Advertisment

ಡೆಲ್ಲಿ, ಲಕ್ನೋ ಫ್ರಾಂಚೈಸಿಯಿಂದ ಬಿಗ್ ಅಪ್​ಡೇಟ್ಸ್​; ಕನ್ನಡಿಗನ ವಿಚಾರದಲ್ಲಿ DC ತಪ್ಪು ಮಾಡ್ತಿದ್ಯಾ?

author-image
Ganesh
Updated On
IPL 2025: ಡೆಲ್ಲಿ ತಂಡದ ಕ್ಯಾಪ್ಟನ್ಸಿ ನಿರೀಕ್ಷೆಯಲ್ಲಿದ್ದ KL​ ರಾಹುಲ್​ಗೆ ಬಿಗ್​ ಶಾಕ್​​
Advertisment
  • ಲಕ್ನೋ ಫ್ರಾಂಚೈಸಿಯಿಂದ ಇಂದು ಕ್ಯಾಪ್ಟನ್ ಅನೌನ್ಸ್​..!
  • ಕ್ಯಾಪ್ಟನ್​​ ರೇಸ್​ನಿಂದ ಹೊರಬಿದ್ರಾ ರಾಹುಲ್..?
  • ಅಕ್ಷರ್ ಲಕ್ ಬದಲಿಸ್ತಾ ಟಿ20 ಉಪ ನಾಯಕತ್ವ..?

ಐಪಿಎಲ್​ ಸೀಸನ್​-18ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮೆಗಾ ಹರಾಜಿನಲ್ಲಿ ಬಲಿಷ್ಠ ತಂಡಗಳನ್ನೇ ಕಟ್ಟಿರುವ ಟ್ರೋಫಿ ಸಿದ್ಧತೆ ಆರಂಭಿಸಿವೆ. 4 ತಂಡಗಳ ನಾಯಕನ್ಯಾರು ಅನ್ನೋದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೊಲ್ಕತ್ತಾ ನೈಟ್​ ರೈಡರ್ಸ್, ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳ ಸಾರಥಿ ಯಾರು ಅನ್ನೋದು ಕುತೂಹಲ ಮೂಡಿಸಿದೆ.

Advertisment

ಇಷ್ಟು ದಿನ ನಾಯಕತ್ವದ ವಿಚಾರದಲ್ಲಿ ತಾಳ್ಮೆಯ ಮಂತ್ರ ಪಠಿಸಿದ್ದ ಲಕ್ನೋ ಸೂಪರ್ ಜೈಂಟ್ಸ್ ಆ್ಯಂಡ್ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು​ ಇದೀಗ ನಾಯಕನ ಪಟ್ಟಾಭಿಷೇಕಕ್ಕೆ ಮುಂದಾಗಿವೆ. ಅದ್ರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಈ ವಿಚಾರದಲ್ಲಿ ಸರ್​​ಪ್ರೈಸ್​ ಹೆಜ್ಜೆ ಇಟ್ಟಿದೆ. ಎರಡು ಹೆಸರುಗಳು ಸದ್ಯ ಡೆಲ್ಲಿ ಕ್ಯಾಪ್ಟನ್ಸಿ ರೇಸ್​ನಲ್ಲಿವೆ.

ಇದನ್ನೂ ಓದಿ: 24 ಬಾಲ್ ಎಸೆದು ಕೇವಲ 14 ರನ್ ಕೊಟ್ಟ ಅಕ್ಸರ್ ಪಟೇಲ್.. ಅಭಿಮಾನಿಗಳ ಮನಗೆದ್ದ ಯಂಗ್ ಇಂಡಿಯಾ..!

publive-image

ಕೆ.ಎಲ್.ರಾಹುಲ್​​ ಕೈ ತಪ್ಪುತ್ತಾ ಡೆಲ್ಲಿ ಕ್ಯಾಪ್ಟನ್ಸಿ ಪಟ್ಟ?

ಮೆಗಾ ಹರಾಜಿನಲ್ಲಿ ಕೆ.ಎಲ್.ರಾಹುಲ್, ಡೆಲ್ಲಿ ಕ್ಯಾಪಿಟಲ್ಸ್​ ಸೇರಿದ್ದೇ ಸೇರಿದ್ದು.. ಕನ್ನಡಿಗ ಕೆ.ಎಲ್​.ರಾಹುಲ್, ಡೆಲ್ಲಿ ತಂಡದ ನಾಯಕತ್ವದ ಗದ್ದುಗೆ ಏರೋದು ಫಿಕ್ಸ್​ ಎಂಬ ಮಾತುಗಳು ಕೇಳಿ ಬಂದಿತ್ತು. ಟೀಮ್ ಇಂಡಿಯಾ ಸೇರಿದಂತೆ ಐಪಿಎಲ್​ನಲ್ಲಿ ಪಂಜಾಬ್ ಕಿಂಗ್​, ಲಕ್ನೋ ಸೂಪರ್​​ ಜೈಂಟ್ಸ್​​ ತಂಡಗಳನ್ನು ಮುನ್ನಡೆಸಿರುವ ಅನುಭವ ಹೊಂದಿರುವ ರಾಹುಲ್, ಡೆಲ್ಲಿ ಫ್ರಾಂಚೈಸಿಯ ಫಸ್ಟ್​ ಚಾಯ್ಸ್ ಕ್ಯಾಪ್ಟನ್​​​ ಅನ್ನೋ ವಿಶ್ಲೇಷಣೆಗಳು ನಡೆದಿತ್ತು. ಫ್ರಾಂಚೈಸಿ ಈ ವಿಚಾರದಲ್ಲಿ ವಿಭಿನ್ನ ನಿಲುವು ತಳೆದಿದೆ.

Advertisment

ಅಕ್ಷರ್ ಪಟೇಲ್​ಗೆ ಡೆಲ್ಲಿ ನಾಯಕನ ಪಟ್ಟ ಫಿಕ್ಸ್​..?

ಡೆಲ್ಲಿ ಕ್ಯಾಪ್ಟನ್ ಯಾರ್ ಆಗ್ತಾರೆ ಎಂಬ ಪ್ರಶ್ನೆಗೆ ಸದ್ಯ ಎರಡು ಉತ್ತರ ಇದೆ. ಒಂದು ಕೆ.ಎಲ್.ರಾಹುಲ್​, ಮತ್ತೊಂದು ಅಕ್ಷರ್ ಪಟೇಲ್. ಇವರಿಬ್ಬರ ನಡುವೆ ಪಟ್ಟಕ್ಕಾಗಿ ಫೈಟ್​ ಏರ್ಪಟ್ಟಿದೆ. ಮೊನ್ನೆ ತನಕ ಕ್ಯಾಪ್ಟನ್ಸಿ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದ ಕೆ.ಎಲ್.ರಾಹುಲ್, ಈಗ ಹಿಂದೆ ಬಿಂದಿದ್ದಾರೆ. ರಾಹುಲ್​ ಬದಲಾಗಿ ಆಲ್ರೌಂಡರ್ ಅಕ್ಷರ್ ಪಟೇಲ್ ಹೆಸರು ಕೇಳಿ ಬರ್ತಿದೆ. 6 ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಕಟ್ಟಾಳು ಆಗಿರೋ ಅಕ್ಷರ್ ಪಟೇಲ್​, ತಂಡದ ಉಪ ನಾಯಕನಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಫ್ರಾಂಚೈಸಿಯ ಹಲವರಿಗೆ ಅಕ್ಷರ್​ಗೆ ನಾಯಕತ್ವ ನೀಡಲು ಒಲವಿದೆ.

ಟೀಮ್ ಇಂಡಿಯಾದ ಟಿ20 ತಂಡದ ಉಪ ನಾಯಕನಾಗಿಯೂ ಅಕ್ಷರ್​ ಆಯ್ಕೆಯಾಗಿದ್ದಾರೆ. ಇದಾದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ವಲಯದಲ್ಲಿ ರಾಹುಲ್​ ಗಿಂತ ಹೆಚ್ಚು ಅಕ್ಷರ್​ ಹೆಸರೇ ಓಡಾಡ್ತಿದೆ. ಈ ಬೆಳವಣಿಗೆ ನೋಡಿದ್ರೆ, ಅಕ್ಷರ್​ಗೆ ಪಟ್ಟ ಕಟ್ಟೋ ಸಾಧ್ಯತೆ ದಟ್ಟವಾಗಿದೆ. ಆರ್​ಸಿಬಿ ಮೆಂಟರ್ ಆ್ಯಂಡ್ ಬ್ಯಾಟಿಂಗ್ ಕೋಚ್ ದಿನೇಶ್​ ಕಾರ್ತಿಕ್ ಕೂಡ ಈ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಅಕ್ಷರ್ ಡೆಲ್ಲಿ ನಾಯಕರಾಗ್ತಾರೆ..!
ಟೀಮ್ ಇಂಡಿಯಾ ಉಪ ನಾಯಕನಾಗಿ ಆಯ್ಕೆಯಾಗಿರುವ ಅಕ್ಷರ್ ಪಟೇಲ್​ಗೆ ಅಭಿನಂದನೆಗಳು. ಅಕ್ಷರ್ ಪಟೇಲ್​​ ಮುಂದೆ ಡೆಲ್ಲಿ ಕ್ಯಾಪಿಟಲ್ಸ್​ನ ನಾಯಕರೂ ಆಗಲಿದ್ದಾರೆ. ಹೀಗಾಗಿ ಇದೊಂದು ಉತ್ತಮ ಅವಕಾಶವಾಗಿದೆ. ಗುಜರಾತ್‌ ತಂಡವನ್ನು ಹಿಂದೆ ಮುನ್ನಡೆಸಿದ ಅನುಭವವೂ ಅಕ್ಷರ್​ಗಿದೆ-ದಿನೇಶ್​ ಕಾರ್ತಿಕ್, ಆರ್​ಸಿಬಿ ಮೆಂಟರ್

Advertisment

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೆ ತಂಡ ಪ್ರಕಟ.. ಬಲಿಷ್ಠ ಟೀಂ ಇಂಡಿಯಾದಲ್ಲಿ 5 ದೊಡ್ಡ ಬದಲಾವಣೆಗಳು..!

ಇಂಗ್ಲೆಂಡ್ ಟಿ20 ಸಿರೀಸ್​ನಲ್ಲಿ ಟೀಮ್​ ಇಂಡಿಯಾದ ಉಪ ನಾಯಕನಾಗಿರೋ ಅಕ್ಷರ್ ಪಟೇಲ್, ಸಿಕ್ಕ ಅವಕಾಶ ಸರಿಯಾಗಿ ಬಳಸಿಕೊಂಡ್ರೆ ಡೆಲ್ಲಿ ನಾಯಕನ ಪಟ್ಟ ಸಿಗೋ ಸಾಧ್ಯತೆ ದಟ್ಟವಾಗಿದೆ. ಕೆ.ಎಲ್.ರಾಹುಲ್​ರಂಥ ಅನುಭವಿ ಆಟಗಾರನನ್ನ ಕಡೆಗಣಿಸುವಂತಿಲ್ಲ. ಹೀಗಾಗಿ ಫ್ರಾಂಚೈಸಿ ಅನುಭವಕ್ಕೆ ಮಣೆ ಹಾಕುತ್ತಾ? ಇಲ್ಲ ತಂಡದ ಕಟ್ಟಾಳು, ಟೀಮ್ ಇಂಡಿಯಾದ ವೈಸ್​ ಕ್ಯಾಪ್ಟನ್ ಎಂಬ ಕಾರಣಕ್ಕೆ ಅಕ್ಷರ್​​ಗೆ ಚುಕ್ಕಾಣಿ ನೀಡುತ್ತಾ ಅನ್ನೋದು ಕುತೂಹಲ ಮೂಡಿಸಿದೆ.

ಲಕ್ನೋ ಅನೌನ್ಸ್​

ಲಕ್ನೋ ಸೂಪರ್​ ಜೈಂಟ್ಸ್​ ಫ್ರಾಂಚೈಸಿ ಇಂದು ನಾಯಕನ್ಯಾರು ಅನ್ನೋ ಸಸ್ಪೆನ್ಸ್​ನ ರಿವೀಲ್​ ಮಾಡಲು ಸಜ್ಜಾಗಿದೆ. ಇದ್ರ ನಡುವೆ ಕ್ರಿಕೆಟ್​ ವಲಯದಲ್ಲಿ ಲಕ್ನೋ ಸಾರಥಿ ಯಾರಾಗ್ತಾರೆ ಅನ್ನೋ ಪ್ರಶ್ನೆ ಸೆನ್ಸೇಷನ್​ ಸೃಷ್ಟಿಸಿದೆ. ನಿಕೋಲಸ್ ಪೂರನ್, ರಿಷಭ್ ಪಂತ್.. ಇಬ್ಬರಲ್ಲಿ ಯಾರಿಗೆ ಪಟ್ಟ ಅನ್ನೋ ಡಿಬೆಟ್​ ನಡೀತಿವೆ. 27 ಕೋಟಿಗೆ ರಿಷಭ್ ಪಂತ್​ರನ್ನ ಖರೀದಿಸಿರೋ ಲಕ್ನೋ, ನಿಕೋಲಸ್ ಪೂರನ್​​ನ ರಿಟೈನ್ ಮಾಡಿಕೊಂಡಿದೆ. ಇಬ್ಬರೂ ನಾಯಕತ್ವಕ್ಕೆ ಸಮರ್ಥ ಆಯ್ಕೆಯಾಗಿದ್ದಾರೆ.

Advertisment

ಲಕ್ನೋ ಫ್ರಾಂಚೈಸಿಗೆ ವಿದೇಶಿಗನಿಂತ ಭಾರತೀಯನ ಮೇಲೆ ಒಲವಿದೆ ಎನ್ನಲಾಗಿದೆ. ಡೇರ್​ ಡೇವಿಲ್​ ರಿಷಭ್​ ಪಂತ್​ಗೆ ಪಟ್ಟಾಭಿಷೇಕ ಬಹುತೇಕ ಪಕ್ಕಾ ಎನ್ನಲಾಗ್ತಿದೆ. ಬಾಕಿ ಉಳಿದ 4 ತಂಡಗಳ ಪೈಕಿ 2 ತಂಡಗಳು ಶೀಘ್ರದಲ್ಲೇ ನಾಯಕನ ಅನೌನ್ಸ್​ಮೆಂಟ್​ಗೆ ಸಜ್ಜಾಗಿವೆ. ಲಕ್ನೋ ಸೂಪರ್​ ಜೈಂಟ್​ ಇಂದು ಪ್ರಕಟಿಸಲಿದ್ರೆ, ಡೆಲ್ಲಿ ಕ್ಯಾಪಿಟಲ್ಸ್​​ ಕೆಲವೇ ದಿನದಲ್ಲಿ ನಾಯಕನ ಹೆಸರು ರಿವೀಲ್​ ಮಾಡಲು ಸಜ್ಜಾಗಿದೆ. ಲಕ್ನೋಗೆ ಪಂತ್​ ಸಾರಥಿಯಾಗೋದು ಬಹುತೇಕ ಕನ್​ಫರ್ಮ್​ ಆಗಿದೆ.

ಇದನ್ನೂ ಓದಿ: IND vs AUS; ಕೆಎಲ್ ರಾಹುಲ್ ಔಟ್.. 3ನೇ ಅಂಪೈರ್​ ವಿರುದ್ಧ​ ರಾಬಿನ್ ಉತ್ತಪ್ಪ ಗರಂ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment