newsfirstkannada.com

ರೋಚಕ ಪಂದ್ಯದ ಸೂಪರ್​ ಓವರ್​​ನಲ್ಲಿ ಅಫ್ಘಾನ್​​ ವಿರುದ್ಧ ಗೆದ್ದು ಬೀಗಿದ ಭಾರತ

Share :

Published January 17, 2024 at 11:22pm

    ಅಫ್ಘಾನ್​​, ಟೀಂ ಇಂಡಿಯಾ ಮಧ್ಯೆ ಮೂರನೇ ಟಿ20

    ರೋಚಕ ಪಂದ್ಯದಲ್ಲಿ ಸೂಪರ್​ ಓವರ್​ನಲ್ಲಿ ಗೆದ್ದ ಭಾರತ

    ಟೀಂ ಇಂಡಿಯಾವನ್ನು ಗೆಲ್ಲಿಸಿದ ಕ್ಯಾಪ್ಟನ್​ ರೋಹಿತ್​ ಶರ್ಮಾ

ಇಂದು ಎಂ. ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಸೂಪರ್​ ಓವರ್​​ನಲ್ಲಿ ಟೀಂ ಇಂಡಿಯಾ ಅಫ್ಘಾನ್​​ ತಂಡದ ವಿರುದ್ಧ ಗೆದ್ದು ಬೀಗಿದೆ. 2ನೇ ಬಾರಿಗೆ ನಡೆದ ಸೂಪರ್​ ಓವರ್​ ಪಂದ್ಯದಲ್ಲಿ ಟೀಂ ಇಂಡಿಯಾ 12 ರನ್​ ಟಾರ್ಗೆಟ್​​ ನೀಡಿತ್ತು. ಅಫ್ಘಾನ್​​ ಕೇವಲ 1 ರನ್​ಗೆ ಆಲೌಟ್​ ಆಗಿದೆ. ಇದರ ಪರಿಣಾಮ ಟೀಂ ಇಂಡಿಯಾ 10 ರನ್​ನಿಂದ ಗೆದ್ದು ಬೀಗಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಕಾದಿತ್ತು. ಆರಂಭದಲ್ಲೇ ಟೀಂ ಇಂಡಿಯಾ ಸಾಲು ಸಾಲು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಯಶಸ್ವಿ ಜೈಸ್ವಾಲ್​​ ಕೇವಲ 4 ರನ್​ಗೆ ಔಟ್​ ಆದರು.

ವಿರಾಟ್​ ಕೊಹ್ಲಿ ಡಕೌಟ್​ ಆಗಿದ್ದಾರೆ. ಸಂಜು ಸ್ಯಾಮ್ಸನ್​ ಕೂಡ ಡಕೌಟ್​ ಆಗಿದ್ದು, ಶಿವಂ ದುಬೆ ಮೂರನೇ ಪಂದ್ಯದಲ್ಲಿ ಕೈಕೊಟ್ಟಿದ್ದಾರೆ.

ಆರಂಭದಿಂದಲೂ ಏಕಾಂಗಿ ಹೋರಾಟ ನಡೆಸಿದ ಕ್ಯಾಪ್ಟನ್​ ರೋಹಿತ್​ ಶರ್ಮಾ ಕೇವಲ 69 ಬಾಲ್​ನಲ್ಲಿ 8 ಸಿಕ್ಸರ್​​, 11 ಫೋರ್​ ಸಮೇತ 121 ರನ್​ ಚಚ್ಚಿದ್ರು. ಈ ಮೂಲಕ ಟಿ20 ಕ್ರಿಕೆಟ್​​ನಲ್ಲೇ ರೋಹಿತ್​ ತನ್ನ 5ನೇ ಶತಕ ದಾಖಲಿಸಿದ್ರು.

ಇನ್ನೊಂದೆಡೆ ಅಬ್ಬರಿಸಿದ ರಿಂಕು ಸಿಂಗ್​​ ಕೇವಲ 39 ಬಾಲ್​ನಲ್ಲಿ 6 ಸಿಕ್ಸರ್​​, 2 ಫೋರ್​​ ಸಮೇತ 69 ರನ್​ ಚಚ್ಚಿದ್ರು. ಟೀಂ ಇಂಡಿಯಾ 4 ವಿಕೆಟ್​ ನಷ್ಟಕ್ಕೆ 212 ರನ್​ ಪೇರಿಸಿದೆ. ಈ ಮೂಲಕ ಅಫ್ಘಾನ್​ ತಂಡಕ್ಕೆ 213 ರನ್​ ಬಿಗ್​ ಟಾರ್ಗೆಟ್​ ಕೊಟ್ಟಿತ್ತು.

ಇನ್ನು, ಟೀಮ್​ ಇಂಡಿಯಾ ನೀಡಿದ ಗುರಿ ಬೆನ್ನತ್ತಿದ ಅಫ್ಘಾನ್​ ತಂಡವು 20 ಓವರ್​​ನಲ್ಲಿ 6 ವಿಕೆಟ್​ ನಷ್ಟಕ್ಕೆ 212 ರನ್​ ಗಳಿಸಿ ಮ್ಯಾಚ್​ ಟೈ ಆಗಿತ್ತು. ಅಫ್ಘಾನ್​​​ ಪರ ರಹ್ಮಾನುಲ್ಲಾ ಗುರ್ಬಾಜ್​ 50, ಇಬ್ರಾಹಿಂ ಜಾರ್ದಾನ್​​ 50, ಗುಲ್ಬಾದಿನ್​​ ನಯಾಬ್​​ 55, ಮೊಹಮ್ಮದ್​ ನಬಿ 34 ರನ್​ ಗಳಿಸಿದ್ದ.

ರೋಚಕ ಪಂದ್ಯದ ಸೂಪರ್​ ಓವರ್​​ನಲ್ಲಿ ಅಫ್ಘಾನ್​​ ವಿರುದ್ಧ ಗೆದ್ದು ಬೀಗಿದ ಭಾರತ

https://newsfirstlive.com/wp-content/uploads/2024/01/IND_AFG.jpg

Load More