6,4,4,4,4,4,4,4,4,4; ಟೀಮ್​​ ಇಂಡಿಯಾ ಉಪನಾಯಕ ಶುಭ್ಮನ್​​ ಗಿಲ್​ ಸ್ಫೋಟಕ ಬ್ಯಾಟಿಂಗ್​​

author-image
Ganesh Nachikethu
Updated On
ಇಂದು ಭಾರತಕ್ಕೆ ದೊಡ್ಡ ಅಗ್ನಿ ಪರೀಕ್ಷೆ.. ಪ್ಲಸ್​, ಮೈನಸ್‌ಗಳು ಏನು? ರೋಹಿತ್ ಪಡೆಗೆ ವರದಾನವಾಗುತ್ತಾ ಪಾಕ್​ ಕಳಪೆ ಬೌಲಿಂಗ್​?
Advertisment
  • ಕಟಕ್‌ನಲ್ಲಿ ನಡೆಯುತ್ತಿರೋ 2ನೇ ಏಕದಿನ ಪಂದ್ಯ
  • ಇಂಗ್ಲೆಂಡ್​​ ತಂಡದ ವಿರುದ್ಧ ಶುಭ್ಮನ್​ ಗಿಲ್​ ಅಬ್ಬರ
  • ತಾಳ್ಮೆಯಿಂದ ಬ್ಯಾಟ್​ ಬೀಸಿ ಜವಾಬ್ದಾರಿಯುತ ಆಟ

ಇಂದು ಕಟಕ್‌ನಲ್ಲಿ ನಡೆಯುತ್ತಿರೋ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್​​ ತಂಡದ ವಿರುದ್ಧ ಟೀಮ್​ ಇಂಡಿಯಾ ಉಪನಾಯಕ ಶುಭ್ಮನ್​ ಗಿಲ್​ ಅಬ್ಬರಿಸಿದರು. ಗಿಲ್​ ತಾಳ್ಮೆಯಿಂದಲೇ ಬ್ಯಾಟ್​ ಬೀಸಿ ಜವಾಬ್ದಾರಿಯುತ ಆಟ ಆಡಿದ್ರು.

ಇಂಗ್ಲೆಂಡ್​ ನೀಡಿದ 305 ರನ್​ಗಳ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಟೀಮ್​ ಇಂಡಿಯಾ ಪರ ಓಪನಿಂಗ್​ ಮಾಡಿದ ಶುಭ್ಮನ್​​ ಗಿಲ್​​​ ಉತ್ತಮ ಇನ್ನಿಂಗ್ಸ್​ ಕಟ್ಟಿದರು. ಆಕ್ರಮಣಕಾರಿ ಆಟ ಆಡುತ್ತಿದ್ದ ಕ್ಯಾಪ್ಟನ್​ ರೋಹಿತ್​ ಶರ್ಮಾಗೆ ಸಾಥ್​ ನೀಡಿದರು.

ಅತ್ಯುತ್ತಮ ಅರ್ಧಶತಕ

ಇನ್ನು, ಕ್ರೀಸ್​ನಲ್ಲೇ ನೆಲಕಚ್ಚಿ ನಿಂತು ಆಡಿದ ಗಿಲ್​​ ಅವರು ಸ್ಫೋಟಕ ಅರ್ಧಶತಕ ಸಿಡಿಸಿದರು. ತಾನು ಆಡಿದ 52 ಬಾಲ್​ನಲ್ಲಿ 60 ರನ್​​ ಬಾರಿಸಿದ್ರು. 1 ಭರ್ಜರಿ ಸಿಕ್ಸರ್​​, ಬರೋಬ್ಬರಿ 9 ಫೋರ್​​ ಚಚ್ಚಿದ್ರು. ಈ ಮೂಲಕ ಉಪನಾಯಕನಾಗಿ ಅತ್ಯುತ್ತಮ ಬ್ಯಾಟಿಂಗ್​ ಮಾಡಿದರು.

ಟೀಮ್​ ಇಂಡಿಯಾ ಪ್ಲೇಯಿಂಗ್​​ ಎಲೆವೆನ್​ ಹೀಗಿದೆ!

ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಮೊಹಮ್ಮದ್ ಶಮಿ.

ಇದನ್ನೂ ಓದಿ:ಇಂಗ್ಲೆಂಡ್​ ತಂಡದಿಂದ ಭರ್ಜರಿ ಬ್ಯಾಟಿಂಗ್​​; ಟೀಮ್​ ಇಂಡಿಯಾಗೆ ಬಿಗ್​ ಟಾರ್ಗೆಟ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment