/newsfirstlive-kannada/media/post_attachments/wp-content/uploads/2024/10/Virat-Kohli-1-1.jpg)
ಇತ್ತೀಚೆಗಷ್ಟೇ ಬಿಸಿಸಿಐ ಟೀಮ್ ಇಂಡಿಯಾ ಆಟಗಾರರಿಗೆ ಬಿಗ್ ಶಾಕ್ ನೀಡಿತ್ತು. ಬಿಸಿಸಿಐನ ಹೊಸ ನಿಯಮದ ಪ್ರಕಾರ ಎಲ್ಲಾ ಆಟಗಾರರು ದೇಶೀಯ ಪಂದ್ಯಗಳಲ್ಲಿ ಆಡಲೇಬೇಕು. ಒಂದು ವೇಳೆ ದೇಶೀಯ ಕ್ರಿಕೆಟ್ ಆಡದಿದ್ರೆ ಬಿಸಿಸಿಐ ಶಿಸ್ತು ಕ್ರಮ ಕೈಗೊಳ್ಳಲಿದೆ. ಆಗ ಐಪಿಎಲ್ ಸೇರಿ ಬಿಸಿಸಿಐ ನಡೆಸುವ ಯಾವ ಟೂರ್ನಿಯಲ್ಲೂ ಭಾಗವಹಿಸೋ ಅವಕಾಶ ಸಿಗಲ್ಲ. ಹೀಗಾಗಿ ಕೊಹ್ಲಿ ರಣಜಿ ಕ್ರಿಕೆಟ್ ಆಡಲಿದ್ದಾರೆ ಎನ್ನುವ ಸುದ್ದಿ ಇತ್ತು.
ಕೊಹ್ಲಿ ರಣಜಿ ಆಡೋದು ಡೌಟ್
ಜನವರಿ 23ನೇ ತಾರೀಕು ನಡೆಯಲಿರೋ ಸೌರಾಷ್ಟ್ರ ವಿರುದ್ಧದ ರಣಜಿ ಪಂದ್ಯದಲ್ಲಿ ದೆಹಲಿ ಪರ ವಿರಾಟ್ ಕೊಹ್ಲಿ ಆಡೋದು ಡೌಟ್ ಆಗಿದೆ. ಕೊಹ್ಲಿ ಕುತ್ತಿಗೆಯಲ್ಲಿ ಉಳುಕು ಉಂಟಾಗಿದ್ದು, ನೋವು ಕಡಿಮೆ ಮಾಡಲು ಟ್ರೀಟ್ಮೆಂಟ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಸ್ಥಾನ ಉಳಿಸಿಕೊಳ್ಳಲು ರಣಜಿ ಆಡಲೇಬೇಕು
ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ ಕೊಹ್ಲಿ ಆಡುವ ಬಗ್ಗೆ ಯಾವುದೇ ಅಪ್ಡೇಟ್ ಕೊಟ್ಟಿಲ್ಲ. ಸದ್ಯ ಕೊಹ್ಲಿ ಕಳಪೆ ಫಾರ್ಮ್ನಲ್ಲಿದ್ದು, ಟೀಮ್ ಇಂಡಿಯಾದಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳಲು ರಣಜಿ ಆಡಲೇಬೇಕಿದೆ. ಆದರೀಗ, ಇವರು ರಣಜಿ ಆಡೋದು ಕಷ್ಟ ಎಂದು ತಿಳಿದು ಬಂದಿದೆ.
ಕೊಹ್ಲಿ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂನಿಯಲ್ಲಿ ಭಾರತ ವಿಶೇಷ ಸಾಧನೆ ಮಾಡಲು ಕೊಹ್ಲಿ ಪ್ರದರ್ಶನ ಮುಖ್ಯ. ಇದಕ್ಕೆ ಇವರು ಫಾರ್ಮ್‌ಗೆ ಮರಳಲು ರಣಜಿ ಆಡಬೇಕಿತ್ತು. ಇವರು ರಣಜಿ ಆಡೋದು ಡೌಟ್ ಆಗಿದ್ದು, ಇದು ಕೊಹ್ಲಿ ಬ್ಯಾಡ್ನ್ಯೂಸ್ ಆಗಿದೆ.
ಇದನ್ನೂ ಓದಿ:ಸಂಜು ಸ್ಯಾಮ್ಸನ್, ಮಯಾಂಕ್ಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ; ಟೀಮ್ ಇಂಡಿಯಾದಿಂದಲೇ ಔಟ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ