KL ರಾಹುಲ್​​ಗೆ ಬಿಗ್​​ ಶಾಕ್​​; 2ನೇ ಟೆಸ್ಟ್​​ಗೆ ಟೀಮ್​​ ಇಂಡಿಯಾದಲ್ಲಿ ಕೊಹ್ಲಿ ಶಿಷ್ಯನಿಗೆ ಸ್ಥಾನ

author-image
Ganesh Nachikethu
Updated On
ನ್ಯೂಜಿಲೆಂಡ್​ ವಿರುದ್ಧ ಹೀನಾಯ ಸೋಲು; ಬಿಸಿಸಿಐನಿಂದ ಕೆ.ಎಲ್​ ರಾಹುಲ್​ಗೆ ಮಹತ್ವದ ಸೂಚನೆ
Advertisment
  • ಟೀಮ್​ ಇಂಡಿಯಾ, ನ್ಯೂಜಿಲೆಂಡ್​ ತಂಡದ ಮಧ್ಯೆ 2ನೇ ಟೆಸ್ಟ್​​
  • ಭಾರತ ತಂಡದಿಂದ ಹೊರಬಿದ್ದ ಕನ್ನಡಿಗ ಕೆ.ಎಲ್​ ರಾಹುಲ್​​..!
  • ಕನ್ನಡಿಗ ರಾಹುಲ್​​ ಬದಲಿಗೆ ಈ ಸ್ಟಾರ್​ ಆಟಗಾರನಿಗೆ ಅವಕಾಶ

ಕೆ.ಎಲ್​​ ರಾಹುಲ್​ ಟೀಮ್​​ ಇಂಡಿಯಾದ ಸ್ಟಾರ್​ ಪ್ಲೇಯರ್​​. ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧ ಟೆಸ್ಟ್​ ಸೀರೀಸ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಹಾಗಾಗಿ ಇವರನ್ನು ನ್ಯೂಜಿಲೆಂಡ್​ ತಂಡದ ವಿರುದ್ಧದ ಟೆಸ್ಟ್​ ಸರಣಿಗೆ ಆಯ್ಕೆ ಮಾಡಲಾಯ್ತು. ಆದರೀಗ, ಮೊದಲ ಟೆಸ್ಟ್​ನಲ್ಲೇ ಸಂಕಷ್ಟದಲ್ಲಿದ್ದ ಟೀಮ್​ ಇಂಡಿಯಾಗೆ ರಾಹುಲ್​ ಕೈ ಕೊಟ್ಟರು. ಈ ಮೂಲಕ ತನಗೆ ಸಿಕ್ಕ ಸುವರ್ಣಾವಕಾಶ ಕೈಚೆಲ್ಲಿದರು.

2ನೇ ಟೆಸ್ಟ್​​ನಿಂದ ಕೆ.ಎಲ್​ ರಾಹುಲ್​ಗೆ ಗೇಟ್​ ಪಾಸ್​

ಮೊದಲ ಟೆಸ್ಟ್​​ನಲ್ಲಿ ಹೀನಾಯ ಸೋಲಿನ ಬಳಿಕ ಟೀಮ್​ ಇಂಡಿಯಾ ಸ್ಟಾರ್​​ ಬ್ಯಾಟರ್​​​ ಕೆ.ಎಲ್​​ ರಾಹುಲ್​ ಹೆಚ್ಚು ಟೀಕೆಗೆ ಒಳಗಾಗಿದ್ದಾರೆ. ತವರಿನಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸೋ ಮೂಲಕ ರಾಹುಲ್​ ಹೆಚ್ಚು ನಿರಾಸೆ ಮೂಡಿಸಿದ್ರು. ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದ ಇವರು 2ನೇ ಇನ್ನಿಂಗ್ಸ್​ನಲ್ಲಿ ಕೇವಲ 12 ರನ್​ಗೆ ವಿಕೆಟ್​ ಒಪ್ಪಿಸಿದ್ರು. ಹೀಗಾಗಿ ಇವರು 2ನೇ ಟೆಸ್ಟ್​​ ಪಂದ್ಯದಿಂದ ಔಟ್​ ಆಗಬಹುದು.

ರಾಹುಲ್​​ ಬದಲಿಗೆ ಗಿಲ್​​ಗೆ ಅವಕಾಶ

ಇನ್ನು, 2ನೇ ಟೆಸ್ಟ್​​ ಪಂದ್ಯವೂ ಪುಣೆಯಲ್ಲಿರೋ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​​ ಸ್ಟೇಡಿಯಮ್​ನಲ್ಲಿ ನಡೆಯಲಿದೆ. ಇದಕ್ಕೆ ಟೀಮ್​ ಇಂಡಿಯಾ ಭರ್ಜರಿ ತಯಾರಿ ಮಾಡಿಕೊಂಡಿದೆ. ಅಕ್ಟೋಬರ್​​ 24ನೇ ತಾರೀಕಿನಿಂದ ಶುರುವಾಗೋ ಈ ಟೆಸ್ಟ್​ ಪಂದ್ಯ 28ರ ವರೆಗೆ ನಡೆಯಲಿದೆ. ಈ ಪಂದ್ಯಕ್ಕೆ ಟೀಮ್​ ಇಂಡಿಯಾದ ಪ್ಲೇಯಿಂಗ್​ ಎಲೆವೆನ್​​ನಲ್ಲಿ ಮೇಜರ್​ ಸರ್ಜರಿ ಆಗಲಿದೆ. ಕೆ.ಎಲ್​​ ರಾಹುಲ್​​​​​ ಬದಲಿಗೆ ಗಿಲ್​​ಗೆ ಅವಕಾಶ ನೀಡಲಾಗುತ್ತಿದೆ.

ಗಿಲ್​​ ಸಂಪೂರ್ಣ ಫಿಟ್​​

ಕಳಪೆ ಫಾರ್ಮ್‌ನಲ್ಲಿರುವ ಸ್ಟಾರ್ ಅನುಭವಿ ಬ್ಯಾಟರ್ ಕೆಎಲ್ ರಾಹುಲ್ ಅವರನ್ನು ತಂಡದಿಂದ ಕೈ ಬಿಡೋದು ಪಕ್ಕಾ ಆಗಿದೆ. ಭಾರತದ ಪರ ಕಳೆದ 5 ಇನ್ನಿಂಗ್ಸ್‌ಗಳಲ್ಲಿ ಕೇವಲ ಒಂದು ಅರ್ಧಶತಕ ಮಾತ್ರ ಗಳಿಸಲು ಶಕ್ತರಾಗಿದ್ದಾರೆ. ಇದೇ ವೇಳೆ ಶುಭಮನ್ ಗಿಲ್ ಅವರು ಫಿಟ್ ಆಗಿದ್ದು, ತಂಡಕ್ಕೆ ಕಮ್​ಬ್ಯಾಕ್​ ಮಾಡಲು ಸಜ್ಜಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಫರಾಜ್, ರಾಹುಲ್ ಮತ್ತು ಗಿಲ್‌ ಈ ಮೂವರ ಪೈಕಿ ಇಬ್ಬರು ಆಟಗಾರರಿಗೆ ಮಾತ್ರ ನ್ಯೂಜಿಲೆಂಡ್ ವಿರುದ್ಧ 2ನೇ ಟೆಸ್ಟ್‌ ಆಡಲು ಅವಕಾಶ ಸಿಗಲಿದೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment