/newsfirstlive-kannada/media/post_attachments/wp-content/uploads/2023/10/Kohli_Out.jpg)
ಬಹುನಿರೀಕ್ಷಿತ ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ನ್ಯೂಜಿಲೆಂಡ್ 252 ರನ್ಗಳ ಗುರಿ ನೀಡಿದೆ. ಭಾರತ ತಂಡವೂ ಈ ಬೃಹತ್ ಗುರಿಯನ್ನು ಬೆನ್ನತ್ತಿದೆ.
ಟೀಮ್ ಇಂಡಿಯಾ ಪರ ಕ್ಯಾಪ್ಟನ್ ರೋಹಿತ್ ಶರ್ಮಾ, ಉಪನಾಯಕ ಶುಭ್ಮನ್ ಗಿಲ್ ಓಪನಿಂಗ್ ಮಾಡಿದರು. ಶುಭ್ಮನ್ ಗಿಲ್ ಕೇವಲ 31 ರನ್ಗೆ ವಿಕೆಟ್ ಒಪ್ಪಿಸಿದರು. ರೋಹಿತ್ ಶರ್ಮಾ 70ಕ್ಕೂ ಹೆಚ್ಚು ರನ್ ಗಳಿಸಿದ್ದು, ಕ್ಯಾಪ್ಟನ್ ಅಬ್ಬರ ಮುಂದುವರಿದಿದೆ.
ಕೈ ಕೊಟ್ಟ ವಿರಾಟ್ ಕೊಹ್ಲಿ
ಇಂದು ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿಗೆ ಕೊನೆಯ ಏಕದಿನ ಪಂದ್ಯ ಎಂದು ಹೇಳಲಾಗುತ್ತಿದೆ. ಭಾರತ ತಂಡದ ಪರ ಶುಭ್ಮನ್ ಗಿಲ್ ಔಟ್ ಆಗುತ್ತಿದ್ದಂತೆ ಕ್ರೀಸ್ಗೆ ಬಂದ ವಿರಾಟ್ ಕೊಹ್ಲಿ ಕೇವಲ 1 ರನ್ಗೆ ಔಟಾಗಿದ್ದಾರೆ. ಮೊದಲ ಎಸೆತದಲ್ಲಿ 1 ರನ್ ಗಳಿಸಿದ ಇವರು 2ನೇ ಎಸೆತಕ್ಕೆ ಎಲ್ಬಿಡಬ್ಲ್ಯೂ ಆದರು.
ಈ ವರ್ಷ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಇಂಗ್ಲೆಂಡ್ ಪ್ರವಾಸದಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಈ ಮಹತ್ವದ ಪ್ರವಾಸಕ್ಕೆ ಟೀಮ್ ಇಂಡಿಯಾದಲ್ಲಿ ಮೇಜರ್ ಸರ್ಜರಿ ಆಗಲಿದೆ. ಇಂದು ಟೀಮ್ ಇಂಡಿಯಾ ಗೆದ್ರೂ ಸೋತ್ರೂ ಹಿರಿಯ ಆಟಗಾರರು ನಿವೃತ್ತಿ ಆಗಬಹುದು ಎಂದು ತಿಳಿದು ಬಂದಿದೆ. ಈ ಪೈಕಿ ಮೊದಲ ಹೆಸರು ಕೇಳಿ ಬಂದಿರುವುದು ವಿರಾಟ್ ಕೊಹ್ಲಿ. ಇವರು ಇಂದು ನಿವೃತ್ತಿ ಆಗೋ ಸಾಧ್ಯತೆ ಇದೆ.
ಇದನ್ನೂ ಓದಿ:ಟೀಮ್ ಇಂಡಿಯಾಗೆ ಬಿಗ್ ಶಾಕ್; ಇಂದು ನಿವೃತ್ತಿ ಘೋಷಿಸಲಿರೋ ಮೂವರು ಸ್ಟಾರ್ ಕ್ರಿಕೆಟರ್ಸ್ ಇವ್ರು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ