ಮಹತ್ವದ ಟೆಸ್ಟ್​; ಮತ್ತದೇ ಎಡವಟ್ಟು; ಟೀಮ್​ ಇಂಡಿಯಾಗೆ ಬಿಗ್​ ಶಾಕ್​​; ವಿರಾಟ್​ ಕೊಹ್ಲಿ ಔಟ್​​

author-image
Ganesh Nachikethu
Updated On
17 ವರ್ಷದಲ್ಲಿ ಲೆಕ್ಕ ಇಲ್ಲದಷ್ಟು ಕೊಹ್ಲಿ ದಾಖಲೆ.. ಕಳಚುತ್ತಿದೆಯಾ ವಿರಾಟ್ ಪಟ್ಟ?
Advertisment
  • ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ಮಧ್ಯೆ 3ನೇ ಟೆಸ್ಟ್​
  • ಭಾರತ ತಂಡಕ್ಕೆ ಸರಿಯಾಗಿ ಕೈ ಕೊಟ್ಟ ವಿರಾಟ್ ಕೊಹ್ಲಿ
  • ಸ್ಟಾರ್​ ಬ್ಯಾಟರ್​​ ಕೊಹ್ಲಿಯಿಂದ ಮತ್ತೆ ಅದೇ ಎಡವಟ್ಟು

ಟೀಮ್​ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ 3ನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಬ್ರಿಸ್ಬೇನ್‌ನ ಗಬ್ಬಾ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರೋ ಮಹತ್ವದ ಪಂದ್ಯದಲ್ಲಿ ಟೀಮ್​ ಇಂಡಿಯಾದ ಸ್ಟಾರ್​​ ಬ್ಯಾಟರ್​​​ ವಿರಾಟ್​​ ಕೊಹ್ಲಿ ಮಂಕಾದರು.

ಕೈ ಕೊಟ್ಟ ಕೊಹ್ಲಿ

ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ 100 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದ ಇವರು ಈಗ ಮಂಕಾಗಿದ್ದಾರೆ. ಕಳೆದ ಎರಡು ಟೆಸ್ಟ್ ಪಂದ್ಯಗಳ ಮೂರು ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಟೀಮ್​ ಇಂಡಿಯಾಗೆ ಕೈ ಕೊಟ್ಟರು.

ಕೊಹ್ಲಿ ಔಟ್​ ಆಗಿದ್ದು ಹೇಗೆ?

ಗಬ್ಬಾದಲ್ಲಿ ನಡೆಯುತ್ತಿರೋ 3ನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಆಫ್ ಸ್ಟಂಪ್‌ ಹೊರಗಿನ ಚೆಂಡನ್ನು ಎದುರಿಸಲು ಹೋಗಿ ಔಟಾದ್ರು. ಆಸ್ಟ್ರೇಲಿಯಾದ ವೇಗಿ ಜೋಶ್​​ ಹೇಜಲ್​​ವುಡ್​​ ಬೌಲಿಂಗ್​​ನಲ್ಲಿ ಕವರ್ ಡ್ರೈವ್ ಹೊಡೆಯಲು ಹೋಗಿ ಕೊಹ್ಲಿ 3 ರನ್‌ಗಳಿಗೆ ವಿಕೆಟ್‌ ಕಳೆದುಕೊಂಡಿದ್ದಾರೆ.

ಭಾರತದ ಟಾಪ್ ಆರ್ಡರ್ ಕುಸಿತ

ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 445 ರನ್ ಕಲೆ ಹಾಕಿದೆ. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿರೋ ಟೀಮ್​ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 17 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿದೆ. ಕೆಎಲ್ ರಾಹುಲ್ (33) ಮತ್ತು ರೋಹಿತ್ ಶರ್ಮಾ (0) ಅಜೇಯರಾಗುಳಿದಿದ್ದಾರೆ. ಯಶಸ್ವಿ ಜೈಸ್ವಾಲ್ (4), ಶುಭಮನ್ ಗಿಲ್ (1) ಮತ್ತು ರಿಷಬ್ ಪಂತ್ (9) ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.

ಇದನ್ನೂ ಓದಿ:RCB ಟಾರ್ಗೆಟ್​ ಲಿಸ್ಟಲ್ಲಿತ್ತು ಚಹಾಲ್​ ಹೆಸ್ರು; ಕೊಹ್ಲಿ ಆಪ್ತನ ಖರೀದಿಗೆ ದಿಢೀರ್​ ಹಿಂದೇಟು ಏಕೆ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment