ಭಾರೀ ಒತ್ತಡದಲ್ಲಿ ಟೀಂ ಇಂಡಿಯಾ.. ತಂಡದ ಆತ್ಮವಿಶ್ವಾಸ ಕುಗ್ಗಲು ಐದು ಕಾರಣ..!

author-image
Ganesh
Updated On
ಭಾರೀ ಒತ್ತಡದಲ್ಲಿ ಟೀಂ ಇಂಡಿಯಾ.. ತಂಡದ ಆತ್ಮವಿಶ್ವಾಸ ಕುಗ್ಗಲು ಐದು ಕಾರಣ..!
Advertisment
  • ಅನಾನುಭವಿ ನಾಯಕನಿ​ಗೆ ಪ್ರತಿಷ್ಟಿತ ಸರಣಿ ಸವಾಲ್​
  • ಕೊಹ್ಲಿ ಇಲ್ಲ.. ರೋಹಿತ್​ ಇಲ್ಲ.. ಸ್ಟಾರ್​​ಗಳ ಬಲವಿಲ್ಲ
  • ಬ್ಯಾಟಿಂಗ್​, ಬೌಲಿಂಗ್​ನಲ್ಲಿ ಅನಾನುಭವಿ ಆಟಗಾರರು

ಇಂಡಿಯನ್​​ ಟೈಗರ್ಸ್​ vs ಇಂಗ್ಲೆಂಡ್​ ಲಯನ್ಸ್​ ನಡುವಿನ ಟೆಸ್ಟ್​​ ಕಾದಾಟಕ್ಕೆ ದಿನಗಣನೆ ಶುರುವಾಗಿದೆ. ಸರಣಿಗೂ ಮುನ್ನ ಐರ್ಲೆಂಡ್​​ ತಂಡವನ್ನ ಬಗ್ಗು ಬಡಿದ ಇಂಗ್ಲೆಂಡ್​ ಫುಲ್​ ಕಾನ್ಫಿಡೆನ್ಸ್​ನಲ್ಲಿ ತೇಲಾಡ್ತಿದೆ. ಆದ್ರೆ ಆಂಗ್ಲರ ನಾಡಿಗೆ ಕಾಲಿಟ್ಟಿರೋ ಟೀಮ್​ ಇಂಡಿಯಾ ಒತ್ತಡಕ್ಕೆ ಸಿಲುಕಿದೆ.

ಇಂಡೋ-ಇಂಗ್ಲೆಂಡ್​​ ನಡುವಿನ ಟೆಸ್ಟ್​ ಸರಣಿಯ ಫೀವರ್​ ಕ್ರಿಕೆಟ್​ ಲೋಕವನ್ನ ಆವರಿಸ್ತಿದೆ. ಪ್ರತಿಷ್ಟಿತ ಸರಣಿಯನ್ನಾಡಲು ಆಂಗ್ಲರ ನಾಡಿಗೆ ಕಾಲಿಟ್ಟಿರೋ ಟೀಮ್​ ಇಂಡಿಯಾ ಈಗಾಗಲೇ ಅಭ್ಯಾಸದ ಕಣಕ್ಕೂ ಧುಮುಕಿದೆ. 12 ದಿನ ಮೊದಲೇ ಇಂಗ್ಲೆಂಡ್​ನಲ್ಲಿ ಅಭ್ಯಾಸ ಆರಂಭಿಸಿದ್ರೂ ಇಂಡಿಯನ್​​ ಕ್ಯಾಂಪ್​ನಲ್ಲಿ ನೆಮ್ಮದಿಯೇ ಇಲ್ಲ. ಇಂಗ್ಲೆಂಡ್​​ ತಂಡ ಆತ್ಮವಿಶ್ವಾಸದ ಅಲೆಯಲ್ಲಿದ್ರೆ ಟೀಮ್​ ಇಂಡಿಯಾ ಒತ್ತಡಕ್ಕೆ ಸಿಲುಕಿದೆ.

ಇದನ್ನೂ ಓದಿ: ಅಮ್ಮ ಕೊಟ್ಟ ಊಟ ಕೂಡ ಮಾಡದೆ ಮಗ ನೇಣಿಗೆ ಶರಣು.. ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಆತ್ಮಹತ್ಯೆ ಶಂಕೆ..

ಅನಾನುಭವಿ ನಾಯಕ, ಪ್ರತಿಷ್ಟಿತ ಸರಣಿ..!

ಇಂಗ್ಲೆಂಡ್​​​ ವಿರುದ್ಧದ ಟೆಸ್ಟ್​ ಸರಣಿಯೊಂದಿಗೆ ಟೀಮ್​ ಇಂಡಿಯಾದಲ್ಲಿ ಶುಭ್​ಮನ್​ ಗಿಲ್​ ನಾಯಕತ್ವದ ಅಧ್ಯಾಯ ಆರಂಭವಾಗಲಿದೆ. ನಾಯಕನಾಗಿ ಐಪಿಎಲ್​ನಲ್ಲಿ ತಂಡವನ್ನ ಮುನ್ನಡೆಸಿದ ಅನುಭವಿದ್ರೂ, ರೆಡ್​ ಬಾಲ್​ ಕ್ರಿಕೆಟ್​​ನಲ್ಲಿ ಗಿಲ್​ಗೆ​ ಅನುಭವವಿಲ್ಲ. ಕೇವಲ 1 ಡೊಮೆಸ್ಟಿಕ್​ ಪಂದ್ಯದಲ್ಲಿ ಪಂಜಾಬ್​ ತಂಡವನ್ನ ಲೀಡ್​ ಮಾಡಿದ್ದಾರಷ್ಟೇ. ನಾಯಕತ್ವದ ಅನುಭವವೇ ಇಲ್ಲದಿರೋ ಗಿಲ್​ ಮೊದಲ ಹೆಜ್ಜೆಯಲ್ಲೇ ಬಲಿಷ್ಟ ಇಂಗ್ಲೆಂಡ್​ ತಂಡವನ್ನ ಅವರದ್ದೇ ನೆಲದಲ್ಲಿ ಎದುರಿಸ್ತಿದ್ದಾರೆ. ಅನಾನುಭವ, ಪ್ರತಿಷ್ಟಿತ ಸರಣಿಯಲ್ಲಿ ಪರ್ಫಾಮ್​​ ಮಾಡಬೇಕಾದ ಅನಿವಾರ್ಯತೆ ಸದ್ಯ ಒತ್ತಡಕ್ಕೆ ಕಾರಣವಾಗಿದೆ.

ಕೊಹ್ಲಿ ಇಲ್ಲ.. ರೋಹಿತ್​ ಇಲ್ಲ.. ಸ್ಟಾರ್​​ಗಳ ಬಲವಿಲ್ಲ.!

ವಿರಾಟ್​​ ಕೊಹ್ಲಿ, ರೋಹಿತ್​ ಶರ್ಮಾ.. ಅನುಭವಿಗಳಾದ ಇವರಿಬ್ಬರು ತಂಡದಲ್ಲಿದ್ದಿದ್ರೆ, ಟೀಮ್​ ಬ್ಯಾಲೆನ್ಸ್​​ ಹೆಚ್ತಾ ಇತ್ತು. ನಾಯಕ ಗಿಲ್​ಗೆ ಸೂಕ್ತ, ಸಲಹೆಗಳು ಸಿಗ್ತಾ ಇತ್ತು. ಇವರಿಬ್ಬರು ಹೇಗೆ ಪರ್ಫಾಮ್​ ಮಾಡ್ತಾರೆ ಅನ್ನೋದು ಸೆಕೆಂಡರಿ, ಇವರಿಬ್ಬರು ತಂಡದಲ್ಲಿದ್ದಾರೆ ಅಂದ್ರೆ ಸಾಕು ಎದುರಾಳಿ ತಂಡದ ಮೇಲೆ ಪ್ರೆಶರ್​ ಬ್ಯುಲ್ಡ್​ ಆಗೇ ಆಗ್ತಿತ್ತು. ಈ ಪ್ರವಾಸದಲ್ಲಿ ಇಬ್ಬರೂ ತಂಡದಲ್ಲಿಲ್ಲ. ಇಬ್ಬರ ಅಲಭ್ಯತೆಯಿಂದಾಗಿ ಪ್ರೆಶರ್​​ ಈಗ ಟೀಮ್​ ಇಂಡಿಯಾ ಮೇಲೆ ಬಿದ್ದಿದೆ.

ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ ಬಿಗ್ ಶಾಕ್​.. ಮಹತ್ವದ ಟೂರ್ನಿಯಲ್ಲಿ ರಿಷಭ್ ಪಂತ್ ಆಡೋದು ಡೌಟ್​!​

ಬ್ಯಾಟಿಂಗ್​, ಬೌಲಿಂಗ್​ನಲ್ಲಿ ಅನಾನುಭವಿ ಆಟಗಾರರು

ಇಂಗ್ಲೆಂಡ್​​ ನೆಲಕ್ಕೆ ಕಾಲಿಟ್ಟಿರೋ ಟೀಮ್​ ಇಂಡಿಯಾದಲ್ಲಿ ಅನುಭವಿಗಳೇ ಇಲ್ಲ. ತಂಡದಲ್ಲಿ ಕೆಲವರು ಬೆರಳೆಣಿಕೆಯಷ್ಟು ಪಂದ್ಯಗಳನ್ನಾಡಿದ್ರೆ, ಇನ್ನು ಕೆಲವರು ಡೆಬ್ಯೂ ಮಾಡಲು ಸಜ್ಜಾಗಿದ್ದಾರೆ. ತಂಡದಲ್ಲಿರೋ ಕೆಲವೇ ಕೆಲವು ಆಟಗಾರರಿಗೆ ಮಾತ್ರ ಇಂಗ್ಲೆಂಡ್​ನಲ್ಲಿ ಆಡಿದ ಅನುಭವವಿದೆ. ಹೇಳಿ ಕೇಳಿ.. ಇಂಗ್ಲೆಂಡ್​ನ ಪ್ಲೇಯಿಂಗ್​ ಕಂಡಿಷನ್ಸ್​ನಲ್ಲಿ ಆಡೋದು ಬಿಗ್ಗೆಸ್ಟ್​ ಟಾಸ್ಕ್​. ಟಫ್​ ಕಂಡಿಷನ್ಸ್​ನಲ್ಲಿ ಇನ್​ಎಕ್ಸ್​​ಪಿರೀಯನ್ಸ್​​ ಟೀಮ್ ಇಟ್ಕೊಂಡು ಆಡೋಕೆ ಹೋಗಿರೋದೆ ಒತ್ತಡ ಹೆಚ್ಚಿಸಿದೆ.

ಕೋಚ್​ ಗಂಭೀರ್​ ಮೇಲಿದೆ ಒತ್ತಡ

ಏಕದಿನ ಫಾರ್ಮೆಟ್​​​ನಲ್ಲಿ ಚಾಂಪಿಯನ್ಸ್​ ಟ್ರೋಫಿ ಗೆಲ್ಲಿಸಿಕೊಟ್ಟ ಹೆಡ್​ ಕೋಚ್​ ಗೌತಮ್​ ಗಂಭೀರ್​​ ಟೆಸ್ಟ್​ ಫಾರ್ಮೆಟ್​ನಲ್ಲಿ ಫೇಲ್​ ಆಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್​ ಸರಣಿಯಲ್ಲಿ 2-0 ಅಂತರದಲ್ಲಿ ಜಯಿಸಿದ್ದು ಬಿಟ್ರೆ ಉಳಿದ ಸರಣಿಗಳಲ್ಲಿ ಗಂಭೀರ್​ ಮಾರ್ಗದರ್ಶನದಲ್ಲಿ ಟೀಮ್​ ಇಂಡಿಯಾ ಸೋತಿದೆ. ನ್ಯೂಜಿಲೆಂಡ್​ ವಿರುದ್ಧ ತವರಿನಲ್ಲಿ ಮುಖಭಂಗ ಅನುಭವಿಸಿದ್ರೆ, ಬಾರ್ಡರ್​​-ಗವಾಸ್ಕರ್​ ಟೆಸ್ಟ್​ ಸರಣಿಯಲ್ಲಿ ಸೋಲುಂಡಿದೆ. ಸದ್ಯ ಗಂಭೀರ್​​ ಸ್ಥಾನದ ಮೇಲೆ ತೂಗುಗತ್ತಿ ನೇತಾಡ್ತಿದ್ದು, ಹೆಡ್​​ ಕೋಚ್​ ಸದ್ಯ ಸರಣಿ ಗೆಲ್ಲಿಸಿಕೊಡಲೇ ಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.

ಇಡೀ ತಂಡದಲ್ಲಿ ಆತ್ಮವಿಶ್ವಾಸವೇ ಇಲ್ಲ

ಟೆಸ್ಟ್​ ಸರಣಿಗಾಗಿ ಇಂಗ್ಲೆಂಡ್​ ಹಾರಿರುವ ಟೀಮ್ ಇಂಡಿಯಾದಲ್ಲಿ ಸದ್ಯಕ್ಕಂತೂ ಕಾನ್ಫಿಡೆನ್ಸ್​​ ಆನ್ನೋದೆ ಕಾಣಿಸ್ತಿಲ್ಲ. ಅಭ್ಯಾಸವನ್ನ ಆರಂಭಿಸಿದ್ರೂ ತಂಡದಲ್ಲಿ ಲೋ ಕಾನ್ಫಿಡೆನ್ಸ್​​ ಹಾಗೇ ಉಳಿದಿದೆ. ಈ ಆತ್ಮವಿಶ್ವಾಸದ ಕೊರತೆ ಕೂಡ ಟೀಮ್​ ಇಂಡಿಯಾ ಮೇಲೆ ಪ್ರೆಶರ್​​ ಬ್ಯುಲ್ಡ್​ ಮಾಡಿದೆ.

ಒಟ್ಟಿನಲ್ಲಿ ಯುದ್ಧಕ್ಕೂ ಮುನ್ನವೇ ಟೀಮ್​ ಇಂಡಿಯಾ ಸಂಪೂರ್ಣ ಒತ್ತಡಕ್ಕೆ ಸಿಲುಕಿದೆ. ಸರಣಿ ಆರಂಭಕ್ಕೆ ಇನ್ನೂ 10 ದಿನಗಳ ಸಮಯವಿದೆ. ಈ ಅಂತರ ಇಂಗ್ಲೆಂಡ್​​ ಕಂಡಿಷನ್ಸ್​ಗೆ ಒಗ್ಗಿಕೊಳ್ಳಲು ರೆಡ್​ಬಾಲ್​ ಕ್ರಿಕೆಟ್​​ನ ರಿಧಮ್​ ಕಂಡುಕೊಳ್ಳೋಕೆ ಸಹಾಯ ಮಾಡಲಿದೆ. ಜೊತೆಗೆ ಇದೇ ಗ್ಯಾಪ್​ನಲ್ಲಿ ಟೀಮ್​ ಇಂಡಿಯಾ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕಿದೆ.

ಇದನ್ನೂ ಓದಿ: ಶಿವಣ್ಣ ಸಿನಿ ಜರ್ನಿಗೆ 40 ವರುಷ ತುಂಬಿದ ಸಂಭ್ರಮ.. ಕನ್ನಡದಲ್ಲೇ ಶುಭ ಹಾರೈಸಿದ ಕಮಲ್ ಹಾಸನ್..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment