6,6,4,4,4,4,4,4,4,4,4; ಭರ್ಜರಿ ಶತಕ ಸಿಡಿಸಿ ಭಾರತವನ್ನು ಗೆಲ್ಲಿಸಿದ ಶುಭ್ಮನ್​ ಗಿಲ್​​

author-image
Ganesh Nachikethu
Updated On
3 ಭರ್ಜರಿ ಸಿಕ್ಸರ್​​; ಬರೋಬ್ಬರಿ 14 ಫೋರ್​​​; ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದ ಶುಭ್ಮನ್​​ ಗಿಲ್​​​
Advertisment
  • ಬಾಂಗ್ಲಾದೇಶ ತಂಡದ ವಿರುದ್ಧ ಗೆದ್ದು ಬೀಗಿದ ಟೀಮ್​ ಇಂಡಿಯಾ
  • ಟೀಮ್​ ಇಂಡಿಯಾ ಪರ ಶುಭ್ಮನ್​ ಗಿಲ್​ ಭರ್ಜರಿ ಶತಕ ಸಿಡಿಸಿದ್ರು
  • ಚಾಂಪಿಯನ್ಸ್​ ಟ್ರೋಫಿಯಲ್ಲಿ ಶತಕ ಸಿಡಿಸಿ ದಾಖಲೆ ಬರೆದ ಗಿಲ್​​

ಬಾಂಗ್ಲಾದೇಶದ ವಿರುದ್ಧ ನಡೆದ 2025ರ ಚಾಂಪಿಯನ್ಸ್ ಟ್ರೋಫಿಯ 2ನೇ ಪಂದ್ಯದಲ್ಲಿ ಟೀಮ್​ ಇಂಡಿಯಾ ಪರ ಉಪನಾಯಕ ಶುಭ್ಮನ್​ ಗಿಲ್​ ಅಬ್ಬರಿಸಿದರು.

ಟೀಮ್​ ಇಂಡಿಯಾ ಪರ ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ಶುಭ್ಮನ್​ ಗಿಲ್​ ಅಬ್ಬರಿಸಿದರು. ರೋಹಿತ್​ ಶರ್ಮಾ 3 ಬೌಂಡರಿ ಸಮೇತ 41 ರನ್​​ ಬಾರಿಸಿ ಉತ್ತಮ ಇನ್ನಿಂಗ್ಸ್​​ ಕಟ್ಟಿದ್ರು.

ಗಿಲ್​ ಭರ್ಜರಿ ಶತಕ

ಇನ್ನು, ರೋಹಿತ್​ ಶರ್ಮಾಗೆ ಸಾಥ್​ ನೀಡಿದ ಶುಭ್ಮನ್​ ಗಿಲ್​ ಅಮೋಘ ಶತಕ ಸಿಡಿಸಿದರು. ಕೊನೆಯವರೆಗೂ ಕ್ರೀಸ್​ನಲ್ಲೇ ನಿಂತು ಆಡಿದ ಗಿಲ್​​​ ಎದುರಾಳಿಗಳನ್ನು ಕಾಡಿದ್ರು. 129 ಬಾಲ್​ನಲ್ಲಿ 2 ಸಿಕ್ಸರ್​​, 9 ಫೋರ್​ ಸಮೇತ 101 ರನ್​​ ಚಚ್ಚಿದ್ರು. ಶತಕ ಸಿಡಿಸಿ ಅಜೇಯರಾಗಿ ಉಳಿದರು.

ಶುಭ್ಮನ್​ ಗಿಲ್​ ಅವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 78ಕ್ಕೂ ಹೆಚ್ಚಿತ್ತು. ಟೀಮ್​ ಇಂಡಿಯಾ ಬ್ಯಾಕ್​ ಟು ಬ್ಯಾಕ್​ 4 ವಿಕೆಟ್​ ಕಳೆದುಕೊಂಡ್ರೂ ತಾಳ್ಮೆಯಿಂದಲೇ ಬ್ಯಾಟ್​ ಬೀಸಿದ ಗಿಲ್​ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು.

ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಬಾಂಗ್ಲಾದೇಶ ಆರಂಭದಲ್ಲೇ ಬ್ಯಾಕ್​ ಟು ಬ್ಯಾಕ್​​ ವಿಕೆಟ್​ ಕಳೆದುಕೊಂಡಿತ್ತು. ಕೇವಲ 35 ರನ್​ಗೆ 5 ವಿಕೆಟ್​​ ಕಳೆದುಕೊಂಡು 100 ರನ್​​​ ತಲುಪುವುದು ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ತೌಹಿದ್ ಹೃದೋಯ್ ಹಾಗೂ ಜಾಕರ್ ಅಲಿ ಅಬ್ಬರದಿಂದ ಬಾಂಗ್ಲಾದೇಶ 228 ರನ್​ ಕಲೆ ಹಾಕಿತ್ತು.

ಇದನ್ನೂ ಓದಿ:ಶುಭ್ಮನ್​ ಗಿಲ್​​, ಕೆ.ಎಲ್​ ರಾಹುಲ್​ ಆರ್ಭಟ; ಬಾಂಗ್ಲಾ ವಿರುದ್ಧ ಗೆದ್ದು ಬೀಗಿದ ಟೀಮ್​ ಇಂಡಿಯಾ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment