ಇಂಗ್ಲೆಂಡ್​ ವಿರುದ್ಧ ಏಕದಿನ ಸರಣಿ; ಟೀಮ್​ ಇಂಡಿಯಾ ಆತಂಕ ಹೆಚ್ಚಿಸಿದ ಕೊಹ್ಲಿ; ಏನಾಯ್ತು?

author-image
Ganesh Nachikethu
Updated On
ಟೆಸ್ಟ್​ ಕ್ರಿಕೆಟ್​​ಗೆ ಮತ್ತೆ ಕಿಂಗ್ ಕೊಹ್ಲಿ ಕ್ಯಾಪ್ಟನ್..? ಟೀಂ ಇಂಡಿಯಾದಲ್ಲಿ ಹೊಸ ಸಂಚಲನ..!
Advertisment
  • ಟೀಮ್​ ಇಂಡಿಯಾ, ಇಂಗ್ಲೆಂಡ್​ ಮಧ್ಯೆ ಏಕದಿನ ಸರಣಿ
  • ಫೆಬ್ರವರಿ 6ನೇ ತಾರೀಕಿನಿಂದ ಏಕದಿನ ಸರಣಿ ಆರಂಭ!
  • ಟೀಮ್​ ಇಂಡಿಯಾಗೆ ಸರಿಯಾಗಿ ಕೈ ಕೊಟ್ಟ ವಿರಾಟ್​ ಕೊಹ್ಲಿ

ಇತ್ತೀಚೆಗೆ ನಡೆದ 5 ಪಂದ್ಯಗಳ ಟಿ20 ಸರಣಿಯಲ್ಲಿ 4-1 ಅಂತರದಲ್ಲಿ ಗೆಲುವು ಸಾಧಿಸಿರೋ ಟೀಮ್​ ಇಂಡಿಯಾ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಫೆಬ್ರವರಿ 6 ರಿಂದ ಏಕದಿನ ಸರಣಿ ಆರಂಭವಾಗಲಿದ್ದು, ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ಇದು ಭಾರೀ ಮಹತ್ವ ಪಡೆದುಕೊಂಡಿದೆ. ಭಾರತ ಹಿರಿಯ ಆಟಗಾರರು ಫಾರ್ಮ್‌ಗೆ ಮರಳುವ ಉತ್ಸಾಹದಲ್ಲಿದ್ದಾರೆ.

ಇನ್ನು, ಕ್ಯಾಪ್ಟನ್​ ರೋಹಿತ್​​ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಈ ಸರಣಿ ಬಹಳ ಮುಖ್ಯವಾಗಿದೆ. ಕಳೆದ ಕೆಲವು ತಿಂಗಳಿನಿಂದ ಫಾರ್ಮ್‌ಗೆ ಮರಳಲು ಹೆಣಗಾಡುತ್ತಿರೋ ಇವರು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ರನ್ ಕಲೆ ಹಾಕಲೇಬೇಕಿದೆ. ಇಬ್ಬರೂ ಇತ್ತೀಚೆಗೆ ರಣಜಿ ಪಂದ್ಯವನ್ನು ಆಡಿದರೂ ರನ್ ಗಳಿಸಲು ವಿಫಲವಾಗಿದ್ದು, ಅದರಲ್ಲೂ ಕೊಹ್ಲಿ ಫಾರ್ಮ್​ ಟೀಮ್​ ಇಂಡಿಯಾಗೆ ಸಮಸ್ಯೆ ಆಗಿದೆ.

ರಣಜಿಯಲ್ಲಿ ಕೊಹ್ಲಿ ಕಳಪೆ ಆಟ

ರಣಜಿ ಟೂರ್ನಿಯಲ್ಲಿ ದೆಹಲಿ ಪರ ಆಡಿದ್ದ ವಿರಾಟ್​​​ ಕೊಹ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಿದ್ರು. ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ಕೊಹ್ಲಿ, 14 ಎಸೆತದಲ್ಲಿ ಬೌಂಡರಿ ಬಾರಿಸಿದ್ರು. ಆಗ ಅಭಿಮಾನಿಗಳ ಕ್ರೇಜ್​ ನೆಕ್ಸ್ಟ್​ ಲೆವೆಲ್​ಗೆ ಹೋಯ್ತು. ಆದ್ರೆ, ಮರು ಎಸೆತದಲ್ಲೇ ಶಾಕ್​ ಕಾದಿತ್ತು. ರೈಲ್ವೇಸ್​ ವೇಗಿ ಹಿಮಾಂಶು ಸಂಗ್ವಾನ್​ ಹಾಕಿದ ಎಸೆತದಲ್ಲಿ ವಿರಾಟ್​ ಕೊಹ್ಲಿ ಬೋಲ್ಡ್​ ಆದ್ರು. ಬಾಲ್​​ ಬಡಿದ ರಭಸಕ್ಕೆ ಆಫ್​ ಸ್ಟಂಫ್​​​ ಒಂದು ರೌಂಡ್​ ವಾಂಕಿಂಗ್​ಗೆ ಹೋಯ್ತು.

ದೇಶೀಯ ಕ್ರಿಕೆಟ್​ನಲ್ಲಿ ಫಾರ್ಮ್​ ಕಂಡುಕೊಳ್ತಾರೆ. ಹೋಮ್​​ಗ್ರೌಂಡ್​ನಲ್ಲಿ ಮನೆಮಗ ಕಮ್​​ಬ್ಯಾಕ್​ ಮಾಡ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಫ್ಯಾನ್ಸ್​ಗೆ ಅಂತಿಮವಾಗಿ ನಿರಾಸೆ ಉಂಟಾಯ್ತು. 6 ರನ್​​ಗಳಿಸಿ ಕೊಹ್ಲಿ ಪೆವಿಲಿಯನ್​ ಸೇರಿದ್ರೆ, ಸ್ಟ್ಯಾಂಡ್​ನಲ್ಲಿದ್ದ ಫ್ಯಾನ್ಸ್​ ಬೇಸರದಲ್ಲಿ ಮನೆ ಕಡೆಗೆ ಹೊರಟ್ರು.

ಕೊಹ್ಲಿ ಫ್ಲಾಪ್​ ಶೋ ನೀಡಿದ್ದಕ್ಕೆ ಫ್ಯಾನ್ಸ್​ ಮನೆ ಕಡೆಗೆ ಹೆಜ್ಜೆ ಹಾಕಿದ್ರೂ ಕೂಡ, ಮನದಲ್ಲಿ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ವಿರಾಟ್​ ಕೊಹ್ಲಿ​​ ಕಮ್​​ ಬ್ಯಾಕ್​​ಗೆ ಇನ್ನೊಂದು ಚಾನ್ಸ್​ ಇದೆ ಅನ್ನೋ ಲೆಕ್ಕಾಚಾರ ಹಾಕಿದ್ರು. ಹೀಗಾಗಿ ಡೆಲ್ಲಿಯ ಸೆಕೆಂಡ್​ ಇನ್ನಿಂಗ್ಸ್ ಬ್ಯಾಟಿಂಗ್​​ ವೇಳೆ ಮತ್ತೆ ಫ್ಯಾನ್ಸ್​ ಸ್ಟೇಡಿಯಂ ಸುತ್ತ ಜಮಾಯಿಸಿದ್ರು. ಆದ್ರೆ, ಕೊಹ್ಲಿಗೆ 2ನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ ಮಾಡೋ ಅವಕಾಶ ಸಿಗಲೇ ಇಲ್ಲ. ಆದ್ದರಿಂದ ಇಂಗ್ಲೆಂಡ್​ ವಿರುದ್ಧ ಏಕದಿನ ಸರಣಿಯಲ್ಲಿ ಕೊಹ್ಲಿಯ ಕಳಪೆ ಫಾರ್ಮ್​​ನದ್ದೇ ಎಲ್ಲರಿಗೂ ದೊಡ್ಡ ಚಿಂತೆ ಆಗಿದೆ.

ಇದನ್ನೂ ಓದಿ:ಒಂದೇ ವರ್ಷದಲ್ಲಿ ಐಪಿಎಲ್​​ನಿಂದ ಬರೋಬ್ಬರಿ 11,769 ಕೋಟಿ ರೂ. ಆದಾಯ; ಹೇಗೆ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment