/newsfirstlive-kannada/media/post_attachments/wp-content/uploads/2024/05/ROHIT_SHARMA_NEW_1.jpg)
T20 ವಿಶ್ವಕಪ್ ಈ ಬಾರಿ ಅಮೆರಿಕ, ವೆಸ್ಟ್ ಇಂಡೀಸ್ನಲ್ಲಿ ನಡೆಯಲಿದೆ. ಈಗಾಗಲೇ ರೋಹಿತ್ ಶರ್ಮಾ ನೇತೃತ್ವದ ಭಾರತದ ಆಟಗಾರರು ನ್ಯೂಯಾರ್ಕ್ ವಿಮಾನವನ್ನು ಹತ್ತಿದ್ದಾರೆ. ಕಪ್ ಗೆಲ್ಲುವ ನಿರೀಕ್ಷೆಯಲ್ಲಿ ಫುಲ್ ಜೋಶ್ನಲ್ಲಿ ರೋಹಿತ್ ಬಾಯ್ಸ್ ವಿಮಾನ ಹತ್ತಿದ್ದಾರೆ. ಆದ್ರೆ ಇದರ ನಡುವೆ ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಅವರು ನ್ಯೂಯಾರ್ಕ್ ವಿಮಾನವನ್ನು ಹತ್ತಿಲ್ಲ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಹಾರ್ದಿಕ್ರನ್ನ ಬಿಟ್ಟು ಪ್ರತ್ಯೇಕ ವಾಸಿಸುತ್ತಿದ್ದಾರಾ ನತಾಶಾ.. ಪಾಂಡ್ಯ ಪತ್ನಿಯ ಮೌನಕ್ಕೆ ಕಾರಣ?
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ರೋಹಿತ್ ಶರ್ಮಾ ತಂಡದ ಜೊತೆ ವಿಮಾನ ಹತ್ತಿಲ್ಲ. ಏಕೆಂದರೆ ಭಾರತದಲ್ಲಿ ಅವರ ಕೆಲವು ಮುಖ್ಯವಾದ ಕೆಲಸ ಆಗಬೇಕಿದೆ. ಹೀಗಾಗಿ ಕೊಹ್ಲಿ ಮೇ 30ರಂದು ನ್ಯೂಯಾರ್ಕ್ಗೆ ಪ್ರಯಾಣ ಬೆಳಸಲಿದ್ದಾರೆ ಎನ್ನಲಾಗಿದೆ. ಮುಂಬೈನ ಏರ್ಪೋರ್ಟ್ನಿಂದ ರೋಹಿತ್ ಶರ್ಮಾ, ಜಡೇಜಾ, ಶಿವಂ ದುಬೆ, ರಿಷಬ್ ಪಂತ್, ಬೂಮ್ರಾ, ಆರ್ಷ್ದೀಪ್ ಸಿಂಗ್, ಕುಲ್ದೀಪ್ ಯಾದವ್ ಸಿರಾಜ್ ಹಾಗೂ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಇನ್ನು ಕೆಲ ಪ್ಲೇಯರ್ಸ್ ವಿಶ್ವಕಪ್ ಟೂರ್ನಿಗಾಗಿ ಅಮೆರಿಕಕ್ಕೆ ತೆರಳಿದ್ದಾರೆ. ಆದರೆ ವಿರಾಟ್ ಕೊಹ್ಲಿ ಅವರಿಗೆ ಕೆಲ ಪೇಪರ್ ವರ್ಕ್ ಇರುವುದರಿಂದ ಇನ್ನು ಭಾರತದಲ್ಲೇ ಉಳಿದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ವಿಚಿತ್ರ ಅಂದ್ರೆ ವಿಚಿತ್ರ; IPL ಫೈನಲ್ನಲ್ಲಿ ವಿಶ್ವಕಪ್ಗೆ ಆಯ್ಕೆಯಾದ ಭಾರತದ ಪ್ಲೇಯರ್ಸ್ ಆಡ್ತಿದ್ದಾರಾ..?
T20 ವಿಶ್ವಕಪ್ಗೆ ಆಯ್ಕೆಯಾದ ಭಾರತದ 15 ಸದಸ್ಯರ ತಂಡ ಮತ್ತು ಸಹಾಯಕ ಸಿಬ್ಬಂದಿ ಮೇ 26ರಂದು ನ್ಯೂಯಾರ್ಕ್ ತಲುಪಲಿದ್ದಾರೆ. ಬಳಿಕ ಅಲ್ಲಿನ ಮೈದಾನದಲ್ಲಿ ಅಭ್ಯಾಸ ನಡೆಸಲಿದ್ದಾರೆ. ಜೂನ್ 5ರಂದು ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಐರ್ಲೆಂಡ್ ತಂಡದ ವಿರುದ್ಧ ವಿಶ್ವಕಪ್‌ನ ತಮ್ಮ ಮೊದಲ ಪಂದ್ಯವನ್ನು ರೋಹಿತ್ ಶರ್ಮಾ ಪಡೆ ಆಡಲಿದೆ. ಇದಾದ ಬಳಿಕ ಜೂನ್ 9 ರಂದು ಸಾಂಪ್ರದಾಯಿಕ ಎದುರಾಳಿ ಪಾಕ್ ಅನ್ನು ಭಾರತ ಎದುರಿಸಲಿದೆ. ಇದೊಂದು ಹೈವೋಲ್ಟೇಜ್ ಪಂದ್ಯವಾಗಿದ್ದು ಅಭಿಮಾನಿಗಳು ಕುತೂಹಲದಿಂದ ಇದ್ದಾರೆ.
The wait is over.
We are back!
Let's show your support for #TeamIndia ?? pic.twitter.com/yc69JiclP8
— BCCI (@BCCI)
The wait is over.
We are back!
Let's show your support for #TeamIndia 🇮🇳 pic.twitter.com/yc69JiclP8— BCCI (@BCCI) May 25, 2024
">May 25, 2024
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ