/newsfirstlive-kannada/media/post_attachments/wp-content/uploads/2025/03/IND-VS-AUS.jpg)
ನಾಳೆ ನಡೆಯಲಿರೋ 2025ರ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಸೆಮಿಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸಲಿವೆ. ಹೇಗಾದ್ರೂ ಮಾಡಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಹಳೆಯ ಸೇಡು ತೀರಿಸಿಕೊಳ್ಳಲು ಟೀಮ್​ ಇಂಡಿಯಾ ಆಟಗಾರರು ಮುಂದಾಗಿದ್ದಾರೆ.
ಇತ್ತೀಚೆಗೆ ನಡೆದ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ ಟೀಮ್​ ಇಂಡಿಯಾ 44 ರನ್​ಗಳಿಂದ ಗೆದ್ದು ಬೀಗಿತ್ತು. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನದಲ್ಲಿದೆ. ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದೆ. ಈ ಪಂದ್ಯದಲ್ಲಿ ಆ 2 ಸೋಲುಗಳ ಲೆಕ್ಕಾ ಚುಕ್ತ ಮಾಡಲು ಟೀಮ್​ ಇಂಡಿಯಾ ಪ್ಲಾನ್​ ಮಾಡಿದೆ.
ಈ ಹಿಂದೆ ಹಲವು ಬಾರಿ ಐಸಿಸಿ ಮೆಗಾ ಟೂರ್ನಿ ಫೈನಲ್​ ಪಂದ್ಯಗಳಲ್ಲಿ ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ಮುಖಾಮುಖಿ ಆಗಿವೆ. ಕಳೆದ ಎರಡು ಸಲ ಐಸಿಸಿ ಟೂರ್ನಿಗಳಲ್ಲಿ ಉಭಯ ತಂಡಗಳು ಸೆಣಸಾಡಿದ್ದವು. ಆ ಎರಡೂ ಪಂದ್ಯಗಳಲ್ಲಿ ಟೀಮ್​​ ಇಂಡಿಯಾ ಹೀನಾಯ ಸೋಲು ಕಂಡಿದೆ.
ಎರಡು ಬಾರಿ ಸೋತಿದ್ದ ಟೀಮ್​ ಇಂಡಿಯಾ
ವಿಶ್ವಟೆಸ್ಟ್ ಚಾಂಪಿಯನ್​ಶಿಪ್​​ ಫೈನಲ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್​ ಇಂಡಿಯಾ ಸೋತಿತ್ತು. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​ನಲ್ಲಿ 469 ರನ್ ಕಲೆ ಹಾಕಿತು. ಇದಾದ ಬಳಿಕ ಬ್ಯಾಟ್​ ಮಾಡಿದ ಟೀಮ್​ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 296 ರನ್​ಗಳಿಗೆ ಆಲೌಟ್​ ಆಗಿತ್ತು. 2ನೇ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 8 ವಿಕೆಟ್​ಗೆ 270 ರನ್ ಗಳಿಸಿ ಡಿಕ್ಲೇರ್​ ಮಾಡಿಕೊಂಡಿತು. ಆಸ್ಟ್ರೇಲಿಯಾ ನೀಡಿದ ಬೃಹತ್​ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾ 2ನೇ ಇನ್ನಿಂಗ್ಸ್​ನಲ್ಲಿ 234 ರನ್​ಗೆ ಆಲೌಟ್​​ ಆಗಿ ಸೋತಿದೆ. ಒಮ್ಮೆ ಏಕದಿನ ವಿಶ್ವಕಪ್ ಫೈನಲ್​ನಲ್ಲೂ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು.
ಟೀಮ್​ ಇಂಡಿಯಾಗೆ ಸುವರ್ಣಾವಕಾಶ
ಇನ್ನು, ಈ ಎರಡು ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಮ್​ ಇಂಡಿಯಾ ಪ್ಲಾನ್​ ಮಾಡಿಕೊಂಡಿದೆ. ಇಷ್ಟೇ ಅಲ್ಲ ನಾಳೆ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಮಣ್ಣು ಮುಕ್ಕಿಸಲು ಸುವರ್ಣಾವಕಾಶ ಇದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us