/newsfirstlive-kannada/media/post_attachments/wp-content/uploads/2025/01/Shubhman-Gill_Axar-Patel.jpg)
ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್​​ ಗವಾಸ್ಕರ್​​ ಟ್ರೋಫಿಯಲ್ಲಿ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದೆ. ಈ ಬೆನ್ನಲ್ಲೀಗ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆಡಲು ಮುಂದಾಗಿರೋ ಟೀಮ್​ ಇಂಡಿಯಾ ಗೆಲುವಿನ ನಿರೀಕ್ಷೆಯಲ್ಲಿದೆ.
ಇನ್ನು, ಟೀಮ್​ ಇಂಡಿಯಾವನ್ನು ಕ್ಯಾಪ್ಟನ್​ ಸೂರ್ಯಕುಮಾರ್​​ ಯಾದವ್​ ಲೀಡ್​ ಮಾಡಲಿದ್ದಾರೆ. ಶುಭ್ಮನ್​​ ಗಿಲ್​ ಬದಲಿಗೆ ಅಕ್ಷರ್​ ಪಟೇಲ್​​ಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ. ಅಕ್ಷರ್​​ ಪಟೇಲ್​​​ ವೈಸ್​ ಕ್ಯಾಪ್ಟನ್​​ ಆಗಿ ಮಿಂಚುವ ಸಾಧ್ಯತೆ ಇದೆ.
ಅಕ್ಷರ್​​ ಪಟೇಲ್​ ಏನಂದ್ರು?
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಮ್​ನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯ ನಡೆಯಲಿದೆ. ಈ ಮುನ್ನ ಮಾತಾಡಿರೋ ಉಪನಾಯಕ ಅಕ್ಷರ್​ ಪಟೇಲ್​ ಅವರು, ಭಾರತ ತಂಡ ಟಿ20 ಕ್ರಿಕೆಟ್‌ನಲ್ಲಿ ಭವಿಷ್ಯದ ಗುರಿಗಳನ್ನು ಹೊಂದಿದೆ. ಮುಂದಿನ ವರ್ಷ ಟಿ20 ವಿಶ್ವಕಪ್ ನಡೆಯಲಿದೆ. ಹೀಗಾಗಿ ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿ ಬಹಳ ಮುಖ್ಯವಾಗಿದೆ ಎಂದರು.
ನಾಳೆಯ ಪಂದ್ಯ ಹೇಗೆ ಗೆಲ್ಲೋದು ಎಂದು ರಣತಂತ್ರ ರೂಪಿಸಬೇಕಿದೆ. ಪಂದ್ಯಗಳನ್ನು ಗೆಲ್ಲಲು ಏನು ಮಾಡಬೇಕು? ಏನು ಮಾಡಬಾರದು? ಎಂಬುದನ್ನು ಯೋಚನೆ ಮಾಡುವುದು ಮುಖ್ಯ. ಕ್ಯಾಪ್ಟನ್​ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಮಾತನಾಡಿದ್ದೇನೆ. ಜವಾಬ್ದಾರಿ ತುಂಬಾ ಹೆಚ್ಚಾಗಿದೆ. ಸೂರ್ಯ ಮೇಲೆ ನನಗೆ ವಿಶ್ವಾಸ ಹೆಚ್ಚಿದೆ ಎಂದರು.
ನನ್ನ ಕೈಲಾದಷ್ಟು ಮಾಡುತ್ತೇನೆ ಎಂದ ಅಕ್ಷರ್​ ಪಟೇಲ್​​
ನನಗೆ ಅವಕಾಶ ಸಿಗುತ್ತಾ ಇಲ್ಲವಾ? ಅನ್ನೋದರ ಬಗ್ಗೆ ಯೋಚನೆ ಮಾಡುವುದಿಲ್ಲ. ಯಾರಿಗೂ ನನ್ನ ಸಾಮರ್ಥ್ಯ ಸಾಬಿತು ಮಾಡಬೇಕಾದ ಅಗತ್ಯ ಇಲ್ಲ. ಅವಕಾಶ ಸಿಕ್ಕಾಗ ನನ್ನ ಕೈಲಾದಷ್ಟು ಮಾಡುತ್ತೇನೆ. ನಾನು ತಂಡಕ್ಕೆ ಹೇಗೆ ಕೊಡುಗೆ ನೀಡಬೇಕು ಎಂದು ಯೋಚಿಸುತ್ತೇನೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us