/newsfirstlive-kannada/media/post_attachments/wp-content/uploads/2024/05/Team-India_m.jpg)
ಗಯಾನಾ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್​​ ಸೆಮಿ ಫೈನಲ್​ ಪಂದ್ಯದಲ್ಲಿ ಇಂಗ್ಲೆಂಡ್​​, ಟೀಮ್​ ಇಂಡಿಯಾ ಸೆಣಸಲಿವೆ. ಫೈನಲ್​ಗೆ ಹೋಗಲು ಇಂದಿನ ಪಂದ್ಯ ಟೀಮ್​ ಇಂಡಿಯಾ ಹೇಗಾದ್ರೂ ಗೆಲ್ಲಲೇಬೇಕಿದೆ.
2024ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸತತ 6 ಗೆಲುವು ಸಾಧಿಸಿದೆ. ಗ್ರೂಮ್​ ಸ್ಟೇಜ್​​​ನಲ್ಲಿ ಟೀಮ್​ ಇಂಡಿಯಾ 3 ಪಂದ್ಯ ಗೆದ್ದು ಸೂಪರ್ 8ಗೆ ಲಗ್ಗೆ ಇಟ್ಟಿತ್ತು. ನಂತರ ಈ ಸುತ್ತಿನಲ್ಲೂ ಅಫ್ಘಾನ್​, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧವೂ ಗೆದ್ದ ಟೀಮ್​ ಇಂಡಿಯಾ ಸೆಮಿ ಫೈನಲ್​ಗೆ ಎಂಟ್ರಿ ನೀಡಿದೆ. ಸದ್ಯ ಲಭ್ಯವಾಗಿರೋ ಅಂಕಿ-ಅಂಶಗಳ ಪ್ರಕಾರ ಇಂಗ್ಲೆಂಡ್​​ ವಿರುದ್ಧ ಟೀಮ್​ ಇಂಡಿಯಾ ಗೆಲ್ಲೋದು ಪಕ್ಕಾ ಆಗಿದೆ.
ಏನ್​ ಹೇಳ್ತಿವೆ ಭಾರತದ ಅಂಕಿ-ಅಂಶಗಳು?
ವೆಸ್ಟ್ ಇಂಡೀಸ್​ನಲ್ಲಿರೋ ಗಯಾನಾ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಇಲ್ಲಿಯವರೆಗೆ ಒಟ್ಟು 3 ಟಿ20 ಪಂದ್ಯಗಳನ್ನು ಆಡಿದೆ. ಅದರಲ್ಲಿ ಟೀಮ್ ಇಂಡಿಯಾ 2 ಪಂದ್ಯ ಗೆದ್ದಿದ್ದು ಒಂದರಲ್ಲಿ ಮಾತ್ರ ಸೋತಿದೆ.
ಇಂಗ್ಲೆಂಡ್ ಅಂಕಿ-ಅಂಶಗಳು ಹೇಗಿವೆ?
ಇಂಗ್ಲೆಂಡ್​​ ಟೀಮ್​ಗೆ ಗಯಾನಾ ಮೈದಾನದಲ್ಲಿ ಯಶಸ್ಸು ಬಹಳ ಕಡಿಮೆ. ಇಲ್ಲಿಯವರೆಗೆ ಇಂಗ್ಲೆಂಡ್ ಕೇವಲ ಒಂದು ಪಂದ್ಯ ಆಡಿದ್ದು, ಅದರಲ್ಲೂ ಹೀನಾಯ ಸೋಲು ಕಂಡಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us