/newsfirstlive-kannada/media/post_attachments/wp-content/uploads/2025/02/Hardik-Pandya_News1.jpg)
ಇಂದು ಮುಂಬೈನ ವಾಂಖೆಡೆ ಇಂಟರ್​ ನ್ಯಾಷನಲ್​​ ಸ್ಟೇಡಿಯಮ್​ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್​ ತಂಡದ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ.
ಮೊದಲು ಬ್ಯಾಟಿಂಗ್​ ಮಾಡಿದ್ದ ಭಾರತ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 247 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ತಂಡ ಕೇವಲ 97 ರನ್​ಗೆ ಆಲೌಟ್​​ ಆಗಿದೆ. ಟೀಂ ಇಂಡಿಯಾ 5ನೇ ಟಿ20 ಪಂದ್ಯವನ್ನು ಬರೋಬ್ಬರಿ 150 ರನ್​​​ನಿಂದ ಗೆಲ್ಲೋ ಮೂಲಕ ಇತಿಹಾಸ ಸೃಷ್ಟಿಸಿದೆ.
ಭಾರತ ತಂಡದ ಪರ ಮೊಹಮ್ಮದ್ ಶಮಿ 3 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ, ಶಿವಂ ದುಬೆ ಮತ್ತು ಅಭಿಷೇಕ್ ಶರ್ಮಾ ತಲಾ 2 ವಿಕೆಟ್ ಪಡೆದರು. ರವಿ ಬಿಷ್ಣೋಯ್ ಕೂಡ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಟೀಮ್​ ಇಂಡಿಯಾ ಪರ ಓಪನಿಂಗ್​ ಮಾಡಿದ ಸ್ಟಾರ್​ ವಿಕೆಟ್​ ಕೀಪರ್​ ಬ್ಯಾಟರ್​​​ ಸಂಜು ಸ್ಯಾಮ್ಸನ್​​ ಅವರು 2 ಸಿಕ್ಸರ್​​, 1 ಫೋರ್​ ಸಮೇತ 16 ರನ್​ ಚಚ್ಚಿದ್ರು. ಬಳಿಕ ಯುವ ಎಡಗೈ ಬ್ಯಾಟರ್​ ಅಭಿಷೇಕ್​ ಶರ್ಮಾ ಅವರು ತಾನು ಎದುರಿಸಿದ 54 ಬಾಲ್​ನಲ್ಲಿ 13 ಭರ್ಜರಿ ಸಿಕ್ಸರ್​​, 7 ಬ್ಯಾಕ್​ ಟು ಬ್ಯಾಕ್​ ಫೋರ್​​ ಸಮೇತ 135 ರನ್​​ ಸಿಡಿಸಿದ್ರು.
ಬಳಿಕ ಬಂದ ತಿಲಕ್​ ವರ್ಮಾ 1 ಸಿಕ್ಸರ್​, 3 ಫೋರ್​ ಸಮೇತ 24 ರನ್​​, ಶಿವಂ ದುಬೆ 13 ಬಾಲ್​ನಲ್ಲಿ 2 ಸಿಕ್ಸರ್​​, 3 ಫೋರ್​ ಸಮೇತ 30 ರನ್​​ ಬಾರಿಸಿದ್ರು. ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ 9, ರಿಂಕು ಸಿಂಗ್​​ 9 ಮತ್ತು ಅಕ್ಷರ್​ ಪಟೇಲ್​ ಅವರು 15 ರನ್​​ ಗಳಿಸಿದ್ರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us