/newsfirstlive-kannada/media/post_attachments/wp-content/uploads/2024/06/TEAM_INDIA-1.jpg)
ಇಂದು ಗಯಾನಾ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯಲಿರೋ 2024ರ ಟಿ20 ವಿಶ್ವಕಪ್ ಸೆಮಿ ಫೈನಲ್ ಹೈವೋಲ್ಟೇಜ್ ಪಂದ್ಯದಲ್ಲಿ ಇಂಗ್ಲೆಂಡ್, ಟೀಮ್ ಇಂಡಿಯಾ ಮುಖಾಮುಖಿ ಆಗಲಿವೆ. ಫೈನಲ್ ಪ್ರವೇಶಕ್ಕೆ ಎರಡು ತಂಡಗಳಿಗೂ ಇಂದಿನ ಪಂದ್ಯ ಬಹಳ ಮಹತ್ವದ್ದಾಗಿದೆ.
2024ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸತತ 6 ಗೆಲುವು ಸಾಧಿಸಿದೆ. ಗ್ರೂಮ್ ಸ್ಟೇಜ್ನಲ್ಲಿ ಟೀಮ್ ಇಂಡಿಯಾ 3 ಪಂದ್ಯ ಗೆದ್ದು ಸೂಪರ್ 8ಗೆ ಲಗ್ಗೆ ಇಟ್ಟಿತ್ತು. ನಂತರ ಈ ಸುತ್ತಿನಲ್ಲೂ ಅಫ್ಘಾನ್, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧವೂ ಗೆದ್ದ ಟೀಮ್ ಇಂಡಿಯಾ ಸೆಮಿ ಫೈನಲ್ಗೆ ಎಂಟ್ರಿ ನೀಡಿದೆ. ಸದ್ಯ ಲಭ್ಯವಾಗಿರೋ ಅಂಕಿ-ಅಂಶಗಳ ಪ್ರಕಾರ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಗೆಲ್ಲೋದು ಪಕ್ಕಾ ಆಗಿದೆ.
ಮಳೆಯಿಂದ ಪಂದ್ಯ ರದ್ದಾದ್ರೂ ಟೀಮ್ ಇಂಡಿಯಾ ಫೈನಲ್ಗೆ..!
ಜೂನ್ 27 ರಂದು ಗಯಾನಾದಲ್ಲಿ ಸುಮಾರು 89 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆ ಇದೆ. ಟಿ20 ವಿಶ್ವಕಪ್ 2024ರ ಮೊದಲ ಸೆಮಿಫೈನಲ್‌ಗೆ ಮೀಸಲು ದಿನ ಇರಿಸಲಾಗಿತ್ತು. ಆದರೆ ಎರಡನೇ ಸೆಮಿ ಫೈನಲ್ಗೆ ಯಾವುದೇ ಮೀಸಲು ದಿನ ಇಲ್ಲ. ಹಾಗಾಗಿ ಇಂದು ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದ್ರೆ ಟೀಮ್ ಇಂಡಿಯಾಗೆ ಗುಡ್ನ್ಯೂಸ್ ಇದೆ. ಇಂಗ್ಲೆಂಡ್ ವಿರುದ್ಧ ಪಂದ್ಯ ರದ್ದಾದ್ರೆ, ಟೀಮ್ ಇಂಡಿಯಾ ನೇರ ಫೈನಲ್ ಪ್ರವೇಶ ಮಾಡಲಿದೆ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಸೆಮಿ ಫೈನಲ್.. ಟೀಮ್ ಇಂಡಿಯಾಗೆ ಭರ್ಜರಿ ಗುಡ್ನ್ಯೂಸ್!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ