮ್ ಇಂಡಿಯಾ, ನ್ಯೂಜಿಲೆಂಡ್ ಜಿದ್ದಾಜಿದ್ದಿ
ಭಾನುವಾರ ನಡೆಯಲಿರೋ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್, ಭಾರತ ತಂಡ ಸೆಣಸಲಿವೆ. ಕಳೆದ ಪಂದ್ಯದಲ್ಲಿ ಸೋತಿದ್ದ ನ್ಯೂಜಿಲೆಂಡ್ ಭಾರತ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ