ಆಸ್ಟ್ರೇಲಿಯಾ ವಿರುದ್ಧ ಗೆದ್ದು ಬೀಗಿದ ಭಾರತ; ಚಾಂಪಿಯನ್ಸ್​​ ಟ್ರೋಫಿ ಫೈನಲ್ಸ್​ಗೆ ಟೀಮ್​ ಇಂಡಿಯಾ ಎಂಟ್ರಿ

author-image
Ganesh Nachikethu
Updated On
ಇಂಗ್ಲೆಂಡ್​ ತಂಡದಿಂದ ಭರ್ಜರಿ ಬ್ಯಾಟಿಂಗ್​​; ಟೀಮ್​ ಇಂಡಿಯಾಗೆ ಬಿಗ್​ ಟಾರ್ಗೆಟ್​
Advertisment
  • ಐಸಿಸಿ 2025ರ ಚಾಂಪಿಯನ್ಸ್​ ಟ್ರೋಫಿ ಸೆಮಿಫೈನಲ್ ಪಂದ್ಯ
  • ಆಸ್ಟ್ರೇಲಿಯಾ ವಿರುದ್ಧ ರೋಚಕ ಗೆಲುವು ಸಾಧಿಸಿದ ಭಾರತ!
  • ಚಾಂಪಿಯನ್ಸ್​ ಟ್ರೋಫಿ ಫೈನಲ್​ಗೆ ಟೀಮ್​ ಇಂಡಿಯಾ ಎಂಟ್ರಿ

ಆಸ್ಟ್ರೇಲಿಯಾ ವಿರುದ್ಧ ನಡೆದ ಐಸಿಸಿ 2025ರ ಚಾಂಪಿಯನ್ಸ್​ ಟ್ರೋಫಿ ಸೆಮಿಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಈ ಮೂಲಕ ಭಾರತ ಕ್ರಿಕೆಟ್​ ತಂಡ ಫೈನಲ್​ಗೆ ಎಂಟ್ರಿ ನೀಡಿದೆ.

ಇನ್ನು, ಆಸೀಸ್​ ನೀಡಿದ ಸಾಧಾರಣ ರನ್​ಗಳ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾ ಪರ ಶುಭ್ಮನ್​ ಗಿಲ್​​ ಇನ್ನಿಂಗ್ಸ್​ ಶುರು ಮಾಡಿದರು. ಕಳೆದ ಎರಡು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಟೀಮ್​ ಇಂಡಿಯಾ ಉಪನಾಯಕ ಶುಭ್ಮನ್​​ ಗಿಲ್​ ಸಿಕ್ಕ ಸುವರ್ಣಾವಕಾಶ ಕೈಚೆಲ್ಲಿದರು. ಇಂದು ನಡೆದ ಸೆಮಿಫೈನಲ್​​ ಪಂದ್ಯದಲ್ಲಿ ಕೇವಲ 8 ರನ್​ಗೆ ಔಟಾಗಿದ್ದಾರೆ.

ಮತ್ತೊಂದೆಡೆ ಕ್ಯಾಪ್ಟನ್​ ರೋಹಿತ್​ ಶರ್ಮಾ 28 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು. ಶುಭ್ಮನ್​ ಗಿಲ್​ ವಿಕೆಟ್​ ಬಿದ್ದ ನಂತರ ಕ್ರೀಸ್​ಗೆ ಬಂದ ವಿರಾಟ್​ ಕೊಹ್ಲಿ ಸ್ಫೋಟಕ ಬ್ಯಾಟಿಂಗ್​ ಮಾಡಿದ್ರು. ಆಸ್ಟ್ರೇಲಿಯಾ ತಂಡದ ಬೌಲರ್​ಗಳನ್ನು ಕಾಡಿ ಅಮೋಘ ಬ್ಯಾಟಿಂಗ್​ ಪ್ರದರ್ಶಿಸಿದ್ರು. ತಾನು ಎದುರಿಸಿದ 96 ಬಾಲ್​ನಲ್ಲಿ 84 ರನ್​ ಚಚ್ಚಿದ್ರು. ಈ ಪೈಕಿ 5 ಬೌಂಡರಿಗಳು ಸೇರಿವೆ.

ವಿರಾಟ್​ ಕೊಹ್ಲಿಗೆ ಸಾಥ್​ ನೀಡಿದ ಶ್ರೇಯಸ್​ ಅಯ್ಯರ್​​ 45, ಅಕ್ಷರ್​ ಪಟೇಲ್​​ 27 ರನ್​ ಚಚ್ಚಿದರು. ಕೊನೆವರೆಗೂ ಕ್ರೀಸ್​ನಲ್ಲೇ ನಿಂತು ಆಡಿದ ಕೆ.ಎಲ್​ ರಾಹುಲ್​ 2 ಭರ್ಜರಿ ಸಿಕ್ಸರ್​, 2 ಫೋರ್​ ಸಮೇತ 42 ರನ್​​ ಬಾರಿಸಿದರು. ಹಾರ್ದಿಕ್​ ಪಾಂಡ್ಯ 28, ರವೀಂದ್ರ ಜಡೇಜಾ 2 ರನ್​ ಗಳಿಸಿದರು. ಭಾರತ 48.1 ಓವರ್​ನಲ್ಲೇ 267 ರನ್​ ಗಳಿಸಿ ಗೆದ್ದು ಬೀಗಿದೆ.

ಇದನ್ನೂ ಓದಿ:ರೋಹಿತ್​​, ಗಂಭೀರ್​ ನಂಬಿಕೆ ಮಣ್ಣುಪಾಲು; ಸುವರ್ಣಾವಕಾಶ ಕೈ ಚೆಲ್ಲಿದ ಶುಭ್ಮನ್​ ಗಿಲ್​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment