/newsfirstlive-kannada/media/post_attachments/wp-content/uploads/2024/09/VIRAT_KOHLI_NEW.jpg)
ಟೀಮ್​ ಇಂಡಿಯಾದ ಸ್ಟಾರ್​​ ಬ್ಯಾಟರ್​​ ವಿರಾಟ್​ ಕೊಹ್ಲಿ. 2025ರ ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ಮುನ್ನ ಭರ್ಜರಿ ಕಮ್​ಬ್ಯಾಕ್​ ಮಾಡಿದ್ದಾರೆ. ಸಖತ್​ ಬ್ಯಾಟಿಂಗ್​​ ಮಾಡೋ ಮೂಲಕ ಟೀಕಾಕಾರರಿಗೆ ಖಡಕ್​ ಉತ್ತರ ಕೊಟ್ಟಿದ್ದಾರೆ.
ವಿರಾಟ್​ ಕೊಹ್ಲಿ ಅಬ್ಬರ
ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಅಬ್ಬರಿಸಿದ್ರು. ವಿರಾಟ್​​ ಕೊಹ್ಲಿ ಬ್ಯಾಟಿಂಗ್​ಗೆ ಇಡೀ ಆಗ್ಲರ ಪಡೆಯೇ ಬೆಚ್ಚಿಬಿದ್ದಿತ್ತು. ಟೀಮ್​ ಇಂಡಿಯಾ ಉಪನಾಯಕ ಶುಭ್ಮನ್​ ಗಿಲ್​ಗೆ ಸಾಥ್​ ನೀಡಿದ ವಿರಾಟ್​​ ಕೊಹ್ಲಿ ಹಲವು ದಿನಗಳ ಭರ್ಜರಿ ಅರ್ಧಶತಕ ಬಾರಿಸಿದ್ರು.
ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​​ ಮಾಡಿದ ಕ್ಯಾಪ್ಟನ್​ ರೋಹಿತ್​ ಶರ್ಮಾ ಕೇವಲ ಒಂದು ರನ್​ಗೆ ವಿಕೆಟ್​ ಒಪ್ಪಿಸಿದ್ರು. ರೋಹಿತ್​ ವಿಕೆಟ್​ ಬಿದ್ರೂ ಟೀಮ್​ ಇಂಡಿಯಾ ಪರ ಗಿಲ್​ ಅಬ್ಬರಿಸಿದರು. ಇವರು ಬರೋಬ್ಬರಿ 500 ದಿನಗಳ ನಂತರ ತಮ್ಮ ಏಕದಿನ ಶತಕ ಬಾರಿಸಿದ್ದಾರೆ. ಇಷ್ಟು ದಿನಗಳ ನಂತರ ಗಿಲ್​ ತಮ್ಮ 7ನೇ ಶತಕ ಪೂರೈಸಿದ್ರು.
ಕಳೆದ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ವಿರಾಟ್​ ಕೊಹ್ಲಿ ಇಂದಿನ ಪಂದ್ಯದಲ್ಲಿ ಮಿಂಚಿದರು. ತಾನು ಎದುರಿಸಿದ 55 ಬಾಲ್​ನಲ್ಲಿ 1 ಭರ್ಜರಿ ಸಿಕ್ಸರ್​​, 7 ಫೋರ್​ ಸಮೇತ 52 ರನ್​ ಸಿಡಿಸಿದರು. ಕೊಹ್ಲಿ ಇವತ್ತು ಸಿಡಿಸಿದ ಅರ್ಧಶತಕ ಇವರ ಕ್ರಿಕೆಟ್ ವೃತ್ತಿ ಜೀವನಕ್ಕೆ ಹೊಸ ಕಳೆಯನ್ನೇ ನೀಡಿದೆ.
ಭಾರತ ತಂಡಕ್ಕೆ ಗುಡ್​ನ್ಯೂಸ್​​
ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಅದಕ್ಕಾಗಿ ಟೀಮ್​ ಇಂಡಿಯಾ ಪೂರ್ವಸಿದ್ಧತೆ ಕೈಗೊಳ್ಳಲು ಇಂಗ್ಲೆಂಡ್ ವಿರುದ್ಧದ ಸರಣಿ ಸಿಕ್ಕಿತ್ತು. ತನಗೆ ಸಿಕ್ಕ ಅವಕಾಶ ಸರಿಯಾಗಿ ಬಳಸಿಕೊಂಡ ಭಾರತ ತಂಡ ಈಗಾಗಲೇ ಏಕದಿನ ಸರಣಿ ಗೆದ್ದಿದೆ. ಅದರಲ್ಲೂ ರೋಹಿತ್​​, ಕೊಹ್ಲಿ ಕಮ್​ಬ್ಯಾಕ್​ ಚಾಂಪಿಯನ್ಸ್​ ಟ್ರೋಫಿಗೆ ಮುನ್ನ ಟೀಮ್​ ಇಂಡಿಯಾಗೆ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us