newsfirstkannada.com

ಜಸ್ಟ್​ ಒಂದೇ ಒಂದು ಮ್ಯಾಚ್​.. ಟೀಮ್ ಇಂಡಿಯಾದ ದಿಕ್ಕು ದೆಸೆ ಬದಲಾಗಲಿದೆ, ಏನದು..

Share :

Published June 22, 2024 at 9:55am

  ಇಂಡೋ ಬಾಂಗ್ಲಾ ಕಾದಾಟಕ್ಕೆ ಕೌಂಟ್​ಡೌನ್

  ಗೆದ್ದು ಸೆಮೀಸ್​​​​ಗೇರುವ ಹುಮ್ಮಸ್ಸಿನಲ್ಲಿ ಇಂಡಿಯಾ

  ಸೆಮೀಸ್ ಜೀವಂತವಾಗಿರಿಸಿಕೊಳ್ಳಲು ಬಾಂಗ್ಲಾ ಫೈಟ್​

ಜಸ್ಟ್​ ಒಂದೇ ಒಂದು ಮ್ಯಾಚ್​.. ಇಂದಿನ ಈ ಒಂದು ಮ್ಯಾಚ್​​​​​, ಟೀಮ್ ಇಂಡಿಯಾ ಪಾಲಿಗೆ ಮೋಸ್ಟ್​ ಕ್ರೂಶಿಯಲ್​.. ಈ ಒಂದ್ಯ ಪಂದ್ಯಕ್ಕೆ ಟೀಮ್ ಇಂಡಿಯಾದ ದಿಕ್ಕು ದೆಸೆ ಬದಲಿಸುವ ತಾಕತ್ತಿದೆ. ಹಾಗಾಗಿಯೇ ಇಂದಿನ ಬಾಂಗ್ಲಾ ಎದುರು ಶತಯಾ ಗತಾಯ ಗೆಲ್ಲೋಕೆ ಟೀಮ್ ಇಂಡಿಯಾ ಸ್ಕೆಚ್ ಹಾಕಿದೆ.

ಇಂಡೋ ಬಾಂಗ್ಲಾ ಟೈಗರ್ಸ್ ಕಾದಾಟಕ್ಕೆ ಕೌಂಟ್​ಡೌನ್

ಟಿ20 ವಿಶ್ವಕಪ್​ನ ಮತ್ತೊಂದು ಸವಾಲಿಗೆ ಟೀಮ್ ಇಂಡಿಯಾ ಸಜ್ಜಾಗಿದೆ. ಆಂಟಿಗುವಾದ ಸರ್​​ ವಿವಿಯನ್ ರಿಚರ್ಡ್ಸ್​ ಮೈದಾನದಲ್ಲಿ ಎದುರಾಳಿ ಬಾಂಗ್ಲಾದೇಶವನ್ನು ಎದುರಿಸಲಿದ್ದು, ಈ ಪಂದ್ಯ ಉಭಯ ತಂಡಗಳ ಪಾಲಿಗೂ ಮೋಸ್ಟ್ ಕ್ರೂಶಿಯಲ್ ಆಗಿದೆ. ಇದಕ್ಕೆ ಕಾರಣ ಸೆಮೀಸ್..

ಇದನ್ನೂ ಓದಿ:ಸಾಮೂಹಿಕ ಅ*ಚಾರ.. ಅರೆನಗ್ನ ಸ್ಥಿತಿಯಲ್ಲಿ 1.5 ಕಿಮೀ ಓಡಿಬಂದು ಜೀವ ಉಳಿಸಿಕೊಂಡ ಮಹಿಳೆ

ಈಗಾಗಲೇ ಸೂಪರ್-8ನ ಮೊದಲ ಪಂದ್ಯದಲ್ಲಿ ಗೆದ್ದಿರುವ ಟೀಮ್ ಇಂಡಿಯಾ, ಇಂದು ಬಾಂಗ್ಲಾ ಎದುರು ಗೆದ್ದು ಸೆಮೀಸ್​​ಗೆ ಎಂಟ್ರಿ ನೀಡುವ ಲೆಕ್ಕಚಾರದಲ್ಲಿದೆ. ಅತ್ತ ಆಸಿಸ್​ ಎದುರು ಸೋತ ಬಾಂಗ್ಲಾ, ರೋಹಿತ್ ಪಡೆಯನ್ನ ಮಣಿಸಿ ಸೆಮೀಸ್ ಆಸೆ ಜೀವಂತವಾಗಿರಿಸಿಕೊಳ್ಳುವ ಮಹಾದಾಸೆ ಹೊಂದಿದೆ. ಹೀಗಾಗಿ ಇಂದಿನ ಟೈಗರ್ಸ್ ಹೋರಾಟದಲ್ಲಿ ಯಾರ್ ಗೆಲ್ತಾರೆ ಎಂಬ ಕುತೂಹಲ ಫ್ಯಾನ್ಸ್​ ಮನದಲ್ಲಿ ಮನೆ ಮಾಡಿದೆ.

ಅಜೇಯ ಭಾರತಕ್ಕೆ ಇಂದೇ ಸೆಮೀಸ್​ ಗೇರುವ ಕನಸು..!

ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಸೋಲಿಲ್ಲದ ಸರದಾರನಾಗಿ ಮುನ್ನಗುತ್ತಿದೆ. ಸದ್ಯ ಸೂಪರ್​-8ನಲ್ಲೂ ಸೂಪರ್ ಪರ್ಫಾಮೆನ್ಸ್ ನೀಡ್ತಿರುವ ರೋಹಿತ್ ಹುಡುಗ್ರು, ಬಾಂಗ್ಲಾ ಎದುರು ಗೆಲುವಿನ ಲಯ ಮುಂದುವರಿಸೋ ತವಕದಲ್ಲಿದ್ದಾರೆ. ಆ ಮೂಲಕ ಇಂದೇ ಸೆಮೀಸ್​ ಪ್ಲೇಸ್ ಗ್ಯಾರಂಟಿ ಮಾಡಿಕೊಳ್ಳುವ ಕನಸು ಕಾಣ್ತಿದೆ. ಸೂಪರ್​​-8ನ ಅಂತಿಮ ಕಾದಾಟದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಸವಾಲು ಎದುರಾಗಲಿದೆ. ಹೀಗಾಗಿ ಸೇಫ್ ಆ್ಯಂಡ್ ಸೆಕ್ಯುರ್​ ಆಗಿ ಇಂದೇ, ಸೆಮೀಸ್​ಗೆ ಟಿಕೆಟ್ ಬಹುತೇಕ ಕನ್ಫರ್ಮ್ ಮಾಡಿಕೊಳ್ಳುವ ಪ್ಲಾನ್​ನಲ್ಲಿದೆ.

ಇದನ್ನೂ ಓದಿ:ಮುಂದಿನ ಐದು ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ.. ಹವಾಮಾನ ಇಲಾಖೆ ಎಚ್ಚರಿಕೆ..

ಸೆಮೀಸ್​ ಆಸೆಯ ಭಾರತಕ್ಕೆ ಅದೊಂದೇ ಚಿಂತೆ..!

ಸೆಮೀಸ್ ಕನವರಿಕೆಯಲ್ಲಿರುವ ಟೀಮ್ ಇಂಡಿಯಾ ಬಲಿಷ್ಠವಾಗಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್​ ಬಾಕ್ಸ್​ನ ಟಿಕ್​ ಮಾಡಿದೆ. ಆದ್ರೆ ಟೀಮ್ ಇಂಡಿಯಾದ ಟಾಪ್ ಆರ್ಡರ್ ವೈಫಲ್ಯ ಚಿಂತೆಗೀಡು ಮಾಡಿದೆ. ಬಲವಾಗಬೇಕಿದ್ದ ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ ಆರಂಭಿಕರಾಗಿ ಫೇಲ್ಯೂರ್ ಆಗ್ತಿದ್ದಾರೆ. ದಿಗ್ಗಜ ಬ್ಯಾಟರ್​​ಗಳ ಸತತ ವೈಫಲ್ಯ, ಟೀಮ್ ಇಂಡಿಯಾದ ಹಿನ್ನಡೆಗೆ ಕಾರಣವಾಗಿದ್ದು, ಇನ್ನಾದ್ರೂ ಸಿಡಿದೇಳಬೇಕಿದೆ.

ಕುಂಟುತ್ತಾ ಸಾಗಿದ ಬಾಂಗ್ಲಾ ಬಲವೇ ಬೌಲಿಂಗ್

ಸೋಲಿಲ್ಲದ ಸರದಾರ ಟೀಮ್ ಇಂಡಿಯಾ ಕಥೆ ಒಂದಾದ್ರೆ, ಟೂರ್ನಿಯಲ್ಲಿ ಸೋಲು, ಗೆಲುವಿನ ರುಚಿಯುಂಡಿರುವ ಬಾಂಗ್ಲಾ ಕಥೆ ವಿಭಿನ್ನವಾಗಿದೆ. ಅದರಲ್ಲೂ ಬಾಂಗ್ಲಾ ಬ್ಯಾಟರ್​​ಗಳ ವೈಫಲ್ಯ ಇನ್ನಿಲ್ಲದೆ ಕಾಡ್ತಿದೆ. ಲಿಟನ್ ದಾಸ್, ಸೌಮ್ಯ ಸರ್ಕಾರ್, ಶಕೀಬ್ ಅಲ್ ಹಸನ್​​ರನ್ನ ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸುವಂತಿಲ್ಲ.

ಇದನ್ನೂ ಓದಿ:ಸೆಮಿ ಫೈನಲ್​ ಎಂಟ್ರಿಗೆ ಟೀಂ ಇಂಡಿಯಾಗೆ ಇವತ್ತು ಗೆಲ್ಲಲೇಬೇಕು.. ಈ ಆಟಗಾರನಿಗೆ ಕೊಕ್..

ಬಾಂಗ್ಲಾ ಬಲವೇ ಬೌಲಿಂಗ್ ಅಟ್ಯಾಕ್​.. ವೇಗಿ ಮುಸ್ತಾಫಿಜುರ್ ರೆಹಮಾನ್, ತಂಝಿಮ್ ಹಸನ್ ಸಾಕಿಬ್ ಜೊತೆ ಸ್ಪಿನ್ನರ್​ ರಿಶಾದ್ ಹೊಸೈನ್ ಬಿಗ್ ಮ್ಯಾಚ್ ವಿನ್ನರ್​ಗಳಾಗಿದ್ದಾರೆ. ಲೀಗ್​ ಸ್ಟೇಜ್​ನಿಂದಲೂ ಅದ್ಭುತ ದಾಳಿ ಸಂಘಟಿಸ್ತಿರುವ ಇವರು, ಯಾವುದೇ ಕ್ಷಣದಲ್ಲಾದರು ಟೀಮ್ ಇಂಡಿಯಾಗೆ ಕಂಟಕವಾಗಬಲ್ಲರು.

ಡು ಆರ್​ ಡೈ ಮ್ಯಾಚ್.. ಸೋತರೆ ಬಾಂಗ್ಲಾ ಔಟ್​..!

ಸೂಪರ್​-8ಗೆ ಅಂಬೆಗಾಲಿನ ಹೆಜ್ಜೆ ಹಾಕಿದ್ದ ಬಾಂಗ್ಲಾ, ಆಸ್ಟ್ರೇಲಿಯಾ ಎದುರಿನ ಸೂಪರ್​ ಫೈಟ್​​ನಲ್ಲೇ ಮುಖಭಂಗ ಅನುಭವಿಸಿದೆ. ಇದರೊಂದಿಗೆ ಡು ಆರ್ ಡೈ ಪರಿಸ್ಥಿತಿಗೆ ಸಿಲುಕಿರುವ ಬಾಂಗ್ಲಾ, ಸೆಮೀಸ್​​ ಜೀವಂತವಾಗಿರಿಸಿಕೊಳ್ಳಲು ಶತಯಾ ಗತಾಯ ಗೆಲ್ಲಲೇಬೇಕಿದೆ. ಅಕಸ್ಮಾತ್ ಇಂದು ಸೋಲಿನ ಮುಖಭಂಗ ಅನುಭವಿಸಿದ್ರೆ ಟಿ20 ವಿಶ್ವಕಪ್​ನಿಂದ ಹೊರ ಬೀಳಲಿದೆ. ಹೀಗಾಗಿ ಇಂದು ಯಾವ ರೀತಿಯ ಆಟವಾಡುತ್ತೆ ಅನ್ನೋದು ಭಾರೀ ಕುತೂಹಲ ಹುಟ್ಟಿಹಾಕಿದೆ.

ಇದನ್ನೂ ಓದಿ:ಸ್ನೇಹಿತನ ಮೇಲೆ ಪ್ರೀತಿಯ ವ್ಯಾಮೋಹ.. ಗುಟ್ಟಾಗಿ ಗೆಳೆಯನ ಲಿಂಗವನ್ನೇ ಬದಲಾಯಿಸಿಬಿಟ್ಟ ಪ್ರಿಯಕರ..!

ಒಟ್ನಲ್ಲಿ.. ಇತ್ತ ಟೀಮ್ ಇಂಡಿಯಾ ಒಂದು ಗೆಲುವಿನೊಂದಿಗೆ ಸೆಮೀಸ್​ಗೆ ಎಂಟ್ರಿ ನೀಡೋ ಲೆಕ್ಕಚಾರದಲ್ಲಿದ್ರೆ, ಅತ್ತ ಬಾಂಗ್ಲಾ, ಭಾರತಕ್ಕೆ ಟಕ್ಕರ್ ನೀಡಿ ಜೀವಂತವಾಗಿರಿಸಿಕೊಳ್ಳುವ ಮಹಾದಾಸೆಯಲ್ಲಿದೆ. ಹೀಗಾಗಿ ಇಂದಿನ ರಣಕಣದಲ್ಲಿ ಯಾರ್ ಗೆಲ್ತಾರೆ ಅನ್ನೋದು ಕಾದುನೋಡಬೇಕಿದೆ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಜಸ್ಟ್​ ಒಂದೇ ಒಂದು ಮ್ಯಾಚ್​.. ಟೀಮ್ ಇಂಡಿಯಾದ ದಿಕ್ಕು ದೆಸೆ ಬದಲಾಗಲಿದೆ, ಏನದು..

https://newsfirstlive.com/wp-content/uploads/2024/06/BAN-VS-IND-1.jpg

Load More