Advertisment

ಅಗಲಿದ ಕನ್ನಡಿಗನ ಮರೆಯದ ಟೀಂ ಇಂಡಿಯಾ.. ಅಫ್ಘಾನ್ ವಿರುದ್ಧ ಕಪ್ಪು ಪಟ್ಟಿ ಕಟ್ಟಿ ಆಡಿದ ರೋಹಿತ್ ಪಡೆ..

author-image
Ganesh
Updated On
ಅಗಲಿದ ಕನ್ನಡಿಗನ ಮರೆಯದ ಟೀಂ ಇಂಡಿಯಾ.. ಅಫ್ಘಾನ್ ವಿರುದ್ಧ ಕಪ್ಪು ಪಟ್ಟಿ ಕಟ್ಟಿ ಆಡಿದ ರೋಹಿತ್ ಪಡೆ..
Advertisment
  • ಸೂಪರ್ 8 ಮೊದಲ ಪಂದ್ಯ ಗೆದ್ದು ಬೀಗದ ಭಾರತ
  • ಅಪ್ಘಾನ್ ವಿರುದ್ಧ ಭಾರತಕ್ಕೆ 47 ರನ್​ಗಳ ಗೆಲುವು
  • ನಾಳೆ ಬಾಂಗ್ಲಾದೇಶದ ವಿರುದ್ಧ ಭಾರತ ಸೆಣಸಾಟ

ವಿಶ್ವಕಪ್​ನ ಸೂಪರ್ ​​8 ಅಭಿಯಾನವನ್ನು ಭಾರತ ತಂಡ ನಿನ್ನೆಯಿಂದ ಶುರು ಮಾಡಿದೆ. ಅಫ್ಘಾನಿಸ್ತಾನದ ವಿರುದ್ಧ 47 ರನ್​ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ವಿಶ್ವಕಪ್ ಗೆಲ್ಲುವ ಫೆವರಿಟ್ ತಂಡ ಎಂದು ಸಾರಿ ಹೇಳಿದೆ.

Advertisment

ಇನ್ನು ನಿನ್ನೆಯ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ಕೈಗೆ ಕಪ್ಪು​​ ಪಟ್ಟಿಕಟ್ಟಿ ಆಡಿದರು. ಅದಕ್ಕೆ ಕಾರಣ ಭಾರತ ಟೆಸ್ಟ್ ತಂಡದ ಮಾಜಿ ಆಟಗಾರ ಡೆವಿಡ್ ಜಾನ್ಸನ್​ ನಿಧನರಾಗಿರೋದು. ಅವರ ಅಗಲಿಕೆಗೆ ಸಂತಾಪ ಸೂಚಿಸುವ ಸಂಕೇತವಾಗಿ ಕಪ್ಪುಪಟ್ಟಿ ಕಟ್ಟಿಕೊಂಡು ಆಡಿದ್ದಾರೆ. ವಿರಾಟ್ ಕೊಹ್ಲಿ, ಕ್ಯಾಪ್ಟನ್ ರೋಹಿತ್ ಶರ್ಮಾ ಇಬ್ಬರು ಕಪ್ಪು ಪಟ್ಟಿ ಧರಿಸಿದ್ದರು.

ಇದನ್ನೂ ಓದಿ:ಕುಡಿಯಲು ನೀರು ತುಂಬಿಸಿಕೊಳ್ತಿದ್ದಾಗ.. ಟ್ಯಾಂಕರ್​​ ಒಳಗೆ 25 ವರ್ಷದ ಮಹಿಳೆಯ ಶವ ಪತ್ತೆ..

ಟೀಂ ಇಂಡಿಯಾ ಪರ 1996ರಲ್ಲಿ ಭಾರತದ ಪರ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದ ಕನ್ನಡಿಗ ಡೆವಿಡ್ ಜಾನ್ಸನ್, ನಿನ್ನೆ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ತಾವು ವಾಸಿಸುತ್ತಿದ್ದ 4ನೇ ಮಹಡಿಯಿಂದ ಹಾರಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisment

ಇದನ್ನೂ ಓದಿ:ಅಂದು ಭಾರತ ತಂಡದಲ್ಲಿ 7 ಮಂದಿ ಕರ್ನಾಟಕದವರು.. ಕನ್ನಡಿಗ ಜಾನ್ಸನ್ ಅವ್ರ ಕ್ರಿಕೆಟ್ ಬದುಕಿಗೆ ಮುಳುವಾಗಿದ್ದೇ ಅಲ್ಲಿ..

ಭಾರತದ ಪರ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದ ಡೆವಿಡ್.. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ವಿರುದ್ಧ ಪಂದ್ಯಗಳನ್ನು ಆಡಿ ಮೂರು ವಿಕೆಟ್ ಪಡೆದುಕೊಂಡಿದ್ದರು. ಫಸ್ಟ್​ ಕ್ಲಾಸ್​ ಕ್ರಿಕೆಟ್​ನಲ್ಲಿ 39 ಪಂದ್ಯಗಳನ್ನು ಆಡಿ, 125 ವಿಕೆಟ್ ಪಡೆದಿದ್ದರು. ಲಿಸ್ಟ್ ಎ ಗೇಮ್​​ಗಳಲ್ಲಿ 41 ವಿಕೆಟ್ ಪಡೆದಿದ್ದರು. 1992 ರಿಂದ 2002ರವರೆಗೆ ಕರ್ನಾಟಕ ಪರ ಪಂದ್ಯಗಳನ್ನು ಆಡಿದ್ದರು.

ಇದನ್ನೂ ಓದಿ:ದರ್ಶನ್ ಕೇಸ್​​ನಲ್ಲಿ ಯಾರ ಮಾತಿಗೂ CM ಡೋಂಟ್‌ಕೇರ್.. ಸಿದ್ದರಾಮಯ್ಯರ ದೃಢ ನಿರ್ಧಾರಕ್ಕೆ ಇದೆ 5 ಕಾರಣ..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment