newsfirstkannada.com

ಅಮ್ಮನ ಮಾತು ಕೇಳಿದ್ರೆ ಸೆಂಚುರಿ ಸ್ಟಾರ್​ ಭಾವುಕ.. ಮದರ್​ ಮಮತೆ ಬಗ್ಗೆ ಕಿಂಗ್ ಕೊಹ್ಲಿ ಹೇಳೋದೇನು?

Share :

Published June 22, 2023 at 12:19pm

Update June 22, 2023 at 12:32pm

  ವಿರಾಟ್​ ಕೊಹ್ಲಿಯ ಅಗ್ರೆಸ್ಸಿವ್​ ಅವತಾರದ ಹಿಂದೆ ಮಗುವಿನ ಮನಸು

  ತಾಯಿಯ ಪ್ರೀತಿಯ ಮುಂದೆ ಕರಗಿ ಹೋಗ್ತಾರೆ ಮಾಜಿ ಕ್ಯಾಪ್ಟನ್​​ ಕೊಹ್ಲಿ

  ‘ಸಂಜೆ ಟೈಮ್ ಫೋನ್​ ಮಾಡಿದಾಗ ಯಾಕೆ ಸಣ್ಣ ಆಗಿದ್ದೀಯಾ ಅಂತಾರೆ’

ವಿರಾಟ್​ ಕೊಹ್ಲಿ ಅಂದಾಕ್ಷಣ ಅಗ್ರೆಸ್ಸೀವ್​ ಆ್ಯಟಿಟ್ಯೂಡ್​ ಕಣ್ಮುಂದೆ ಬರುತ್ತೆ. ಆದ್ರೆ, ಕೊಹ್ಲಿ ಅಗ್ರೆಸ್ಸಿವ್​ ಅವತಾರದ ಹಿಂದೆ ಒಂದು ಕೂಲ್​ & ಕಾಮ್​ ವ್ಯಕ್ತಿತ್ವವೂ ಇದೆ. ಅದ್ರಲ್ಲೂ, ತಾಯಿಯ ಪ್ರೀತಿಯ ಮುಂದೆ ಕಿಂಗ್​ ಕೊಹ್ಲಿ ಕರಗಿ ಹೋಗುತ್ತಾರೆ. ವಿಶ್ವ ಗೆದ್ದ ವಿರಾಟನ ಒಂದು ಸ್ಪೆಷಲ್​ ಕಥೆ ಇದೆ.

ಇದು ಅಗ್ರೆಸ್ಸಿವ್​ ವಿರಾಟನ ಇನ್ನೊಂದು ಮುಖ.!

ಯಾರಾದ್ರೂ ಕೆಣಕಿದ್ರೆ ಸ್ಪಾಟ್​ ಅಲ್ಲೇ ತಿರುಗೇಟು ಕೊಡೋದೆ ಕೊಹ್ಲಿಯ ಖಯಾಲಿ. ಎದುರಾಳಿಗಳು ಸುಮ್ಮನಿರಲಾರದೇ ಕೆಣಕಿ ವಿರಾಟ ರೂಪದ ಮುಂದೆ ನಲುಗಿ ಹೋದ ಉದಾಹರಣೆ ಅದೆಷ್ಟೋ ಇವೆ. ಹೀಗಾಗಿಯೇ ಹಲ ಅಭಿಮಾನಿಗಳಿಗೆ ವಿರಾಟ್​​ ಕೊಹ್ಲಿಯ ಆಟ ಇಷ್ಟ ಆದ್ರೆ, ಇನ್ನು ಕೆಲವರಿಗೆ ಕೊಹ್ಲಿಯ ಆ್ಯಟಿಟ್ಯೂಡ್​​ ಇಷ್ಟ ಆಗುತ್ತೆ. ಆದ್ರೆ, ಕೊಹ್ಲಿ ಅಗ್ಸೆಸ್ಸಿವ್​ ಅವತಾರದ ಹಿಂದೆ ಮಗುವಿನ ಮನಸು ಇದೆ.

ತಾಯಿಯ ಪ್ರೀತಿಗೆ ಕರಗಿ ಹೋಗ್ತಾರೆ ಕೊಹ್ಲಿ.!

ಆನ್​​ ಫೀಲ್ಡ್​ನಲ್ಲಿ ಅಗ್ರೆಸ್ಸಿವ್​ ಆ್ಯಟಿಟ್ಯೂಡ್​​ನಿಂದ ಗಮನ ಸೆಳೆಯುವ ಕೊಹ್ಲಿ ಆಫ್​ ದ ಫೀಲ್ಡ್​ನಲ್ಲಿ ಕೂಲ್​ & ಕಾಮ್​ ಅನ್ನೋದು ನಿಮಗೂ ಗೊತ್ತು. ಪಂದ್ಯದ ಬಳಿಕ ಎದುರಾಳಿ ತಂಡದ ಆಟಗಾರರನ್ನೂ ಅಷ್ಟೇ ರೆಸ್ಪೆಕ್ಟ್​ ಮಾಡ್ತಾರೆ. ತನ್ನ ತಂಡದ ಯುವ ಆಟಗಾರರಿಗೆ ಮಾರ್ಗದರ್ಶನ ನೀಡ್ತಾರೆ. ಪತ್ನಿ- ಮಗಳಂತು ಕೊಹ್ಲಿಯ ಇನ್ನೊಂದು ಪ್ರಪಂಚ. ಇವರೊಂದಿಗೆ ಕೊಹ್ಲಿ ಹೆಚ್ಚು ಕಾಲ ಕಳೆಯೋದು. ಟೀಮ್​ಮೇಟ್ಸ್​,​ ಫ್ರೆಂಡ್ಸ್​, ಹೆಂಡತಿ, ಮಗಳ ಹೊರತಾಗಿ ಕೊಹ್ಲಿ ಕೂಲ್​ & ಕಾಮ್​ ಆಗಿ ಕಾಣೋದು ತಾಯಿಯ ಎದುರು ಮಾತ್ರ. ತಾಯಿಯ ಮಮತೆಯ ಮುಂದೆ ಕೊಹ್ಲಿ ಕರಗಿಹೋಗ್ತಾರೆ.

ತಾಯಿಯ ಮಾತು ಕೇಳಿ ವಿರಾಟ್ ಮಂತ್ರಮುಗ್ಧ.!

ವಿರಾಟ್​ ಕೊಹ್ಲಿ ತಂದೆಯ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತು. ದೆಹಲಿ ತಂಡದಲ್ಲಿ ಅವಕಾಶ ಸಿಕ್ಕ ಬೆನ್ನಲ್ಲೇ ತಂದೆಯ ಸಾವು ಬರಸಿಡಿಲಿನಂತೆ ಅಪ್ಪಳಿಸಿತ್ತು. ಆ ಸಾವಿನ ದುಖಃದ ನಡುವೆ ಆಡಿದ್ದ ಕೊಹ್ಲಿ ಕೆಚ್ಚೆದೆಯ ಹೋರಾಟ ನಡೆಸಿದ್ರು. ಅಂದಿನಿಂದ ಕೊಹ್ಲಿಯಲ್ಲಿರೋ ಸಾಧಿಸುವ ಆ ಅಪ್ರತಿಮ ಛಲ, ಸ್ಪಷ್ಟವಾದ ಗುರಿಯೇ ಇಂದು ವಿಶ್ವ ಕ್ರಿಕೆಟ್​ ಲೋಕದ ಸಾಮ್ರಾಟನನ್ನಾಗಿ ಮಾಡಿದೆ. ಇದು ಎಲ್ಲರಿಗೂ ಗೊತ್ತು. ಕೊಹ್ಲಿ ಒಬ್ಬ ಸೂಪರ್ ಸ್ಟಾರ್​ ಆಗಿ ರೂಪುಗೊಂಡಿದ್ರ ಹಿಂದೆ ತಾಯಿಯ ಪ್ರೀತಿಯ ಬೆಂಬಲ ಕೂಡ ಇತ್ತು ಅನ್ನೋದನ್ನ ಬಹುತೇಕರು ನೆನೆಸಿಕೊಳ್ಳೋದೆ ಇಲ್ಲ.

ತಂದೆಯನ್ನ ಕಳೆದುಕೊಂಡ ದುಖಃ ಕೊಹ್ಲಿಗೆಷ್ಟಿತ್ತೋ ಅಷ್ಟೇ ಪತಿಯನ್ನ ಕಳೆದುಕೊಂಡ ವಿರಾಟ್​ ತಾಯಿ ಸರೋಜ್​ಗೂ ಇತ್ತು. ಮನೆ ಯಜಮಾನನಿಲ್ಲದೆ ಕುಟುಂಬ ಗೊಂದಲಕ್ಕೊಳಗಾಗಿತ್ತು. ಹಾಗಿದ್ರೂ, ಆ ದುಖಃದಲ್ಲಿ ತಾಯಿ ಮಗನನ್ನ ತಡೆಯಲಿಲ್ಲ. ಸಾಧಿಸಬೇಕು ಎಂದು ಹೊರಟ ವಿರಾಟನ ಬೆನ್ನಿಗೆ ನಿಂತರು. ತಾಯಿಯ ಬೆಂಬಲ, ಆಶೀರ್ವಾದದ ಫಲವೇ ಕೊಹ್ಲಿ ಇಂದು ಕ್ರಿಕೆಟ್​ ಲೋಕದ ಲೆಜೆಂಡ್​ ಆಗಿ ನಿಂತಿದ್ದಾರೆ. ಆದ್ರೆ, ತಾಯಿಗೆ ಮಾತ್ರ ಕೊಹ್ಲಿ ಇಂದಿಗೂ ಪುಟ್ಟ ಕಂದ.

‘ಯಾಕೆ ಅಷ್ಟು ಸಣ್ಣ ಆಗಿದ್ದೀಯಾ ಅಂತಾರೆ’

‘ಜನ ನನ್ನ ಫಿಟ್​ನೆಸ್​​ ಬಗ್ಗೆ ಯಾವಾಗಲೂ ಮಾತನಾಡುತ್ತಾರೆ. ಆದ್ರೆ, ನಮ್ಮ ಅಮ್ಮ ಪಂದ್ಯ ಮುಗಿದ ಬಳಿಕ ಸಂಜೆ ಫೋನ್​ ಮಾಡಿ ನೀನು ಯಾಕೆ ಅಷ್ಟು ಸಣ್ಣ ಆಗಿದ್ದೀಯಾ ಎಂದು ಕೇಳ್ತಾರೆ. ಒಂದು ಕಡೆ ಜನ ನನ್ನ ಫಿಟ್​ನೆಸ್​ ರೂಟಿನ್​ ಬಗ್ಗೆ ಕೇಳ್ತಾ ಇದ್ರೆ, ಇನ್ನೊಂದು ಕಡೆ ನನ್ನ ಅಮ್ಮ ನನಗೆ ಹುಷಾರಿಲ್ಲ ಎಂದು ಯೋಚಿಸ್ತಾರೆ’

ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ಆಟಗಾರ​

ಕೆಲ ದಿನಗಳ ಹಿಂದಷ್ಟೇ ಕೊಹ್ಲಿ ಸಂದರ್ಶನವೊಂದರಲ್ಲಿ ಹೇಳಿದ ಮಾತಿವು. ವಿರಾಟ್​​ ಹೇಳಿದ ಈ ಫೋನ್​​ ಸಂಭಾಷಣೆಯೇ ತಾಯಿ-ಮಗನ ನಡುವಿನ ಭಾಂದವ್ಯಕ್ಕೆ ಒಂದೊಳ್ಳೆ ಉದಾಹರಣೆಯಾಗಿದೆ. ಕೇವಲ ತಾಯಿ ಮಾತ್ರ ಮಗನ ಕಾಳಜಿ ಮಾಡ್ತಿದ್ದಾರೆ ಅನ್ಕೋಬೇಡಿ. ವಿಶ್ವವನ್ನೇ ಗೆದ್ದ ವಿರಾಟನ ಗುರಿ ತಾಯಿಯನ್ನ ಚನ್ನಾಗಿ ನೋಡಿಕೊಳ್ಳಬೇಕು ಅನ್ನೋದಷ್ಟೇ.

ನಾನು ಮನೆಗೆ ವಾಪಸ್​ ಹೋದಾಗ ಖುಷಿಯಾಗಿರುತ್ತೇನೆ. ಆ ಖುಷಿ ಸತತವಾಗಿ ಇರುತ್ತೆ. ಇದು ಯಾವುದೇ ಫಲಿತಾಂಶ, ದಿನ ಹೇಗಿದೆ ಅನ್ನೋದರ ಮೇಲೆ ನಿರ್ಧಾರವಾಗಲ್ಲ. ಇದು ಎಲ್ಲವನ್ನೂ ಮೀರಿದ್ದು. ನಾನು ಯಾವಾಗಲೂ ಅಂದು ಕೊಳ್ಳೋದು ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳೋದು ತುಂಬಾ ಮುಖ್ಯ. ನನಗೆ ಈಗಲೂ ಸಣ್ಣ ಕೆಲಸ ಅವರನ್ನ ಖುಷಿ ಮಾಡುವಂತಿದ್ದರೆ, ಅದು ನನ್ನನ್ನು ಖುಷಿ ಪಡಿಸುತ್ತದೆ.

ಕ್ರಿಕೆಟ್​ ಅನ್ನೋ ಕನಸನ್ನ ಬೆನ್ನತ್ತಿ ಹೊರಟ ಕೊಹ್ಲಿಗೆ ಆರಂಭದಲ್ಲಿ ತಂದೆಯ ಕೃಪಾಕಟಾಕ್ಷ ಇತ್ತು. ತಂದೆಯ ಸಾವಿನ ಬಳಿಕ ಕೊಹ್ಲಿ ಏಕಾಂಗಿಯಾಗಿ ಹೋರಾಡಿದ್ರೂ, ಜೊತೆಗೊಂದು ಅದಮ್ಯ ಶಕ್ತಿ ಇತ್ತು. ಅದೇ ತಾಯಿಯ ಆಶೀರ್ವಾದ. ಆ ಆಶೀರ್ವಾದದಿಂದಲೇ ಇಂದು ವಿಶ್ವ ಗೆದ್ದಿರೋ ವಿರಾಟ, ಸಾಧನೆಯ ಹಾದಿಯಲ್ಲಿ ಇನ್ನಷ್ಟು ಯಶಸ್ಸನ್ನ ಕಾಣಲಿ ಅನ್ನೋದೆ ಎಲ್ಲರ ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅಮ್ಮನ ಮಾತು ಕೇಳಿದ್ರೆ ಸೆಂಚುರಿ ಸ್ಟಾರ್​ ಭಾವುಕ.. ಮದರ್​ ಮಮತೆ ಬಗ್ಗೆ ಕಿಂಗ್ ಕೊಹ್ಲಿ ಹೇಳೋದೇನು?

https://newsfirstlive.com/wp-content/uploads/2023/06/VIRAT_KOHLI_MOTHER.jpg

Load More